ಬೆಂಗಳೂರು : ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (KPCL) 622 ಸಹಾಯಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಖಾಲಿ ಹುದ್ದೆಗಳನ್ನು ತುಂಬಲು ಫೆಬ್ರವರಿ 18ರಂದು ನಡೆಸಲಾಗಿದ್ದ ಸ್ಪರ್ಧಾತ್ಮಕ ಪರೀಕ್ಷೆಯ ಅಂತಿಮ ಅಂಕಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ( Karnataka Examinations Authority)ವು ತನ್ನ ವೆಬ್ಸೈಟ್ನಲ್ಲಿ ಬುಧವಾರ ಪ್ರಕಟಿಸಿದೆ.
ಆಕ್ಷೇಪಣೆಗಳ ಪರಿಶೀಲನೆ ನಂತರ, ಕಳೆದ ಸಲದಂತೆ ಈ ಬಾರಿಯೂ, ಪ್ರತಿ ತಪ್ಪು ಉತ್ತರಕ್ಕೆ 1/3ರಷ್ಟು ನಕಾರಾತ್ಮಕ ಅಂಕ ಕಡಿತಗೊಳಿಸಿ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲು ಕೆಪಿಸಿಎಲ್ ಸಂಸ್ಥೆ ಲಿಖಿತ ರೂಪದಲ್ಲಿ ಸೂಚಿಸಿತ್ತು.
ಅದರಂತೆ ಹುದ್ದೆವಾರು ಪರೀಕ್ಷೆ ಬರೆದ ಅಭ್ಯರ್ಥಿಗಳ ಅಂತಿಮ ಅಂಕಪಟ್ಟಿ ಸಿದ್ಧಪಡಿಸಲಾಗಿದೆ ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಅಂತಿಮ ಅಂಕಪಟ್ಟಿಯನ್ನು ಕೆಪಿಸಿಎಲ್ ಸಂಸ್ಥೆಗೆ ಹಸ್ತಾಂತರಿಸಲಾಗುವುದು. ನಿಯಮಾನುಸಾರ ಆಯ್ಕೆ ಪಟ್ಟಿ ಪ್ರಕಟಿಸಲು ಕೆಪಿಸಿಎಲ್ ಕ್ರಮ ವಹಿಸಲಿದೆ ಎಂದು ಅವರು ತಿಳಿಸಿದ್ದಾರೆ.
ಕೆಪಿಸಿಎಲ್ನ ಎಇ, ಜೆಇ (ವಿವಿಧ ವಿಭಾಗಗಳ), ಕೆಮಿಸ್ಟ್ ಮತ್ತು ಕೆಮಿಕಲ್ ಸೂಪರ್ವೈಸರ್ ಹುದ್ದೆಗಳ ನೇಮಕಾತಿಗಾಗಿ ಈ ಪರೀಕ್ಷೆ ನಡೆಸಲಾಗಿತ್ತು.
ನಿಮ್ಮ ಕಾಮೆಂಟ್ ಬರೆಯಿರಿ