‘ಬಿಜೆಪಿ ದುರಹಂಕಾರ’ ಹೇಳಿಕೆಯ ಕೋಲಾಹಲದ ನಂತರ ಯೂ-ಟರ್ನ್ ಹೊಡೆದ ಆರ್‌ ಎಸ್‌ ಎಸ್ ನಾಯಕ

ನವದೆಹಲಿ : 2024ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯ ಸಾಧನೆ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆರ್‌ಎಸ್‌ಎಸ್‌ ಪ್ರಮುಖ ಇಂದ್ರೇಶಕುಮಾರ ಅವರು ತಮ್ಮ ಹೇಳಿಕೆಗೆ ಸ್ಪಷ್ಟನೆ ನೀಡಿದ್ದಾರೆ. ಭಗವಾನ್‌ ರಾಮನ ಮಹಿಮೆ ಮರುಸ್ಥಾಪನೆಯ ಗುರಿಯ ಹೊಂದಿದ್ದವರು ಅಧಿಕಾರಕ್ಕೆ ಬಂದಿದ್ದಾರೆ. ಭಗವಾನ್‌ ರಾಮನನ್ನು ವಿರೋಧಿಸಿದವರು ಸೋತಿದ್ದಾರೆ ಎಂದು ಹೇಳಿದ್ದಾರೆ.
. ಜೈಪುರ ಬಳಿ ಗುರುವಾರ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಇಂದ್ರೇಶಕುಮಾರ ಅವರು, ಶ್ರೀರಾಮನ ಭಕ್ತರು ಕ್ರಮೇಣ ದುರಹಂಕಾರಿಯಾದರು. ಆ ಪಕ್ಷವನ್ನು ಅತಿದೊಡ್ಡ ಪಕ್ಷವೆಂದು ಘೋಷಿಸಲಾಯಿತು, ಆದರೆ ದುರಹಂಕಾರದ ಕಾರಣದಿಂದ ಶ್ರೀರಾಮನು 241ಕ್ಕೆ ಅದನ್ನು ನಿಲ್ಲಿಸಿದ್ದಾನೆ” ಎಂದು ಹೆಸರು ಹೇಳದೆ ಬಿಜೆಪಿ ಬಗ್ಗೆ ಹೇಳಿದ್ದರು. “ಮತ್ತು ರಾಮನಲ್ಲಿ ನಂಬಿಕೆಯಿಲ್ಲದವರನ್ನು 234 ರಲ್ಲಿ ನಿಲ್ಲಿಸಲಾಯಿತು” ಎಂದು ಅವರು ಇಂಡಿಯಾ ಮೈತ್ರಿಕೂಟವನ್ನು ಅನ್ನು ಉಲ್ಲೇಖಿಸಿ ಹೇಳಿದ್ದರು.
ಇದ್ರೇಶಕುಮಾರ ಅವರ ಈ ಮಾತುಗಳು ಚರ್ಚೆಗೆ ಕಾರಣವಾಯಿತು. ಇಂದ್ರೇಶಕುಮಾರ ತಮ್ಮ ಹೇಳಿಕೆಗೆ ಸ್ಪಷ್ಟಪಡಿಸುವ ಮೂಲಕ ಡ್ಯಾಮೇಜ್‌ ಕಂಟ್ರೋಲ್‌ಗೆ ಪ್ರಯತ್ನಿಸಿದರು, “ಪ್ರಸ್ತುತ ದೇಶದ ಮನಸ್ಥಿತಿ ತುಂಬಾ ಸ್ಪಷ್ಟವಾಗಿದೆ, ಭಗವಾನ್ ರಾಮನನ್ನು ವಿರೋಧಿಸುವವರು ಅಧಿಕಾರದಲ್ಲಿಲ್ಲ, ಭಗವಾನ್ ರಾಮನನ್ನು ಗೌರವಿಸುವವರು ಅಧಿಕಾರದಲ್ಲಿದ್ದಾರೆ ಮತ್ತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಮೂರನೇ ಬಾರಿಗೆ ಸರ್ಕಾರ ರಚನೆಯಾಗಿದೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

 

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement