ಮುಂಬೈ : ಏರ್ ಇಂಡಿಯಾ ಸಂಸ್ಥೆಯು ಏರ್‌ಪೋರ್ಟ್ ಲೋಡರ್ ಕೆಲಸಕ್ಕಾಗಿ ನಡೆಸುತ್ತಿರುವ ನೇಮಕಾತಿ ಪ್ರಕ್ರಿಯೆ ಮಂಗಳವಾರ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಲ್ತುಳಿದ ಅಪಾಯದ ಭೀತಿ ಸೃಷ್ಟಿಸಿತ್ತು.
2,216 ಹುದ್ದೆಗಳಿಗೆ 25 ಸಾವಿರಕ್ಕೂ ಅಧಿಕ ಮಂದಿ ಆಕಾಂಕ್ಷಿಗಳು ಹಾಜರಾಗಿದ್ದರಿಂದ. ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರೀಕ್ಷೆ ಮಾಡದೇ ಇದ್ದ ಏರ್ ಇಂಡಿಯಾ ಸಿಬ್ಬಂದಿ, ಜನಜಂಗುಳಿಯನ್ನು ನಿಯಂತ್ರಿಸಲು ಪರದಾಡಬೇಕಾಯಿತು.
ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಲಗೇಜ್ ಹಾಗೂ ಇತರೆ ಸರಕುಗಳನ್ನು ವಿಮಾನದಿಂದ ಇಳಿಸುವ ಹಾಗೂ ತುಂಬಿಸುವ, ಬ್ಯಾಗೇಜ್ ಬೆಲ್ಟ್‌ಗಳ ನಿರ್ವಹಣೆ ಮತ್ತು ರಾಂಪ್ ಟ್ರ್ಯಾಕ್ಟರ್‌ಗಳ ನಿರ್ವಹಣೆಯ ಕೆಲಸಗಳನ್ನು ಏರ್‌ಪೋರ್ಟ್ ಲೋಡರ್‌ಗಳಿಗೆ ವಹಿಸಲಾಗುತ್ತದೆ. ಪ್ರತಿ ವಿಮಾನಕ್ಕೂ ಲಗೇಜ್‌ಗಳು, ಸರಕು ಹಾಗೂ ಆಹಾರ ಪೂರೈಕೆಗಳ ನಿರ್ವಹಣೆಗೆ ಕನಿಷ್ಠ ಐವರು ಲೋಡರ್‌ಗಳು ಬೇಕು.
ಈ ಕೆಲಸಕ್ಕೆ ಅರ್ಜಿ ಅಲ್ಲಿಸಲು ಕೌಂಟರ್‌ಗಳನ್ನು ತಲುಪಲು ಆಕಾಂಕ್ಷಿಗಳು ಒಬ್ಬರನ್ನೊಬ್ಬರು ತಳ್ಳಾಡುತ್ತಿದ್ದರಿಂದ ನೂಕುನುಗ್ಗಲು ನಿರ್ಮಾಣವಾಗಿತ್ತು. ಅರ್ಜಿದಾರರು ಆಹಾರ ಮತ್ತು ನೀರು ಇಲ್ಲದೆ ಗಂಟೆಗಟ್ಟಲೆ ಕಾಯ್ದು ಅನೇಕರು ಅಸ್ವಸ್ಥಗೊಂಡರು. ನಿರೀಕ್ಷೆಗೂ ಮೀರಿದ ಸಂಖ್ಯೆಯಲ್ಲಿ ಆಕಾಂಕ್ಷಿಗಳು ಲಗ್ಗೆ ಇಟ್ಟಿದ್ದರಿಂದ ವಿಮಾನ ನಿಲ್ದಾಣ ಸಿಬ್ಬಂದಿ ಹೈರಾಣಾದರು. ಕೊನೆಗೆ ಆಕಾಂಕ್ಷಿಗಳು ತಮ್ಮ ಅರ್ಜಿಗಳನ್ನು ಸಲ್ಲಿಸಿ ಸ್ಥಳದಿಂದ ತೆರಳುವಂತೆ ಸೂಚಿಸಲಾಯಿತು.
ಸಂಬಳದ ವಿವರ…
ಏರ್‌ಪೋರ್ಟ್ ಲೋಡರ್‌ಗಳಿಗೆ ಮಾಸಿಕ 20 ಸಾವಿರದಿಂದ 25 ಸಾವಿರ ರೂ.ಗಳ ವರೆಗೆ ಸಂಬಳವಿದೆ. ಆದರೆ ಓವರ್‌ಟೈಮ್ ಭತ್ಯೆ ಸೇರಿದರೆ 30 ಸಾವಿರ ರೂ.gLiಗೂ ಅಧಿಕ ಸಂಬಳ ಪಡೆಯುತ್ತಾರೆ. ಈ ಕೆಲಸಕ್ಕೆ ಮೂಲ ಶೈಕ್ಷಣಿಕ ಅರ್ಹತೆ ಇದ್ದರೆ ಸಾಕು. ಅದು ಬಹಳ ತೂಕದ ವಸ್ತುಗಳನ್ನು ಎತ್ತಿ ಇಳಿಸುವ ಶ್ರಮದಾಯಕ ಕೆಲಸ ಇರುವುದರಿಂದ ಅವರು ದೈಹಿಕ ಸದೃಢತೆಗೆ ಬೇಕು.
ನಿಮ್ಮ ಕಾಮೆಂಟ್ ಬರೆಯಿರಿ