ಬಳ್ಳಾರಿ ನೂತನ ಮೇಯರ್ ಆಗಿ ನಂದೀಶಬಾಬು, ಉಪಮೇಯರ್ ಆಗಿ ಡಿ. ಸುಕುಂ ಆಯ್ಕೆ

ಬಳ್ಳಾರಿ: ಬಳ್ಳಾರಿ ಮಹಾನಗರ ಪಾಲಿಕೆಯ 23ನೇ ಮೇಯರ್‌ ಆಗಿ ಕಾಂಗ್ರೆಸ್ಸಿನ ಮುಲ್ಲಂಗಿ ನಂದೀಶಬಾಬು ಶುಕ್ರವಾರ ಆಯ್ಕೆಯಾಗಿದ್ದಾರೆ. ಉಪ ಮೇಯರ್‌ ಆಗಿ ಕಾಂಗ್ರೆಸ್ಸಿನ ಡಿ. ಸುಕುಂ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಬಳ್ಳಾರಿ ನಗರ ಪಾಲಿಕೆಯ 39 ಸದಸ್ಯರಲ್ಲಿ ಕಾಂಗ್ರೆಸ್ ಪಕ್ಷದ 21 ಹಾಗೂ ಪಕ್ಷೇತರರಾಗಿ ಆರಿಸಿ ಬಂದು ಕಾಂಗ್ರೆಸ್ ಬೆಂಬಲಿಸಿರುವ 5 ಜನ ಸದಸ್ಯರು ಸೇರಿದಂತೆ 26 ಜನರ ಬಲವಿತ್ತು. ಬಿಜೆಪಿಯವರು 13 ಸದಸ್ಯರ ಬಲ ಹೊಂದಿದ್ದರು. ಕಾಂಗ್ರೆಸ್ ಪಕ್ಷ ನಿಚ್ಚಳ ಬಹುಮತ ಹೊಂದಿದೆ. ಸಾಮಾನ್ಯ ವರ್ಗಕ್ಕೆ ಮೇಯರ್‌ ಸ್ಥಾನ ಮೀಸಲಾಗಿದ್ದ ಮೇಯರ್‌ ಚುನಾವಣೆಯಲ್ಲಿ 18ನೇ ವಾರ್ಡಿನ್ ಕಾಂಗ್ರೆಸ್ ಸದಸ್ಯ ಹಾಗೂ ಮಾಜಿ ಸಚಿವ ಬಿ ನಾಗೇಂದ್ರ ಆಪ್ತ ಮುಲ್ಲಂಗಿ ನಂದೀಶಬಾಬು ಕಾಂಗ್ರೆಸ್ಸಿನಿಂದ ಸ್ಪರ್ಧಿಸಿದ್ದರು. ಬಿಜೆಪಿಯಿಂದ ಶ್ರೀನಿವಾಸ ಮೋತ್ಕರ ಸ್ಪರ್ಧಿಸಿದ್ದರು. ಉಪ ಮೇಯರ್‌ ಸ್ಥಾನ ಹಿಂದುಳಿದ ವರ್ಗ ಮಹಿಳೆಗೆ ಮೀಸಲಾಗಿತ್ತು. ಉಪಮೇಯರ್ ಸ್ಥಾನಕ್ಕೆ ಡಿ. ಸುಕುಂ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಅವರು ಬಳ್ಳಾರಿ ಪಾಲಿಕೆಯ 26ನೇ ವಾರ್ಡ್ ಸದಸ್ಯೆಯಾಗಿದ್ದಾರೆ.

 

ಪ್ರಮುಖ ಸುದ್ದಿ :-   ಭಟ್ಕಳ | ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣ ; ಮಗನಿಗೆ ಗಲ್ಲು ಶಿಕ್ಷೆ, ಅಪ್ಪನಿಗೆ ಜೀವಾವಧಿ ಶಿಕ್ಷೆ ಪ್ರಕಟ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement