“2 ತಿಂಗಳಲ್ಲಿ 2 ಮಕ್ಕಳನ್ನು ಕಳೆದುಕೊಂಡೆವು… “: ಸೇನಾ ಬೆಂಗಾವಲು ಮೇಲೆ ನಡೆದ ಉಗ್ರರ ದಾಳಿಯಲ್ಲಿ ಮೃತಪಟ್ಟ ಸೈನಿಕನ ಕುಟುಂಬ

ಡೆಹ್ರಾಡೂನ್: ಭಾರತೀಯ ಸೇನೆಯಲ್ಲಿ ಮೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದ 33 ವರ್ಷದ ವ್ಯಕ್ತಿಯೊಬ್ಬರನ್ನು ಕಳೆದುಕೊಂಡು ದುಃಖದಿಂದ ಹೊರಬರಲು ಹೆಣಗಾಡುತ್ತಿದ್ದ ಕುಟುಂಬವೊಂದು ಮತ್ತೊಂದು ಭಾರಿ ಆಘಾತಕ್ಕೆ ಒಳಗಾಗಿದೆ. ಸೋಮವಾರ ಜಮ್ಮು ಮತ್ತು ಕಾಶ್ಮೀರದಲ್ಲಿ ಸೇನಾ ಬೆಂಗಾವಲು ಪಡೆ ಮೇಲೆ ನಡೆದ ದಾಳಿಯಲ್ಲಿ ಆತನ ಸೋದರ ಸಂಬಂಧಿ 26 ವರ್ಷದ ಆದರ್ಶ ನೇಗಿ ಮೃತಪಟ್ಟಿದ್ದಾರೆ.
“ಎರಡು ತಿಂಗಳ ಹಿಂದೆ, ನಾವು ತನ್ನ ದೇಶಕ್ಕೆ ಸೇವೆ ಸಲ್ಲಿಸುತ್ತಿದ್ದ ಮಗನನ್ನು ಕಳೆದುಕೊಂಡಿದ್ದೇವೆ. ಅವರು ಮೇಜರ್ ಆಗಿದ್ದರು. ಈಗ, ಜಮ್ಮು ಮತ್ತು ಕಾಶ್ಮೀರದಲ್ಲಿ ಬೆಂಗಾವಲು ಪಡೆ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲಿ ಪೌರಿ-ಗಢವಾಲ್ ಪ್ರದೇಶದ ಐವರು ಸೈನಿಕರು ಮೃತಪಟ್ಟಿದ್ದಾರೆ ಎಂದು ನಾವು ತಿಳಿದುಕೊಂಡಿದ್ದೇವೆ. ಇದರಲ್ಲಿ ಆದರ್ಶ ಸೇರಿದಂತೆ ನಮ್ಮ ಪ್ರದೇಶದ ಐದು ಜನರು ಮೃತಪಟ್ಟಿದ್ದಾರೆ” ಎಂದು ರೈಫಲ್‌ಮ್ಯಾನ್‌ ಆದರ್ಶ ನೇಗಿ ಚಿಕ್ಕಪ್ಪ, ಉತ್ತರಾಖಂಡದ ತೆಹ್ರಿ ಜಿಲ್ಲೆಯ ಥಾಟಿ ದಗರ್ ಗ್ರಾಮದ ನಿವಾಸಿ ಬಲ್ವಂತ ಸಿಂಗ್ ನೇಗಿ ಹೇಳಿದರು.
ಬಲ್ವಂತ ನೇಗಿ ಅವರ ಪುತ್ರ, ಮೇಜರ್ ಪ್ರಣಯ ನೇಗಿ ಅವರು ಲೇಹ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು ಮತ್ತು ಏಪ್ರಿಲ್ 30 ರಂದು ಮೃತಪಟ್ಟಿದ್ದರು.

ಪ್ರಮುಖ ಸುದ್ದಿ :-   ವೀಡಿಯೊ.. |ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಒಂಬತ್ತು ಗುಂಡು ಹಾರಿಸಿದ ಖಲಿಸ್ತಾನಿ ಭಯೋತ್ಪಾದಕ

ಸೋಮವಾರ ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಮಚೇಡಿ ಪ್ರದೇಶದಲ್ಲಿ ಸೇನಾ ಬೆಂಗಾವಲು ಪಡೆಯ ಮೇಲೆ ಭಯೋತ್ಪಾದಕರು ದಾಳಿ ನಡೆಸಿದ ವೇಳೆ ಮೃತರಾದ ಐವರು ಯೋಧರಲ್ಲಿ ಆದರ್ಶ ನೇಗಿ ಸೇರಿದ್ದಾರೆ. ಕಥುವಾದಿಂದ ಸುಮಾರು 150 ಕಿ.ಮೀ ದೂರದಲ್ಲಿರುವ ಮಚೇಡಿ-ಕಿಂಡ್ಲಿ-ಮಲ್ಹಾರ್ ರಸ್ತೆಯಲ್ಲಿ ನಿತ್ಯ ಗಸ್ತು ತಿರುಗುತ್ತಿದ್ದ ಸೇನಾ ವಾಹನಗಳ ಮೇಲೆ ಉಗ್ರರು ಗ್ರೆನೇಡ್ ಎಸೆದು ನಂತರ ಗುಂಡಿನ ದಾಳಿ ನಡೆಸಿದ್ದರು.
ಆದರ್ಶ ನೇಗಿ 2018 ರಲ್ಲಿ ಗರ್ವಾಲ್ ರೈಫಲ್ಸ್‌ಗೆ ಸೇರಿದರು ಮತ್ತು ಅವರ ತಂದೆ ಕೃಷಿಕ, ತಾಯಿ, ಸಹೋದರ ಮತ್ತು ಹಿರಿಯ ಸಹೋದರಿಯನ್ನು ಅಗಲಿದ್ದಾರೆ. ಅವರ ಸಹೋದರ ಚೆನ್ನೈನಲ್ಲಿ ಕೆಲಸ ಮಾಡುತ್ತಿದ್ದರೆ, ಅವರ ಅಕ್ಕ ಮದುವೆಯಾಗಿದ್ದಾರೆ.
“ಆತ ತುಂಬಾ ಚುರುಕಾದ ಮಗು ಮತ್ತು ಹಳ್ಳಿಯ ಶಾಲೆಯಲ್ಲಿ ತನ್ನ ಇಂಟರ್ಮೀಡಿಯೇಟ್ ಅನ್ನು ಪೂರ್ಣಗೊಳಿಸಿ ಗರ್ವಾಲ್ ವಿಶ್ವವಿದ್ಯಾಲಯದಲ್ಲಿ ಬಿಎಸ್ಸಿ ಓದಿದ್ದ. ಅಂತಿಮವಾಗಿ ಆತನಿಗೆ ಸೈನ್ಯದಲ್ಲಿ ಕೆಲಸ ಸಿಕ್ಕಿತ್ತು ಮತ್ತು ಈಗ ದೇಶಕ್ಕಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾನೆ ಎಂದು ಚಿಕ್ಕಪ್ಪ ಹೇಳಿದರು.

“ಎರಡು ತಿಂಗಳಲ್ಲಿ ನಾವು ಇಬ್ಬರು ಗಂಡು ಮಕ್ಕಳನ್ನು ಕಳೆದುಕೊಂಡಿದ್ದೇವೆ. ಸರ್ಕಾರವು ಕೆಲವು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ನಾನು ವಿನಂತಿಸುತ್ತೇನೆ. ಉದ್ಯೋಗವು ವಿರಳವಾಗಿದೆ ಮತ್ತು ಗರ್ವಾಲ್ ಮತ್ತು ಕುಮಾನ್‌ನಿಂದ ದೇಶ ಸೇವೆ ಮಾಡಲು ಹೋದ ಮಕ್ಕಳು ಆಗಾಗ್ಗೆ ಹುತಾತ್ಮರಾಗಿ ಮರಳುತ್ತಾರೆ. ಇದು ಇಡೀ ಕುಟುಂಬವನ್ನು ದುಃಖದಲ್ಲಿ ಮುಳುಗಿಸುತ್ತದೆ” ಎಂದು ಅವರು ಹೇಳಿದರು. .
ಆದರ್ಶ ನೇಗಿ ಅವರ ತಂದೆ ದಲ್ಬೀರ್ ಸಿಂಗ್ ನೇಗಿ ಅವರು , “ನಾವು ಭಾನುವಾರ ಆತನೊಂದಿಗೆ ಮಾತನಾಡಿದ್ದೇನೆ. ಆತ ಊಟ ಮಾಡುತ್ತಿದ್ದೇನೆ ಹಾಗೂ ಡ್ಯೂಟಿಗೆ ಹೋಗುತ್ತಿದ್ದೇನೆ ಎಂದು ಹೇಳಿದ. ಆತ ಮದುವೆಯಲ್ಲಿ ಭಾಗವಹಿಸಲು ಗ್ರಾಮಕ್ಕೆ ಬಂದಿದ್ದ ಮತ್ತು ಮಾರ್ಚ್‌ನಲ್ಲಿ ಹೋಗಿದ್ದ ” ಎಂದು ಹೇಳಿದರು.

ಪ್ರಮುಖ ಸುದ್ದಿ :-   ಮನೆಯಲ್ಲೇ ಟೆನಿಸ್ ಆಟಗಾರ್ತಿ ರಾಧಿಕಾ ಯಾದವಗೆ ಗುಂಡಿಕ್ಕಿ ಕೊಂದ ತಂದೆ....!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement