ಐಪಿಎಲ್ 2024 ಮುಕ್ತಾಯ : ವಿವಿಧ ಪ್ರಶಸ್ತಿ ವಿಜೇತರು, ತಂಡಗಳು ಪಡೆದ ಬಹುಮಾನದ ಮೊತ್ತದ ಸಂಪೂರ್ಣ ಪಟ್ಟಿ….

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2024 ಮುಕ್ತಾಯಗೊಂಡಿದ್ದು, ಕೋಲ್ಕತ್ತಾ ನೈಟ್ ರೈಡರ್ಸ್ ತಮ್ಮ 3 ನೇ ಪ್ರಶಸ್ತಿಯನ್ನು ಗೆದ್ದುಕೊಂಡರೆ, ಸನ್‌ರೈಸರ್ಸ್ ಹೈದರಾಬಾದ್ ರನ್ನರ್-ಅಪ್ ಪದಕಕ್ಕೆ ತೃಪ್ತಿಪಡಬೇಕಾಯಿತು ಗೆಲುವಿನೊಂದಿಗೆ, ಕೋಲ್ಕತ್ತಾ ನೈಟ್ ರೈಡರ್ಸ್(KKR) 20 ಕೋಟಿ ಬಹುಮಾನವನ್ನು ಪಡೆದುಕೊಂಡಿತು, ಇದೇ ವೇಳೆ ರನ್ನರ್-ಅಪ್ ಆದ ಸನ್‌ರೈಸರ್ಸ್ ಹೈದರಾಬಾದ್ (SRH) 12.5 ಕೋಟಿ ರೂ. ಬಹುಮಾನವನ್ನು ಪಡೆದುಕೊಂಡಿತು. ಐಪಿಎಲ್-2024ರ ಒಟ್ಟು ಬಹುಮಾನದ ಮೊತ್ತವು 46.5 ಕೋಟಿ ರೂ. ಆಗಿತ್ತು, ಇದನ್ನು ವಿಜೇತರು ಮತ್ತು ರನ್ನರ್ ಅಪ್‌ಗಳಿಗೆ ಮಾತ್ರ ವಿತರಿಸಲಾಗಿಲ್ಲ. ಅಂಕಪಟ್ಟಿಯಲ್ಲಿ ಕ್ರಮವಾಗಿ 3 ಮತ್ತು 4ನೇ ಸ್ಥಾನ ಪಡೆದಿದ್ದ ರಾಜಸ್ಥಾನ್ ರಾಯಲ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಬಹುಮಾನದ ಮೊತ್ತವನ್ನು ತಮ್ಮದಾಗಿಸಿಕೊಂಡವು. ಮೂರನೇ ಸ್ಥಾನ ಪಡೆದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 7 ಕೋಟಿ ರೂ. ಹಾಗೂ ಮತ್ತು ನಾಲ್ಕನೇ ಸ್ಥಾನ ಪಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ 6.5 ಕೋಟಿ ರೂ.ಬಹುಮಾನ ನೀಡಲಾಯಿತು.

ಆರ್‌ಸಿಬಿಯ ತಂಡದ ವಿರಾಟ್ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದರೆ, ಪರ್ಪಲ್ ಕ್ಯಾಪ್ ಪಂಜಾಬ್ ಕಿಂಗ್ಸ್ ವೇಗಿ ಹರ್ಷಲ್ ಪಟೇಲ್ ಅವರ ಪಾಲಾಯಿತು. ಈ ಋತುವಿನಲ್ಲಿ ತಮ್ಮ ಸಾಧನೆಗಳಿಗಾಗಿ ಇಬ್ಬರೂ ತಲಾ 10 ಲಕ್ಷ ರೂಪಾಯಿ ಬಹುಮಾನವನ್ನು ಪಡೆದರು.
ಕೊಹ್ಲಿ 15 ಪಂದ್ಯಗಳಲ್ಲಿ 61.75 ಸರಾಸರಿಯಲ್ಲಿ ಒಂದು ಶತಕ ಮತ್ತು ಐದು ಅರ್ಧಶತಕಗಳೊಂದಿಗೆ 741 ರನ್ ಗಳಿಸಿದರು. ಅವರ ಅತ್ಯುತ್ತಮ ಸ್ಕೋರ್ 113* ಮತ್ತು ಅವರ ಸ್ಟ್ರೈಕ್ ರೇಟ್ 154.69 ಆಗಿತ್ತು, ಇದು ಒಂದೇ ಐಪಿಎಲ್ ಋತುವಿನಲ್ಲಿ ಕೊಹ್ಲಿಯ ಇದುವರೆಗಿನ ಅತ್ಯಧಿಕ ಮೊತ್ತವಾಗಿದೆ. ವೇಗಿ ಹರ್ಷಲ್ ಪಟೇಲ್ ಅವರು ಪ್ರತಿ ಓವರಿಗೆ 9.73 ರ ರನ್‌ ರೇಟ್‌ ಮತ್ತು 14 ಪಂದ್ಯಗಳಲ್ಲಿ 19.87 ರ ಸರಾಸರಿಯಲ್ಲಿ 24 ವಿಕೆಟ್‌ಗಳನ್ನು ಪಡೆದ ಪಂದ್ಯಾವಳಿಯಲ್ಲಿ ಅಗ್ರಗಣ್ಯ ಬೌಲರ್‌ ಆಗಿ ಹೊರಹೊಮ್ಮಿದರು.
ಸನ್‌ರೈಸರ್ಸ್‌ನ ನಿತೀಶ್ ಕುಮಾರ್ ರೆಡ್ಡಿ ಅವರ ಆಲ್‌ರೌಂಡ್ ಪ್ರದರ್ಶನಕ್ಕಾಗಿ ಋತುವಿನ ಉದಯೋನ್ಮುಖ ಆಟಗಾರ ಎಂದು ಹೆಸರಿಸಲ್ಪಟ್ಟರೆ, ಕೆಕೆಆರ್ ಅನುಭವಿ ಆಟಗಾರ ಸುನಿಲ ನಾರಾಯಣ ವರ್ಷದ ಅತ್ಯಂತ ಮೌಲ್ಯಯುತ ಆಟಗಾರ ಪ್ರಶಸ್ತಿಯನ್ನು ಪಡೆದರು.

ಪ್ರಮುಖ ಸುದ್ದಿ :-   ಹ್ಯಾರಿಯರ್ ಕಾರು, ನಕಲಿ ಎನ್‌ಎಸ್‌ಜಿ ಕಮಾಂಡೋಗಳು ! ಸೇನೆಯ ಬ್ರಿಗೇಡಿಯರ್ ಸೋಗಿನಲ್ಲಿ ಓಡಾಡುತ್ತಿದ್ದ ಯುವಕ ಬಲೆಗೆ ಬಿದ್ದಿದ್ದೇ ರೋಚಕ

IPL 2024 ರಲ್ಲಿ ಬಹುಮಾನ ವಿಜೇತರ ಸಂಪೂರ್ಣ ಪಟ್ಟಿ:
ಆರೆಂಜ್ ಕ್ಯಾಪ್: ವಿರಾಟ್ ಕೊಹ್ಲಿ – 741 ರನ್ (10 ಲಕ್ಷ ರೂ.)
ಪರ್ಪಲ್ ಕ್ಯಾಪ್: ಹರ್ಷಲ್ ಪಟೇಲ್ – 24 ವಿಕೆಟ್ ( 10 ಲಕ್ಷ ರೂ.)
ಋತುವಿನ ಅತ್ಯಂತ ಮೌಲ್ಯಯುತ ಆಟಗಾರ: ಸುನಿಲ ನಾರಾಯಣ ( 12 ಲಕ್ಷ ರೂ.)
ಸೀಸನ್‌ನ ಅಲ್ಟಿಮೇಟ್ ಫ್ಯಾಂಟಸಿ ಪ್ಲೇಯರ್: ಸುನಿಲ ನಾರಾಯಣ
ಹೆಚ್ಚಿನ 4 ಹೊಡೆದ ಆಟಗಾರ: ಟ್ರಾವಿಸ್ ಹೆಡ್ (64)
ಅತಿ ಹೆಚ್ಚು 6 ಹೊಡೆದ ಆಟಗಾರ: ಅಭಿಷೇಕ ಶರ್ಮಾ (42)
ಸ್ಟ್ರೈಕರ್ ಆಫ್ ದಿ ಸೀಸನ್: ಜೇಕ್ ಫ್ರೇಸರ್-ಮ್ಯಾಕ್‌ಗುರ್ಕ್ (234.04)
ಋತುವಿನ ಉದಯೋನ್ಮುಖ ಆಟಗಾರ: ನಿತೀಶ್ ಕುಮಾರ್ ರೆಡ್ಡಿ (20 ಲಕ್ಷ ರೂ.)
ಕ್ಯಾಚ್ ಆಫ್ ದಿ ಸೀಸನ್: ರಮಣದೀಪ್ ಸಿಂಗ್
ಫೇರ್ ಪ್ಲೇ ಪ್ರಶಸ್ತಿ: SRH
ಪಿಚ್ ಮತ್ತು ಮೈದಾನ ಪ್ರಶಸ್ತಿ: ಹೈದರಾಬಾದ್ ಕ್ರಿಕೆಟ್ ಸಂಸ್ಥೆ
ಸನ್‌ರೈಸರ್ಸ್ ಹೈದರಾಬಾದ್ (SRH)
ಚಾಂಪಿಯನ್‌ : ಕೋಲ್ಕತ್ತಾ ನೈಟ್ ರೈಡರ್ಸ್(KKR)

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement