ಪವಿತ್ರಗೌಡ ನಟ ದರ್ಶನ್ ಪತ್ನಿ ಅಲ್ಲ ; ವಕೀಲರ ಸ್ಪಷ್ಪನೆ

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಅವರು ನಟ ದರ್ಶನ್‌ ಅವರ ಸಹನಟಿ ಮಾತ್ರವೇ ಹೊರತು ಅವರ ಪತ್ನಿಯಲ್ಲ ಎಂದು ದರ್ಶನ್ ಪರ ವಕೀಲ ಅನಿಲಬಾಬು ಶನಿವಾರ ಸ್ಪಷ್ಟಪಡಿಸಿದ್ದಾರೆ.
ಚಿತ್ರದುರ್ಗದ ನಿವಾಸಿ ರೇಣುಕಸ್ವಾಮಿ (33) ಅವರನ್ನು ಹತ್ಯೆ ಮಾಡಿದ ಆರೋಪದ ಮೇಲೆ ದರ್ಶನ್, ಅವರ ಸ್ನೇಹಿತೆ ಪವಿತ್ರ ಗೌಡ ಮತ್ತು ಇತರ 14 ಜನರನ್ನು ಈ ವಾರದ ಆರಂಭದಲ್ಲಿ ಬಂಧಿಸಲಾಗಿತ್ತು.
ಕೊಲೆಯಾದ ರೇಣುಕಾಸ್ವಾಮಿ ಅವರಯ ನಟ ದರ್ಶನ್ ಅವರ ಕಟ್ಟಾ ಅಭಿಮಾನಿಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಪವಿತ್ರಾ ಗೌಡ ಅವರಿಗೆ ಅವಹೇಳನಕಾರಿ ಸಂದೇಶಗಳನ್ನು ಕಳುಹಿಸಿದ್ದರು ಎಂಬುದು ಈವರೆಗಿನ ತನಿಖೆಯಿಂದ ತಿಳಿದುಬಂದಿದೆ. ರೇಣೂಕಾಸ್ವಾಮಿಯನ್ನು ಚಿತ್ರದುರ್ಗದಿಂದ ಬೆಂಗಳೂರಿಗೆ ಕರೆತಂದು, ಶೆಡ್‌ನಲ್ಲಿ ಕೂಡಿಹಾಕಿ, ಕ್ರೂರವಾಗಿ ಚಿತ್ರಹಿಂಸೆ ನೀಡಿ ಸಾಯಿಸಲಾಗಿದೆ ಎಂದು ಆರೋಪಿಸಲಾಗಿದೆ.

ಶನಿವಾರ ಅನ್ನಪೂರ್ಣೇಶ್ವರಿನಗರ ಪೊಲೀಸ್ ಠಾಣೆಯಲ್ಲಿ ದರ್ಶನ್ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅನಿಲಬಾಬು, ನಟ ದರ್ಶನ್ ಬಂಧನದ ನಂತರ ಎರಡು ಬಾರಿ ದರ್ಶನ್ ಅವರನ್ನು ಭೇಟಿ ಮಾಡಿದ್ದೇನೆ. ನಾನು ದರ್ಶನ್ ಅವರನ್ನು ಅವರ ಪತ್ನಿ, ಅತ್ತೆ ಮತ್ತು ಕುಟುಂಬದ ಸದಸ್ಯರ ಮೂಲಕ ಪ್ರತಿನಿಧಿಸುತ್ತಿದ್ದೇನೆ. ಕೆಲವು ಮಾಧ್ಯಮಗಳು ಪವಿತ್ರ ಗೌಡ ಅವರನ್ನು ದರ್ಶನ್ ಅವರ ಪತ್ನಿ ಎಂದು ಬಿಂಬಿಸುತ್ತಿರುವುದಕ್ಕೆ ಅವರ ಪತ್ನಿ ವಿಜಯಲಕ್ಷ್ಮಿ ಬೇಸರ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಪ್ರಮುಖ ಸುದ್ದಿ :-   ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಕಟ : ಯಾಮಿ ಗೌತಂ ಅತ್ಯುತ್ತಮ ನಟಿ, ಕಾರ್ತಿಕ್ ಆರ್ಯನ್–ಮಮ್ಮುಟ್ಟಿ ಅತ್ಯುತ್ತಮ ನಟರು ; ಪ್ರಶಸ್ತಿಗಳ ಪಟ್ಟಿ

ಅನಿಲಬಾಬು ಪ್ರಕಾರ, ವಿಜಯಲಕ್ಷ್ಮಿ ಅವರು ಮಾಧ್ಯಮಗಳಿಗೆ ಮತ್ತು ಕರ್ನಾಟಕದ ಜನರಿಗೆ ಸ್ಪಷ್ಟಪಡಿಸಲು ಬಯಸುತ್ತಾರೆ, ನಾನು ಕಾನೂನುಬದ್ಧವಾಗಿ ವಿವಾಹವಾದ ಪತ್ನಿ (ದರ್ಶನ್) ಮತ್ತು ತಮ್ಮನ್ನು ಹೊರತುಪಡಿಸಿ ಬೇರೆ ಯಾರೂ ಇಲ್ಲ ಎಂದು ಅವರು ಹೇಳಿದ್ದಾರೆ ಎಂದು ತಿಳಿಸಿದರು. ದಂಪತಿಗೆ ಒಬ್ಬ ಮಗನಿದ್ದಾನೆ. ನಟ ದರ್ಶನ್‌ಗೆ ಪವಿತ್ರಾ ಗೌಡ ಸಹ ಕಲಾವಿದೆ ಮತ್ತು ಸ್ನೇಹಿತೆ, ಅವರ ನಡುವೆ ಉಳಿದ ಯಾವುದೇ ಸಂಬಂಧವಿಲ್ಲ ಎಂದು ಅವರು ಹೇಳಿದರು.
ಪವಿತ್ರಾ ಗೌಡ ಅವರು ದರ್ಶನ್ ಅವರ ಪತ್ನಿ ಎಂದು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ, ಅವರು ಮದುವೆಯಾಗಿದ್ದರೆ ಕೆಲವು ದಾಖಲೆಗಳು ಇರಬೇಕಾಗಿತ್ತು, ಆದರೆ ಅವರು ದರ್ಶನ್ ಅವರ ಪತ್ನಿ ಎಂದು ತೋರಿಸಲು ಏನೂ ಇಲ್ಲ ಎಂದು ಅವರು ಹೇಳಿದರು.

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement