ವೀಡಿಯೊ..| ಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಕನ್ನಯ್ಯಕುಮಾರಗೆ ಕಪಾಳಮೋಕ್ಷ

ನವದೆಹಲಿ: ಈಶಾನ್ಯ ದೆಹಲಿಯ ಕಾಂಗ್ರೆಸ್ ಅಭ್ಯರ್ಥಿ ಕನ್ಹಯ್ಯಕುಮಾರ ಅವರು ಶುಕ್ರವಾರ ಮುಂಬರುವ ಲೋಕಸಭೆ ಚುನಾವಣೆ 2024 ರ ಪ್ರಚಾರ ಮಾಡುತ್ತಿದ್ದಾಗ ಯುವಕನೊಬ್ಬ ಅವರಿಗೆ ಕಪಾಳಮೋಕ್ಷ ಮಾಡಿದ ಘಟನೆ ನಡೆದಿದೆ. ಈ ಘಟನೆಯ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಮೂಲಗಳ ಪ್ರಕಾರ ಈ ಸಂಬಂಧ ಇಬ್ಬರು ಆರೋಪಿಗಳನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ.
ಕನ್ನಯ್ಯಕುಮಾರ ಅವರಿಗೆ ಕಪಾಳಮೋಕ್ಷ ಮಾಡುವುದನ್ನು ತೋರಿಸುವ ವೈರಲ್ ವೀಡಿಯೊ ಪ್ರಕಾರ, ಒಬ್ಬ ವ್ಯಕ್ತಿ “ಕನ್ಹಯ್ಯಾ ಪೀಟನೆ ವಾಲಾ ಹೈ” (ಕನ್ಹಯ್ಯ ಅವರನ್ನು ಹೊಡೆಯಲಿದ್ದಾನೆ) ಎಂದು ಹೇಳುವುದನ್ನು ಕೇಳಬಹುದು. ಇದಾದ ಬೆನ್ನಲ್ಲೇ ಕಪ್ಪು ಟೀ ಶರ್ಟ್‌ ಧರಿಸಿದ್ದ ಯುವಕನೊಬ್ಬ ಮಾಲೆ ಹಾಕುವ ನೆಪದಲ್ಲಿ ಕನ್ಹಯ್ಯಾ ಅವರ ಹತ್ತಿರ ಹೋಗಿ ಕಾಂಗ್ರೆಸ್ ಮುಖಂಡನಿಗೆ ಕಪಾಳಮೋಕ್ಷ ಮಾಡಿದ್ದಾನೆ.

ಘಟನೆ ಬಳಿಕ ದೂರು ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ದೂರಿನ ಪ್ರಕಾರ, ಕಾಂಗ್ರೆಸ್ ಅಭ್ಯರ್ಥಿಯು ನ್ಯೂ ಉಸ್ಮಾನ್‌ಪುರದ ಸ್ವಾಮಿ ಸುಬ್ರಮಣ್ಯಂ ಭವನದ ಎಎಪಿ ಕಚೇರಿಯಲ್ಲಿ ಸಭೆಯಲ್ಲಿದ್ದರು ಎಂದು ಕಂಡುಬಂದಿದೆ.
ಎಎಪಿ ಕೌನ್ಸಿಲರ್ ಛಾಯಾ ಶರ್ಮಾ ಸಭೆ ಆಯೋಜಿಸಿದ್ದರು.

ಪ್ರಮುಖ ಸುದ್ದಿ :-   S-400 ಬಿಡಿ ; ವಾಯು ರಕ್ಷಣೆ ಹೆಚ್ಚಿಸಲು ಭಾರತ ಶೀಘ್ರವೇ ರಷ್ಯಾದ ಘಾತಕ S-500 ಖರೀದಿಸಬಹುದು ; ಎರಡರ ಮಧ್ಯದ ಪ್ರಮುಖ ವ್ಯತ್ಯಾಸ ಇಲ್ಲಿದೆ

ಸಭೆಯ ನಂತರ ಕೆಲವರು ಕಾಂಗ್ರೆಸ್ ನಾಯಕನಿಗೆ ಹಾರ ಹಾಕಲು ಬಂದಾಗ ಕನ್ಹಯ್ಯಾಕುಮಾರ ಅವರನ್ನು ಬೀಳ್ಕೊಡಲು ಶರ್ಮಾ ಕೆಳಗೆ ಬಂದರು. “ಆದರೆ, ಅವರಿಗೆ ಮಾಲೆ ಹಾಕಿದ ನಂತರ, ಕೆಲವರು ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ಮಸಿ ಎರಚಿದರು ಮತ್ತು ಅವರಿಗೆ ಕಪಾಳಮೋಕ್ಷ ಮಾಡಿದ್ದನ್ನು ನೋಡಿದ ಶರ್ಮಾ ಅವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದಾಗ, ಪ್ರೇಕ್ಷಕರು ಅನುಚಿತವಾಗಿ ವರ್ತಿಸಿದರು ಮತ್ತು ಬೆದರಿಕೆ ಹಾಕಿದರು. ಛಾಯಾ ಶರ್ಮಾ ಅವರ ದೂರಿನ ಮೇರೆಗೆ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement