ಮುಂಬೈ : ಹಿಜಾಬ್ ಅನ್ನು ನಿಷೇಧಿಸಿದ ಕೆಲವು ದಿನಗಳ ನಂತರ, ಮುಂಬೈನ ಕಾಲೇಜೊಂದು ತನ್ನ ಆವರಣದಲ್ಲಿ ಹರಿದ ಜೀನ್ಸ್, ಟೀ ಶರ್ಟ್ ಮತ್ತು “ರಿವಿಲಿಂಗ್ ಡ್ರೆಸ್” ಧರಿಸುವುದನ್ನು ನಿಷೇಧಿಸುವ ಹೊಸ ಡ್ರೆಸ್ ಕೋಡ್ ಜಾರಿಗೆ ತಂದಿದೆ.
ಚೆಂಬೂರ್ ಟ್ರಾಂಬೆ ಎಜುಕೇಶನ್ ಸೊಸೈಟಿಯ ಎನ್.ಜಿ. ಆಚಾರ್ಯ ಮತ್ತು ಡಿ.ಕೆ. ಮರಾಠೆ ಕಾಲೇಜಿನ ಆಡಳಿತವು ಹೊರಡಿಸಿದ ನೋಟಿಸ್ನಲ್ಲಿ, ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿರುವಾಗ “ಔಪಚಾರಿಕ ಮತ್ತು ಯೋಗ್ಯ” ಡ್ರೆಸ್ ಧರಿಸಲು ಸೂಚಿಸಿದೆ.
“ವಿದ್ಯಾರ್ಥಿಗಳು ಕ್ಯಾಂಪಸ್ನಲ್ಲಿರುವಾಗ ಔಪಚಾರಿಕ ಮತ್ತು ಯೋಗ್ಯವಾದ ಉಡುಪನ್ನು ಧರಿಸಬೇಕು. ಅವರು ಹಾಫ್ ಶರ್ಟ್ ಅಥವಾ ಪೂರ್ಣ ಶರ್ಟ್ ಮತ್ತು ಪ್ಯಾಂಟ್ ಧರಿಸಬಹುದು. ಹುಡುಗಿಯರು ಮತ್ತು ಭಾರತೀಯ ಮತ್ತು ಪಾಶ್ಚಿಮಾತ್ಯ ಉಡುಪುಗಳನ್ನು ಧರಿಸಬಹುದು. ವಿದ್ಯಾರ್ಥಿಗಳು ಧರ್ಮವನ್ನು ಬಹಿರಂಗಪಡಿಸುವ ಅಥವಾ ಸಾಂಸ್ಕೃತಿಕ ಅಸಮಾನತೆಯನ್ನು ತೋರಿಸುವ ಯಾವುದೇ ಉಡುಗೆಯನ್ನು ಧರಿಸಬಾರದು. ಜೀನ್ಸ್, ಟಿ- ಶರ್ಟ್ಗಳು, ಜೆರ್ಸಿಗಳನ್ನು ಅನುಮತಿಸಲಾಗುವುದಿಲ್ಲ, ”ಎಂದು ಕಾಲೇಜು ಗೇಟ್ನಲ್ಲಿ ನೇತು ಹಾಕಲಾದ ನೋಟಿಸ್ನಲ್ಲಿ ತಿಳಿಸಲಾಗಿದೆ.
“ಹಿಜಾಬ್, ಬುರ್ಕಾ, ನಕಾಬ್, ಸ್ಟೋಲ್ಗಳು, ಕ್ಯಾಪ್ಗಳು ಮತ್ತು ಬ್ಯಾಡ್ಜ್ಗಳನ್ನು ನೆಲ ಮಹಡಿಯಲ್ಲಿರುವ ಕಾಮನ್ ಕೊಠಡಿಗಳಿಗೆ ಹೋಗಿ ಮೂಲಕ ತೆಗೆದುಹಾಕಬಹುದು ಮತ್ತು ನಂತರ ಮಾತ್ರ ಕಾಲೇಜು ಕ್ಯಾಂಪಸ್ನಾದ್ಯಂತ ಓಡಾಡಬಹುದು” ಎಂದು ಜೂನ್ 27 ಸೂಚನೆಯಲ್ಲಿ ತಿಳಿಸಲಾಗಿದೆ.
ಕೆಲವು ವಿದ್ಯಾರ್ಥಿಗಳು ಹೊಸ ಡ್ರೆಸ್ ಕೋಡ್ ಬಗ್ಗೆ ತಿಳಿದಿಲ್ಲ ಮತ್ತು ಅವರು ಜೀನ್ಸ್ ಮತ್ತು ಟೀ-ಶರ್ಟ್ ಧರಿಸಿದ್ದರಿಂದ ಕಾಲೇಜಿಗೆ ಪ್ರವೇಶಿಸಲು ಅನುಮತಿಸಲಿಲ್ಲ ಎಂದು ಹೇಳಿದ್ದಾರೆ.
ಕಾಲೇಜು ಆಡಳಿತ ಮಂಡಳಿಯ ಪ್ರಧಾನ ಕಾರ್ಯದರ್ಶಿ ಸುಬೋಧ ಆಚಾರ್ಯ ಅವರು, ಈ ವರ್ಷದ ಆರಂಭದಲ್ಲಿ ಸಂಸ್ಥೆ ಹೊರಡಿಸಿದ ಸುತ್ತೋಲೆಯನ್ನು ಉಲ್ಲೇಖಿಸಿ, ನೋಟೀಸ್ ಹೊಸದಲ್ಲ. ಕಾಲೇಜು ಈಗ ಯಾವುದೇ ಹೊಸ ಸೂಚನೆಯನ್ನು ನೀಡಿಲ್ಲ ಎಂದು ಹೇಳಿದ್ದಾರೆ.
ಕಾಲೇಜು ಆವರಣದೊಳಗೆ ಹಿಜಾಬ್, ನಖಾಬ್, ಬುರ್ಕಾ, ಸ್ಟೋಲ್ಸ್, ಕ್ಯಾಪ್ಸ್ ಮತ್ತು ಬ್ಯಾಡ್ಜ್ಗಳ ಧರಿಸುವುದರ ಮೇಲೆ ಕಾಲೇಜು ಆಡಳಿತ ಈ ಹಿಂದೆ ನಿಷೇಧ ಹೇರಿತ್ತು, ಇದನ್ನು ಪ್ರಶ್ನಿಸಿ ಒಂಬತ್ತು ವಿದ್ಯಾರ್ಥಿನಿಯರು ಬಾಂಬೆ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು.
ನ್ಯಾಯಮೂರ್ತಿಗಳಾದ ಎ.ಎಸ್. ಚಂದೂರ್ಕರ್ ಮತ್ತು ರಾಜೇಶ ಪಾಟೀಲ ಅವರಿದ್ದ ವಿಭಾಗೀಯ ಪೀಠ, ಕಾಲೇಜು ತೆಗೆದುಕೊಂಡ ನಿರ್ಧಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲಎಂದು ಹೇಳಿ ಅರ್ಜಿಯನ್ನು ವಜಾಗೊಳಿಸಿದೆ.
ಕಾಲೇಜು ಆಡಳಿತ ಮಂಡಳಿಯ ಪರ ವಾದ ಮಂಡಿಸಿದ ಹಿರಿಯ ವಕೀಲ ಅನಿಲ ಅಂತೂರಕರ್, ಎಲ್ಲಾ ಧರ್ಮ ಮತ್ತು ಜಾತಿಗೆ ಸೇರಿದ ಎಲ್ಲಾ ವಿದ್ಯಾರ್ಥಿಗಳಿಗೆ ಒಂದೇ ರೀಯಯ ಡ್ರೆಸ್ ಕೋಡ್ ಜಾರಿಗೆ ತರಲಾಗಿದೆ ಎಂದು ವಾದಿಸಿದರು. ಹಿಜಾಬ್, ನಖಾಬ್ ಮತ್ತು ಬುರ್ಕಾವನ್ನು ನಿಷೇಧಿಸುವ ನಿರ್ಧಾರವು ಕೇವಲ ಏಕರೂಪದ ಡ್ರೆಸ್ ಕೋಡ್ಗಾಗಿ ಶಿಸ್ತಿನ ಕ್ರಮವಾಗಿದೆ ಮತ್ತು ಇದು ಯಾವುದೇ ಸಮುದಾಯದ ವಿರುದ್ಧ ಅಲ್ಲ ಎಂದು ಕಾಲೇಜು ಹೇಳಿದೆ.
ನಿಮ್ಮ ಕಾಮೆಂಟ್ ಬರೆಯಿರಿ