ಆಭರಣ ಮಳಿಗೆ ಮೇಲೆ ಐಟಿ ದಾಳಿ ; 26 ಕೋಟಿ ರೂ. ನಗದು ಜಪ್ತಿ

ಮುಂಬೈ: ಮಹಾರಾಷ್ಟ್ರದ ನಾಸಿಕ್ ಮೂಲದ ಸುರಾನಾ ಜ್ಯುವೆಲರ್ಸ್ ಮಾಲೀಕರು ಅಘೋಷಿತ ವಹಿವಾಟು ನಡೆಸಿದ ಆರೋಪದ ಆದಾಯ ತೆರಿಗೆ ಇಲಾಖೆ ಮೇಲೆ ಭಾನುವಾರ ಸುರಾನಾ ಜ್ಯುವೆಲರ್ಸ್ ಮೇಲೆ ದಾಳಿ ನಡೆಸಿದೆ. ಐಟಿ ಇಲಾಖೆ ಅಧಿಕಾರಿಗಳ ಪ್ರಕಾರ, ಸುಮಾರು 26 ಕೋಟಿ ರೂಪಾಯಿ ನಗದು ಮತ್ತು 90 ಕೋಟಿ ರೂಪಾಯಿ ಮೌಲ್ಯದ ಲೆಕ್ಕಕ್ಕೆ ಸಿಗದ ಸಂಪತ್ತಿನ ದಾಖಲೆಗಳನ್ನು ಶೋಧದ ವೇಳೆ ವಶಪಡಿಸಿಕೊಳ್ಳಲಾಗಿದೆ ಎಂದು ವರದಿಯಾಗಿದೆ.
ಈ ದಾಳಿ ನಡೆಸಲು ಆದಾಯ ತೆರಿಗೆ ಇಲಾಖೆ ವಿವಿಧ ತಂಡಗಳನ್ನು ರಚಿಸಿದ್ದು, ಕುಟುಂಬ ಸದಸ್ಯರ ನಿವಾಸಗಳಲ್ಲಿಯೂ ಶೋಧ ನಡೆಸಲಾಗಿದೆ ಎಂದು ವರದಿಗಳು ಹೇಳಿವೆ.
ಆದಾಯ ತೆರಿಗೆ ಇಲಾಖೆಯ ಈ ಕಾರ್ಯಾಚರಣೆಯು ಸುದೀರ್ಘ ಅವಧಿಯವರೆಗೆ ನಡೆಯಿತು. ಬುಲಿಯನ್ ಟ್ರೇಡರ್ ಬಳಿ ಇಷ್ಟೊಂದು ಮಹತ್ವದ ಆಸ್ತಿ ಪತ್ತೆಯಾಗಿರುವುದು ಚರ್ಚೆಗೆ ಗ್ರಾಸವಾಗಿದೆ. ಪ್ರಸ್ತುತ, ಅಧಿಕಾರಿಗಳು ಉದ್ಯಮಿಯ ಗಣನೀಯ ಸಂಪತ್ತಿನ ಮೂಲವನ್ನು ನಿರ್ಧರಿಸಲು ಪ್ರಯತ್ನಿಸುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಸಂಚಲನ
ಮಹಾರಾಷ್ಟ್ರದಲ್ಲಿ ಕಳೆದ ಕೆಲವು ದಿನಗಳಿಂದ ಆದಾಯ ತೆರಿಗೆ ಇಲಾಖೆ ಅಲರ್ಟ್ ಮೋಡ್‌ನಲ್ಲಿದೆ. ಇತ್ತೀಚೆಗಷ್ಟೇ ನಾಂದೇಡ್‌ನಲ್ಲಿ ಇಲಾಖೆ ದೊಡ್ಡ ಕ್ರಮ ಕೈಗೊಂಡು 170 ಕೋಟಿ ಮೌಲ್ಯದ ಲೆಕ್ಕಕ್ಕೆ ಸಿಗದ ಆಸ್ತಿಯನ್ನು ವಶಪಡಿಸಿಕೊಂಡಿತ್ತು. ಇದಾದ ಬಳಿಕ ಇಂದು ಭಾನುವಾರ ನಾಸಿಕ್ ನಲ್ಲಿ ಇಲಾಖೆ ದೊಡ್ಡ ದಾಳಿ ಮಾಡಿದೆ.
ಆದಾಯ ತೆರಿಗೆ ಇಲಾಖೆಯ ಈ ಕ್ರಮ ಮಹಾರಾಷ್ಟ್ರದಲ್ಲಿ ಸಂಚಲನ ಮೂಡಿಸಿದೆ. ಸಿಕ್ಕಿರುವ ಮಾಹಿತಿ ಪ್ರಕಾರ ನೋಟುಗಳನ್ನು ಎಣಿಸಲು ಆದಾಯ ತೆರಿಗೆ ಇಲಾಖೆಗೆ ಹಲವು ಗಂಟೆಗಳು ಬೇಕಾಯಿತು. ಇದಕ್ಕಾಗಿ ಹಲವು ತಂಡಗಳನ್ನು ಕರೆಸಿಕೊಂಡಿದ್ದು, ನಂತರ ಹೊರಬಂದ ಅಂಕಿ ಅಂಶ ಬೆಚ್ಚಿಬೀಳಿಸಿದೆ.

ಪ್ರಮುಖ ಸುದ್ದಿ :-   ಇದೆಂಥ ಪವಾಡ...| ಒಂದೇ ಗೋಡೆ, 4 ಲೀಟರ್ ಬಣ್ಣ ಬಳಿಯಲು 233 ಕೆಲಸಗಾರರ ಬಳಕೆ...! ಶಾಲೆಯ ಗುತ್ತಿಗೆದಾರನ ಬಿಲ್ ವೈರಲ್‌

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement