ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪುತ್ರಿ ಬಗ್ಗೆ ನಕಲಿ ಪೋಸ್ಟ್ : ಯೂ ಟ್ಯೂಬರ್ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲು

ಮುಂಬೈ: ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರ ಪುತ್ರಿಯ ಕುರಿತು ‘ಎಕ್ಸ್‌’ನಲ್ಲಿ (ಟ್ವಿಟರ್‌) ನಕಲಿ ಸಂದೇಶವನ್ನು ಪೋಸ್ಟ್ ಮಾಡಿದ ಆರೋಪದ ಮೇಲೆ ಯೂ ಟ್ಯೂಬರ್‌ ಧ್ರುವ ರಾಠಿ ವಿರುದ್ಧ ಮಹಾರಾಷ್ಟ್ರದ ಸೈಬರ್ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಹಾರಾಷ್ಟ್ರ ಸೈಬರ್ ಪೊಲೀಸ್ ಇಲಾಖೆಯ ಪ್ರಕಾರ, @dhruvrahtee ಹ್ಯಾಂಡಲ್ ಹೊಂದಿರುವ ಎಕ್ಸ್‌ ಖಾತೆಯಲ್ಲಿ ಅಂಜಲಿ ಬಿರ್ಲಾ ಅವರ ಬಗ್ಗೆ ನಕಲಿ ಸುದ್ದಿಯನ್ನು ಪೋಸ್ಟ್‌ ಮಾಡಿದೆ. ಅಂಜಲಿ ಬಿರ್ಲಾ ಅವರು ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್‌ಸಿ) ಪರೀಕ್ಷೆಗೆ ಹಾಜರಾಗದೆ ತೇರ್ಗಡೆಯಾಗಿದ್ದಾರೆ ಎಂದು ನಕಲಿ ಪೋಸ್ಟ್‌ ಹೇಳಿದೆ.
ಬಿರ್ಲಾ ಅವರ ಸಂಬಂಧಿಯೊಬ್ಬರು ನೀಡಿದ ದೂರಿನ ಮೇರೆಗೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ವಿವಿಧ ಸೆಕ್ಷನ್‌ಗಳು ಹಾಗೂ ಐಟಿ ಕಾಯ್ದೆಯ ಅಡಿಯಲ್ಲಿ ಉದ್ದೇಶಪೂರ್ವಕ ಮಾನ ಹಾನಿ ಮತ್ತು ಶಾಂತಿಗೆ ಭಂಗ ತಂದಿರುವ ಆರೋಪದ ಮೇಲೆ ಧ್ರುವ ರಾಠಿ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

Dhruv Rathee (Parody) @dhruv_rathee ಖಾತೆಯಿಂದ ನಕಲಿ ಪೋಸ್ಟ್‌ ಮಾಡಲಾಗಿದೆ. ಜತೆಗೆ, ಧ್ರುವ ರಾಠಿಯ @dhruvrahtee ಅಧಿಕೃತ ಖಾತೆಯ ಬಗ್ಗೆಯೂ ತನಿಖೆ ನಡೆಸುತ್ತಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.
ಆಪಾದಿತ ನಕಲಿ ಸಂದೇಶವನ್ನು ವಿಡಂಬನಾತ್ಮಕ ಖಾತೆಯಿಂದ (parody account) ಪೋಸ್ಟ್ ಮಾಡಲಾಗಿದೆ ಮತ್ತು ಧ್ರುವ ರಾಥಿಗೆ ಸೇರಿದದ್ದಲ್ಲ ಎಂದು ಗಮನಸೆಳೆದಾಗ “ನಾವು ಈ ವಿಷಯವನ್ನು ತನಿಖೆ ಮಾಡುತ್ತಿದ್ದೇವೆ” ಎಂದು ಅಧಿಕಾರಿ ಹೇಳಿದರು.
ಪರೋಡಿ ಖಾತೆ ((parody account)ಯು ಶನಿವಾರ ಮತ್ತೊಂದು ಟ್ವೀಟ್ ಅನ್ನು ಪೋಸ್ಟ್ ಮಾಡಿದ್ದು, “@MahaCyber1 ಅವರ ನಿರ್ದೇಶನದಂತೆ, ನಾನು ಅಂಜಲಿ ಬಿರ್ಲಾ ಅವರ ಎಲ್ಲಾ ಪೋಸ್ಟ್‌ಗಳು ಮತ್ತು ಕಾಮೆಂಟ್‌ಗಳನ್ನು ಅಳಿಸಿದ್ದೇನೆ, ನನಗೆ ಸತ್ಯಗಳ ಬಗ್ಗೆ ತಿಳಿದಿಲ್ಲದ ಕಾರಣ ಮತ್ತು ಬೇರೊಬ್ಬರ ಟ್ವೀಟ್‌ಗಳನ್ನು ನಕಲಿಸಿ ಮತ್ತು ಅದನ್ನು ಹಂಚಿಕೊಂಡಿದ್ದರಿಂದ ನಾನು ಕ್ಷಮೆಯಾಚಿಸಲು ಬಯಸುತ್ತೇನೆ ಎಂದು ಬರೆಯಲಾಗಿದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement