ಪೋರ್ಷೆ ಕಾರು ಅಪಘಾತ ಪ್ರಕರಣ : ‘ಸಾಕ್ಷ್ಯ ತಿರುಚಿದ’ ಆರೋಪದ ಮೇಲೆ ಅಪ್ರಾಪ್ತನ ತಾಯಿಯ ಬಂಧನ

ಪುಣೆ: ಪುಣೆ ಪೋರ್ಷೆ ಕಾರು ಅಪಘಾತ ಪ್ರಕರಣದ ಇತ್ತೀಚಿನ ಬೆಳವಣಿಗೆಯೊಂದರಲ್ಲಿ, ಐಷಾರಾಮಿ ಕಾರು ಚಾಲನೆ ಮಾಡುವಾಗ ಇಬ್ಬರ ಸಾವಿಗೆ ಕಾರಣನಾದ ಅಪ್ರಾಪ್ತ ಆರೋಪಿಯ ತಾಯಿಯನ್ನು ಪುಣೆ ಪೊಲೀಸರು ಬಂಧಿಸಿದ್ದಾರೆ.
ಅಪಘಾತ ಸಂಭವಿಸಿದಾಗ ತನ್ನ ಮಗ ಕುಡಿದಿರಲಿಲ್ಲ ಎಂದು ಸಾಬೀತುಪಡಿಸಲು ಮಗನ ರಕ್ತದ ಮಾದರಿ ಬದಲಿಗೆ ತಾಯಿಯು ತನ್ನ ರಕ್ತದ ಮಾದರಿಯನ್ನು ಬದಲಾಯಿಸಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.
ಅಪ್ರಾಪ್ತ ವಯಸ್ಕನ ರಕ್ತದ ಮಾದರಿಗಳನ್ನು ಅವನ ತಾಯಿಯ ರಕ್ತದೊಂದಿಗೆ ಬದಲಾಯಿಸಲಾಗಿದೆ ಎಂದು ತನಿಖೆಯಿಂದ ತಿಳಿದುಬಂದಿದೆ ಎಂದು ಪೊಲೀಸ್ ಆಯುಕ್ತ ಅಮಿತೇಶಕುಮಾರ ಹೇಳಿದ್ದಾರೆ.

ಮೇ 19 ರಂದು ಪುಣೆಯ ಕಲ್ಯಾಣಿ ನಗರದಲ್ಲಿ  ಪಾನಮತ್ತರಾಗಿ ಪೋರ್ಷೆ ಕಾರು ಚಲಾಯಿಸಿದ ಕಾರಣ  ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಇಬ್ಬರು ಟೆಕ್ಕಿಗಳು ಸಾವಿಗೀಡಾಗಿದ್ದರು. 17 ವರ್ಷದ ಅಪ್ರಾಪ್ತನನ್ನು ರಿಮಾಂಡ್‌ ಹೋಮ್‌ಗೆ ಕಳುಹಿಸಲಾಗಿದ್ದು, ಕುಟುಂಬದ ಚಾಲಕನನ್ನು ಅಪಹರಿಸಿ ತಾನು ಕಾರು ಚಾಲನೆ ಮಾಡುತ್ತಿದ್ದೆ ಎಂದು ಹೇಳುವಂತೆ ಬಲವಂತ ಮಾಡಿದ್ದಕ್ಕಾಗಿ ಆತನ ತಂದೆ ಮತ್ತು ಅಜ್ಜನನ್ನು ಬಂಧಿಸಲಾಗಿದೆ.
ಅಪರಾಧವನ್ನು ಮುಚ್ಚಿಡಲು ಪ್ರಭಾವಿ ಕುಟುಂಬ ನಡೆಸಿದ ಪ್ರಯತ್ನಗಳು ತನಿಖೆ ವೇಳೆ ತಿಳಿದುಬಂದಿದೆ. ಅವರು ಮೊದಲು ತಮ್ಮ ಕುಟುಂಬದ ಚಾಲಕನಿಗೆ ಹಣ ನೀಡುವ ಆಮಿಷವೊಡ್ಡಿ ಅಪಘಾತದ ಹೊಣೆ ಹೊತ್ತುಕೊಳ್ಳುವಂತೆ ಮನವೊಲಿಸಲು ಪ್ರಯತ್ನಿಸಿದರು. ಆತ ನಿರಾಕರಿಸಿದಾಗ, ಆತನನ್ನು ಅಪಹರಿಸಿ ತಪ್ಪೊಪ್ಪಿಕೊಳ್ಳುವಂತೆ ಬಲವಂತ ಮಾಡಲಾಯಿತು.

ಪ್ರಮುಖ ಸುದ್ದಿ :-   ಆಪರೇಷನ್ ಸಿಂಧೂರ ; ಪಾಕ್‌ಗೆ ಬೆಂಬಲಿಸಿದ ಟರ್ಕಿ : ಭಾರತದಿಂದ ಹೊರದಬ್ಬಿದ ಒಂದೇ ದಿನದಲ್ಲಿ ಟರ್ಕಿ ಕಂಪನಿಗೆ ₹4700 ಕೋಟಿ ನಷ್ಟ !

ಸರ್ಕಾರಿ ಸ್ವಾಮ್ಯದ ಸಸೂನ್ ಆಸ್ಪತ್ರೆಯಲ್ಲಿ 17 ವರ್ಷದ ವೈದ್ಯಕೀಯ ಪರೀಕ್ಷೆಯಲ್ಲಿ ಅಕ್ರಮಗಳು ನಡೆದಿತ್ತು. ಇದರ ಬಗ್ಗೆ ತನಿಖೆ ನಡೆಸಲು ಮಹಾರಾಷ್ಟ್ರ ವೈದ್ಯಕೀಯ ಶಿಕ್ಷಣ ಇಲಾಖೆಯು ಮುಂಬೈ ಮೂಲದ ಅನುದಾನ ವೈದ್ಯಕೀಯ ಕಾಲೇಜಿನ ಡೀನ್ ಡಾ ಪಲ್ಲವಿ ಸಪಾಲೆ ನೇತೃತ್ವದಲ್ಲಿ ಮೂವರು ಸದಸ್ಯರ ಸಮಿತಿಯನ್ನು ನೇಮಿಸಿತು..
24 ವರ್ಷದ ಇಂಜಿನಿಯರ್‌ಗಳಾದ ಅನೀಶ ಅವಧಿಯಾ ಮತ್ತು ಅಶ್ವಿನಿ ಕೋಸ್ತಾ ಅವರು ಮೇ 19 ರಂದು ವೇಗವಾಗಿ ಬಂದ ಪೋರ್ಷೆ ಕಾರು ಅವರ ಬೈಕಿಗೆ ಡಿಕ್ಕಿ ಹೊಡೆದ ನಂತರ ಸಾವಿಗೀಡಾಗಿದ್ದರು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement