ಹುಬ್ಬಳ್ಳಿ : ನಗರದ ವೀರಾಪುರ ಓಣಿಯಲ್ಲಿ ಇತ್ತೀಚೆಗೆ ನಡೆದಿದ್ದ ಅಂಜಲಿ ಅಂಬಿಗೇರ ಹತ್ಯೆಯಿಂದ ಮಮನೊಂದು ಆಕೆಯ ಸಹೋದರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ ಎಂದು ವರದಿಯಾಗಿದೆ. ಅವರನ್ನು ಸ್ಥಳೀಯರು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಶನಿವಾರ (ಮೇ 18) ಅಂಜಲಿ ಹತ್ಯೆ ಖಂಡಿಸಿ ನಗರದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಅಂಜಲಿ ಸಹೋದರಿ ಯಶೋಧಾ ಎಂಬವರು ಪ್ರತಿಭಟನೆ ವೇಳೆ ಸಹ ಯುವತಿ ತೀವ್ರ ಅಸ್ವಸ್ಥಗೊಂಡು ಪ್ರಜ್ಞೆ ತಪ್ಪಿದ್ದರು ಎಂದು ತಿಳಿದುಬಂದಿದೆ. ನಂತರ ಅಲ್ಲಿದ್ದವರು ಅವರಿಗೆ ಶುಶ್ರೂಷೆ ಮಾಡಿದ ಬಳಿಕ ಮನೆಗೆ ಕಳುಹಿಸಿಕೊಟ್ಟಿದ್ದರು, ಮನೆಗೆ ಬಂದ ಕೆಲ ಹೊತ್ತಿನಲ್ಲಿ ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ. ವಿಷಯ ಗೊತ್ತಾದ ನಂತರ ಸ್ಥಳೀಯರು ತಕ್ಷಣವೇ ಅವರನ್ನು ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಹೇಳಲಾಗಿದೆ.
ವೀರಾಪುರ ಓಣಿಯಲ್ಲಿ ಮನೆಗೆ ನುಗ್ಗಿ ಅಂಜಲಿ ಅಂಬಿಗೇರ (21) ಎಂಬವರನ್ನು ಆರೋಪಿ ಗಿರೀಶ ಅಲಿಯಾಸ್ ವಿಶ್ವ ಚಾಕುವಿನಿಂದ ಇರಿದು ಕೊಲೆ ಮಾಡಿದ್ದ. ಆಕೆಯ ಅಜ್ಜಿ ಮತ್ತು ಇಬ್ಬರು ಸಹೋದರಿಯರ ಮುಂದೆ ಭೀಕರವಾಗಿ ಕೊಲೆ ಮಾಡಿದ್ದ.
ನಿಮ್ಮ ಕಾಮೆಂಟ್ ಬರೆಯಿರಿ