ಕೇಂದ್ರ ಸರ್ಕಾರದ ಇಲಾಖೆಗಳು, ಸಚಿವಾಲಯಗಳಿಗೆ ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡುವ ಸ್ಟಾಫ್ ಸೆಲೆಕ್ಷನ್ ಕಮಿಷನ್ (Staff Selection Commission) 8326 ಮಲ್ಟಿ ಟಾಸ್ಕಿಂಗ್ ಸ್ಟಾಫ್ ಹಾಗೂ ಹವಾಲ್ದಾರ್ ಹುದ್ದೆಗಳ ಭರ್ತಿಗೆ ಪ್ರಕಟಣೆ ಹೊರಡಿಸಿದ್ದು, ಅರ್ಹರಿಂದ ಅರ್ಜಿ ಆಹ್ವಾನಿಸಿದೆ.
ಈ ಹುದ್ದೆಗಳಿಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಜುಲೈ 31 ರವರೆಗೆ ಆನ್‌ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಅವಕಾಶವಿದೆ. ಎಸ್‌ಎಸ್‌ಎಲ್‌ಸಿ ಅಥವಾ ಹತ್ತನೇ ತರಗತಿ ಉತ್ತೀರ್ಣರಾದವರು ಸಹ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಸಿದವರಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು ಮುಂದಿನ ಅಕ್ಟೋಬರ್ ಹಾಗೂ ನವೆಂಬರ್ ತಿಂಗಳಲ್ಲಿ ನಡೆಸಲಾಗುತ್ತದೆ.
ನೇಮಕಾತಿ ಸಂಸ್ಥೆ
ಸಂಸ್ಥೆಯ ಹೆಸರು : ಸಿಬ್ಬಂದಿ ನೇಮಕಾತಿ ಆಯೋಗ (Staff Selection Commission)
ವೆಬ್‌ಸೈಟ್ ವಿಳಾಸ : https://ssc.gov.in/
ಹುದ್ದೆ ಹೆಸರು
ಮಲ್ಟಿ ಟಾಸ್ಕಿಂಗ್ ಸ್ಟಾಫ್ (ನಾನ್ ಟೆಕ್ನಿಕಲ್ ) ಸ್ಟಾಫ್-4887 ಹುದ್ದೆಗಳು
ಹವಾಲ್ದಾರ್ ಇನ್ ಸಿಬಿಐಸಿ, ಸಿಬಿಎನ್-3439 ಹುದ್ದೆಗಳು
ಎಸ್‌ಎಸ್‌ಸಿ ಎಂಟಿಎಸ್, ಹವಾಲ್ದಾರ್ ಹುದ್ದೆ ವೇತನ ಶ್ರೇಣಿ : Rs.5200-20200.
ಎಸ್‌ಎಸ್‌ಸಿ ಎಂಟಿಎಸ್, ಹವಾಲ್ದಾರ್ ಹುದ್ದೆಗೆ ವಿದ್ಯಾರ್ಹತೆ: ಎಸ್‌ಎಸ್‌ಎಲ್‌ಸಿ ಅಥವಾ 10ನೇ ತರಗತಿ ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು.
ವಯೋಮಿತಿ :ಅರ್ಜಿ ಸಲ್ಲಿಸಲು ಕನಿಷ್ಠ 18 ವರ್ಷ ಆಗಿರಬೇಕು. ಮಲ್ಟಿ ಟಾಸ್ಕಿಂಗ್ ಸ್ಟಾಫ್ ಮತ್ತು ಹವಾಲ್ದಾರ್ ಇನ್ ಸಿಬಿಎನ್ (ಕಂದಾಯ ಇಲಾಖೆ) ಹುದ್ದೆಗಳಿಗೆ ಗರಿಷ್ಠ 25 ವರ್ಷ ಮೀರಬಾರದು. ಹವಾಲ್ದಾರ್ ಇನ್ ಸಿಬಿಐಸಿ (ಕಂದಾಯ ಇಲಾಖೆ) ಮತ್ತು ಕೆಲವು ಎಂಟಿಎಸ್ ಹುದ್ದೆಗಳಿಗೆ ಗರಿಷ್ಠ 27 ವರ್ಷ ಮೀರಿರಬಾರದು.
ವಯೋಮಿತಿ ಸಡಿಲಿಕೆ : ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 5 ವರ್ಷ ವಯೋಮಿತಿ ಸಡಿಲಿಕೆ ಇದೆ. ಇತರೆ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ 3 ವರ್ಷ, ಪಿಡಬ್ಲ್ಯೂಡಿ ಅಭ್ಯರ್ಥಿ (Unreserved)ಗಳಿಗೆ 10 ವರ್ಷ, ಪಿಡಬ್ಲ್ಯೂಡಿ (OBC) 13 ವರ್ಷ ಹಾಗೂ ಪಿಡಬ್ಲ್ಯೂಡಿ (SC/ST) ಅಭ್ಯರ್ಥಿಗಳಿಗೆ 15 ವರ್ಷಗಳ ವಯೋಮಿತಿ ಸಡಿಲಿಕೆ ಇದೆ. ಮಾಜಿ ಸೈನಿಕರಿಗೆ 3 ವರ್ಷಗಳ ಸಡಿಲಿಕೆ ಇದೆ. (ಹೆಚ್ಚಿನ ಮಾಹಿತಿಗೆ NoticeOfMTSNT_20240627 ಇಲ್ಲಿ ಕ್ಲಿಕ್ ಮಾಡಿ ನೋಟಿಫಿಕೇಶನ್ ನೋಡಬಹುದು)
ಪ್ರಮುಖ ದಿನಾಂಕಗಳು
ಆನ್‌ಲೈನ್ ಅರ್ಜಿ ಸಲ್ಲಿಸಲು ಆರಂಭ : 27-06-2024
ಆನ್‌ಲೈನ್ ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : 31-07-2024 ರಾತ್ರಿ 11 ಗಂಟೆ ವರೆಗೆ.
ಆನ್‌ಲೈನ್ ಮೂಲಕ ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ : 01-08-2024 ರಾತ್ರಿ 11 ಗಂಟೆವರೆಗೆ.
ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ ನೀಡುವ ದಿನಾಂಕ : 2024 ರ ಆಗಸ್ಟ್ 16 ರಿಂದ 17 ರ ರಾತ್ರಿ 11 ಗಂಟೆವರೆಗೆ.
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಅಕ್ಟೋಬರ್ / ನವೆಂಬರ್ 2024
ನಿಮ್ಮ ಕಾಮೆಂಟ್ ಬರೆಯಿರಿ