ಜೂನ್ 21ರಂದು ಅಂತಾರಾಷ್ಟ್ರೀಯ ಯೋಗ ದಿನಾಚರಣೆ : ಕಾಶ್ಮೀರದ ಶ್ರೀನಗರದಲ್ಲಿ ನಡೆಯುವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ಮೋದಿ ಭಾಗಿ

ನವದೆಹಲಿ: ಈ ವರ್ಷದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಜೂನ್ 21 ರಂದು ಶ್ರೀನಗರದ ಶೇರ್-ಇ-ಕಾಶ್ಮೀರ್ ಇಂಟರ್ನ್ಯಾಷನಲ್ ಕಾನ್ಫರೆನ್ಸ್ ಸೆಂಟರ್ (ಎಸ್‌ಕೆಐಸಿಸಿ) ನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಆಯೋಜಿಸಲಾಗುವುದು ಎಂದು ಆಯುಷ್ ಖಾತೆ ಸಚಿವ ಪ್ರತಾಪರಾವ್‌ ಜಾಧವ್ ಮಂಗಳವಾರ ತಿಳಿಸಿದ್ದಾರೆ. .
ಜಾಧವ್ ಅವರು, ಆಯುಷ್ ರಾಜ್ಯ ಸಚಿವ (ಸ್ವತಂತ್ರ ಉಸ್ತುವಾರಿ), ಈ ವರ್ಷದ ಥೀಮ್ ‘ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ’ ಎಂದು ಹೇಳಿದ್ದಾರೆ.
ಪ್ರಧಾನಿ ಮೋದಿ ಪ್ರತಿ ಗ್ರಾಮ ಪ್ರಧಾನರಿಗೆ ಪತ್ರ ಬರೆದಿದ್ದಾರೆ. ಇದರಲ್ಲಿ ತಳಮಟ್ಟದ ಜನರ ಭಾಗವಹಿಸುವಿಕೆಯನ್ನು ಉತ್ತೇಜಿಸಲು ಈ ಕ್ರಮಕ್ಕೆ ಮುಂದಾಗಿದ್ದಾರೆ.ದೃಷ್ಟಿ ವಿಕಲಚೇತನರು ಯೋಗವನ್ನು ಕಲಿಯಲು ಅನುಕೂಲವಾಗುವಂತೆ ಜಾಧವ್ ಅವರು ‘ಕಾಮನ್ ಯೋಗ ಪ್ರೋಟೋಕಾಲ್ ಬುಕ್ ಇನ್ ಬ್ರೈಲ್’ ಸ್ಕ್ರಿಪ್ಟ್ ಗೆ ಚಾಲನೆ ನೀಡಿದ್ದಾರೆ.. ಸಚಿವರು ಯೋಗದ ಕುರಿತು ಪ್ರೊಫೆಸರ್ ಆಯುಷ್ಮಾನ್ ಕಾಮಿಕ್ ಅನ್ನು ಬಿಡುಗಡೆ ಮಾಡಿದರು. ಈ ಪುಸ್ತಕವು ಮಕ್ಕಳಿಗೆ ಆಸಕ್ತಿ ಮತ್ತು ಮನರಂಜನೆಯೊಂದಿಗೆ ಯೋಗವನ್ನು ಕಲಿಯಲು ಮತ್ತು ಅಭ್ಯಾಸ ಮಾಡಲು ಸಹಾಯ ಮಾಡುತ್ತದೆ.

ಪ್ರಧಾನಿ ಮೋದಿಯವರ ಕರೆಗೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯು ಡಿಸೆಂಬರ್ 2014 ರಲ್ಲಿ ಪ್ರತಿ ವರ್ಷ ಜೂನ್ 21 ಅನ್ನು ಅಂತಾರಾಷ್ಟ್ರೀಯ ದಿನವಾಗಿ ಆಚರಿಸಲು ಘೋಷಣೆ ಮಾಡಿತು. 2015 ರಿಂದ, ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಪಂಚದಾದ್ಯಂತ ಸಾಮೂಹಿಕ ಚಳುವಳಿಯಾಗಿ ವಿಕಸನಗೊಂಡಿದೆ ಎಂದು ಜಾಧವ್ ಹೇಳಿದರು.
ಈ ವರ್ಷ, ಅಂತಾರಾಷ್ಟ್ರೀಯ ಯೋಗ ದಿನಾಚರಣೆಯು ‘ಯೋಗಾ ಫಾರ್ ಸ್ಪೇಸ್’ ಸೇರಿದಂತೆ ಹಲವಾರು ಘಟನೆಗಳಿಗೆ ಸಾಕ್ಷಿಯಾಗಲಿದೆ. ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ISRO) ದ ಬೆಂಬಲದೊಂದಿಗೆ, ‘ಯೋಗಾ ಫಾರ್ ಸ್ಪೇಸ್’ ಎಂಬ ವಿಶಿಷ್ಟ ಉಪಕ್ರಮವನ್ನು ಆಯೋಜಿಸಲಾಗಿದೆ, ಇದರಲ್ಲಿ ಎಲ್ಲಾ ಇಸ್ರೋ (ISRO) ವಿಜ್ಞಾನಿಗಳು/ಅಧಿಕಾರಿಗಳು ಯೋಗ ದಿನಾಚರಣೆಯಲ್ಲಿ ಸಾಮಾನ್ಯ ಯೋಗ ಪ್ರೋಟೋಕಾಲ್ (CYP) ನಿರ್ವಹಿಸುತ್ತಾರೆ. ಗಗನಯಾನ ಪ್ರಾಜೆಕ್ಟ್ ತಂಡವು ಅಂತಾರಾಷ್ಟ್ರೀಯ ಯೋಗ ದಿನಾಚರಣೆ-2024 ರಲ್ಲಿ ಸಹ ಭಾಗವಹಿಸಲಿದೆ.

ಪ್ರಮುಖ ಸುದ್ದಿ :-   ನೇಪಾಳದಲ್ಲಿ ದುರಂತ ; ಬಿಹಾರದಲ್ಲಿ ಆತಂಕ..! ಪ್ರವಾಹದಲ್ಲಿ ಬಂದ ಅಪರಿಚಿತ ಮೀನುಗಳು ಜೀವಕ್ಕೆ ಕಂಟಕ ? ಸರ್ಕಾರದ ಎಚ್ಚರಿಕೆ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement