ನಟ ವಿನೋದರಾಜ ಆಸ್ಪತ್ರೆಗೆ ದಾಖಲು

ಬೆಂಗಳೂರು: ಕನ್ನಡ ಚಿತ್ರರಂಗದ ನಟ ವಿನೋದರಾಜ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ವರದಿಯಾಗಿದೆ. ಕರುಳಿನ ಸಮಸ್ಯೆಯಿಂದ ಅವರನ್ನು ಬೆಂಗಳೂರಿನ ಆಸ್ಪತ್ರೆಗೆ ದಾಖಲು ಮಾಡಲಾಗಿದೆ ಎಂದು ಹೇಳಲಾಗಿದೆ.
11 ವರ್ಷಗಳ ಹಿಂದೆ ವಿನೋದರಾಜ ಅವರು ಹೃದಯದ ಆಪರೇಷನ್‌ಗೆ ಒಳಗಾಗಿದ್ದರು. ಈ ವೇಳೆ ಅವರ ಸ್ಟಂಟ್‌ ಅಳವಡಿಸಲಾಗಿತ್ತು. ಈಗ ಅದೇ ಸ್ಟಂಟ್‌ ಪರಿಣಾಮದಿಂದ ಅವರಿಗೆ ಕರುಳಿನ ಸಮಸ್ಯೆ ಉಂಟಾಗಿದೆ ಎನ್ನಲಾಗಿದೆ. ಅವರಿಗೆ ಶಸ್ತ್ರಚಿಕಿತ್ಸೆ ಮಾಡಲಾಗಿದ್ದು, ಇನ್ನು ಎರಡು – ಮೂರು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಡಿಸ್ಚಾರ್ಜ್‌ ಆಗಲಿದ್ದಾರೆ ಎಂದು ವರದಿಯಾಗಿದೆ. ಹೆಚ್ಚಿನ ವಿವರ ನಿರೀಕ್ಷಿಸಲಾಗುತ್ತಿದೆ.
ಅವರು, ಡ್ಯಾನ್ಸ್ ರಾಜಾ ಡ್ಯಾನ್ಸ್, ಶ್ರೀ ವೆಂಕಟೇಶ್ವರ ಮಹಿಮೆ, ಕೃಷ್ಣಾ ನೀ ಕುಣಿದಾಗ, ಕಾಲೇಜ್ ಹೀರೋ, ನನಗು ಹೆಂಡ್ತಿ ಬೇಕು, ಯುದ್ಧ ಪರ್ವ, ನಾಯಕ, ಬನ್ನಿ ಒಂದ್ಸಲಾ ನೋಡಿ, ಗಿಳಿ ಬೇಟೆ, ನಂಜುಂಡ, ಕ್ಯಾಪ್ಟನ್, ಬೊಂಬಾಟ್ ರಾಜ ಬಂಡಲ್ ರಾಣಿ., ರಂಭಾ ರಾಜ್ಯದಲ್ಲಿ ರೌಡಿ, ಮಹಾಭಾರತ, ರಾಜಣ್ಣ , ದಳವಾಯಿ, ಸ್ನೇಹಲೋಕ , ಓಂ ಶಕ್ತಿ , ಬ್ರಹ್ಮ ವಿಷ್ಣು, ವಂದೇ ಮಾತರಂ, ರಾಷ್ಟ್ರಗೀತೆ, ಶ್ರೀ ಮಂಜುನಾಥ , ನಮ್ಮ ಸಂಸಾರ ಆನಂದ ಸಾಗರ, ಪಾಂಡವ ಇವೇ ಮೊದಲಾದ ಸಿನಿಮಾಗಳಲ್ಲಿ ನಟಿಸಿದ್ದಾರೆ.

ಪ್ರಮುಖ ಸುದ್ದಿ :-   ಸವದತ್ತಿ | ಸಿಡಿಲು ಬಡಿದು ಇಬ್ಬರು ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement