ಬೆಂಗಳೂರು ವಿಮಾನ ನಿಲ್ದಾಣದಲ್ಲಿ 30 ಕೋಟಿ ರೂ. ಮೌಲ್ಯದ ಕೊಕೇನ್ ವಶ; ಮಹಿಳೆ ಬಂಧನ

ಬೆಂಗಳೂರು : ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಡೈರೆಕ್ಟರೇಟ್ ಆಫ್ ರೆವೆನ್ಯೂ ಇಂಟೆಲಿಜೆನ್ಸ್ (ಡಿಆರ್‌ಐ) ಕೀನ್ಯಾದ ಮಹಿಳೆಯೊಬ್ಬರಿಂದ 30 ಕೋಟಿ ರೂಪಾಯಿ ಮೌಲ್ಯದ ಕೊಕೇನ್ ಅನ್ನು ವಶಪಡಿಸಿಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜುಲೈ 12 ರಂದು ದೋಹಾದಿಂದ ಇಂಡಿಗೋ ವಿಮಾನದಲ್ಲಿ ಬೆಂಗಳೂರಿಗೆ ಬಂದಿಳಿದ ಮಹಿಳೆಯನ್ನು ಡಿಆರ್‌ಐ ಘಟಕವು ನಿರ್ದಿಷ್ಟ ಮಾಹಿತಿಯ ಆಧಾರದ ಮೇಲೆ ತಪಾಸಣೆಗೆ ಒಳಪಡಿಸಿದೆ. ತಪಾಸಣೆಯ ನಂತರ, ಅಧಿಕಾರಿಗಳು ಪ್ರಯಾಣಿಕರ ಚೆಕ್-ಇನ್ ಲಗೇಜ್‌ನ ತಳದಲ್ಲಿ ಮೂರು ಕಿಲೋಗ್ರಾಂಗಳಷ್ಟು ಆಫ್-ವೈಟ್ ಪೌಡರ್ ವಸ್ತುವನ್ನು ಪತ್ತೆ ಮಾಡಿದ್ದಾರೆ. ನಂತರ ಮಹಿಳೆಯನ್ನು ಬಂಧಿಸಲಾಯಿತು.
“ಫೀಲ್ಡ್ ಟೆಸ್ಟಿಂಗ್ ಕಿಟ್‌ನ ಪ್ರಕಾರ ಪರೀಕ್ಷೆಯಲ್ಲಿ ಪುಡಿಮಾಡಿದ ವಸ್ತುವು ಕೊಕೇನ್‌ ಎಂದು ದೃಢಪಟ್ಟುದೆ. ಪ್ರಯಾಣಿಕಳನ್ನು ಎನ್‌ಡಿಪಿಎಸ್ (ನಾರ್ಕೋಟಿಕ್ ಡ್ರಗ್ಸ್ ಮತ್ತು ಸೈಕೋಟ್ರೋಪಿಕ್ ಸಬ್‌ಸ್ಟೆನ್ಸ್) ಆಕ್ಟ್, 1985 ರ ನಿಬಂಧನೆಗಳ ಅಡಿಯಲ್ಲಿ ಬಂಧಿಸಲಾಗಿದೆ. ಹೆಚ್ಚಿನ ತನಿಖೆ ಪ್ರಗತಿಯಲ್ಲಿದೆ” ಎಂದು ಅಧಿಕಾರಿ ಹೇಳಿದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement