ಶೈಕ್ಷಣಿಕ ಒತ್ತಡ ತಾಳಲಾರದೆ ಆತ್ಮಹತ್ಯೆಗೆ ಶರಣಾದ ಐಎಎಸ್‌ ಅಧಿಕಾರಿಯ ಮಗಳು..!

ಮುಂಬೈ: ಶೈಕ್ಷಣಿಕ ಒತ್ತಡ ತಾಳಲಾರದೇ ಹಿರಿಯ ಐಎಎಸ್‌ (IAS) ಅಧಿಕಾರಿಯೊಬ್ಬರ ಮಗಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಕ್ಷಿಣ ಮುಂಬೈನಲ್ಲಿ ಸೋಮವಾರ ನಡೆದಿದೆ. ಮೃತ ಯುವತಿಯನ್ನು ಲಿಪಿ ರಸ್ತೋಗಿ (26) ಎಂದು ಗುರುತಿಸಲಾಗಿದೆ. ಇವರು ರಾಜ್ಯ ಸೆಕ್ರೆಟರಿಯಟ್​​ ಎದುರಿಗಿನ ಕಟ್ಟಡದ 10ನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ತಕ್ಷಣ ಆಸ್ಪತ್ರೆಗೆ ದಾಖಲಿಸುವ ಪ್ರಯತ್ನ ನಡೆಯಿತಾದರೂ ಆಕೆ ಮಾರ್ಗಮಧ್ಯೆಯೇ ಸಾವಿಗೀಡಾದರು ಎಂದು ವರದಿಯಾಗಿದೆ.
ಲಿಪಿ ರಸ್ತೋಗಿ ಅವರ ತಂದೆ ಐಎಎಸ್​ ಅಧಿಕಾರಿ ವಿಕಾಸ್​ ಸಿ.ರಸ್ತೋಗಿ ಅವರು ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತಾಯಿ ರಾಧಿಕಾ ವಿ.ರಸ್ತೋಗಿ ಅವರು ಗೃಹ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಲಿಪಿ ಅವರು ಹರಿಯಾಣದ ಸೋನಪತ್​ನಲ್ಲಿ ಕಾನೂನು ಪದವಿ ಅಭ್ಯಾಸ ಮಾಡುತ್ತಿದ್ದರು. ಅವರು ಶೈಕ್ಷಣಿಕ ಒತ್ತಡದಿಂದ ಬಳಲುತ್ತಿದ್ದರು ಎಂದು ಹೇಳಲಾಗಿದೆ. ಘಟನಾ ಸ್ಥಳದಲ್ಲಿ ಡೆತ್​ ನೋಟ್​ ಸಿಕ್ಕಿದ್ದು, ಒತ್ತಡದಿಂದಾಗಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಲು ಸಾಧ್ಯವಾಗಲಿಲ್ಲ ಎಂದು ಲಿಪಿ ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದಾರೆ ಎಂದು ವರದಿಯಾಗಿದೆ.
ಪೊಲೀಸರು ‘ಅಸಹಜ ಸಾವು’ ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸುತ್ತಿದ್ದಾರೆ.

ಪ್ರಮುಖ ಸುದ್ದಿ :-   ಸಚಿವೆ ಹೆಬ್ಬಾಳ್ಕರ ವಿರುದ್ಧ ಅಶ್ಲೀಲ ಪದ ಬಳಕೆ: ಬಿಜೆಪಿ ಶಾಸಕ ಸಿ ಟಿ ರವಿ ವಿರುದ್ಧದ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement