ನವದೆಹಲಿ : ತೈಲ ಮಾರುಕಟ್ಟೆ ಕಂಪನಿಗಳು ಶನಿವಾರ ದೇಶಾದ್ಯಂತ 19 ಕಿಲೋಗ್ರಾಂ ತೂಕದ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯಲ್ಲಿ ಇಳಿಕೆಯನ್ನು ಘೋಷಿಸಿವೆ. ಜೂನ್ 1 ರಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ವಾಣಿಜ್ಯ ಎಲ್‌ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯನ್ನು 69.50 ರೂ.ಗಳಷ್ಟು ಕಡಿತಗೊಳಿಸಿವೆ.
ಪರಿಷ್ಕೃತ ದರದ ಪ್ರಕಾರ ಜೂನ್ 1 ರಿಂದ ದೆಹಲಿಯಲ್ಲಿ 19 ಕೆಜಿಯ ವಾಣಿಜ್ಯ ಎಲ್‌ಪಿಜಿ ಸಿಲಿಂಡರ್‌ನ ಚಿಲ್ಲರೆ ಮಾರಾಟ ಬೆಲೆ ಈಗ 1,676 ರೂ.ಗಳಾಗಿವೆ.
ಮೇ 1, 2024 ರಂದು 19 ಕೆಜಿ ವಾಣಿಜ್ಯ ಎಲ್‌ಪಿಜಿ (LPG) ಸಿಲಿಂಡರ್‌ಗಳ ದರವನ್ನು 19 ರೂ.ಗಳಷ್ಟು ಕಡಿಮೆಗೊಳಿಸಲಾಗಿತ್ತು. ಏಪ್ರಿಲ್‌ನಲ್ಲಿ ಸಿಲಿಂಡರ್‌ಗೆ 30.50 ರೂಪಾಯಿ ಕಡಿತಗೊಳಿಸಲಾಗಿತ್ತು.
ದೆಹಲಿಯಲ್ಲಿ 1745.50 ರೂ.ಗಳು ಇದ್ದಿದ್ದು ಈಗ 1,676 ರೂ.ಗಳಷ್ಟಾಗಿದೆ. ಕೋಲ್ಕತ್ತಾದಲ್ಲಿ 1859 ರೂ.ಗಳು ಇದ್ದಿದ್ದು ಈಗ 1,787 ರೂ.ಗಳಷ್ಟಾಗಿದೆ. ಮುಂಬೈನಲ್ಲಿ 1,698.50 ರೂ.ಗಳು ಇದ್ದಿದ್ದು 1,629 ರೂ.ಗಳು ಹಾಗೂ ಚೆನ್ನೈನಲ್ಲಿ 1,911 ರೂ.ಗಳು ಇದ್ದಿದ್ದು ಈಗ 1,840.50 ರೂ.ಗಳಷ್ಟಾಗಿದೆ.


ನಿಮ್ಮ ಕಾಮೆಂಟ್ ಬರೆಯಿರಿ