ಚಪ್ಪಲಿ ಧರಿಸಿ ಹೋಗಿದ್ದಕ್ಕೆ ಫ್ರಿಡೊ ಸಿಇಒ, ಏಥರ್ ಸಹ-ಸಂಸ್ಥಾಪಕರಿಗೆ ಪ್ರವೇಶ ನಿರಾಕರಿಸಿದ್ದ ಬೆಂಗಳೂರು ರೆಸ್ಟೋರೆಂಟ್‌

ಬೆಂಗಳೂರು: ಬೆಂಗಳೂರಿನ ಮಾಲ್‌ನವರು ಇತ್ತೀಚೆಗೆ ಭಾರತೀಯ ಸಾಂಪ್ರದಾಯಿಕ ಉಡುಗೆಯಾದ ಧೋತಿಯನ್ನು ಧರಿಸಿದ್ದಕ್ಕಾಗಿ ವಯಸ್ಸಾದ ರೈತನಿಗೆ ಪ್ರವೇಶವನ್ನು ನಿರಾಕರಿಸಿದ ನಂತರ, ಫ್ರಿಡೋ ಸಂಸ್ಥಾಪಕ ಮತ್ತು ಸಿಇಒ ಗಣೇಶ ಸೋನಾವಾನೆ ಅವರು ತಮಗೂ ಇಂಥಹದ್ದೇ ಅನುಭವಾಗಿದ್ದನ್ನು ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ.
ತಮಗೆ ಮತ್ತು ಏಥರ್ ಸಹ-ಸಂಸ್ಥಾಪಕ ಸ್ವಪ್ನಿಲ್ ಜೈನ್ ಅವರಿಗೆ ಚಪ್ಪಲಿ ಧರಿಸಿದ್ದಕ್ಕಾಗಿ ಬೆಂಗಳೂರಿನ ರೆಸ್ಟೋರೆಂಟ್‌ಗೆ ಪ್ರವೇಶ ನಿರಾಕರಿಸಲಾಗಿತ್ತು ಎಂದು ಪೋಸ್ಟ್‌ನಲ್ಲಿ ಹೇಳಿದ್ದಾರೆ.

ಯಾವ ರೆಸ್ಟೋರೆಂಟ್‌, ಯಾವಾಗ ನಡೆದಿತ್ತು ಸೇರಿದಂತೆ ಅದರ ಬಗ್ಗೆ ಅವರು ಸರಿಯಾದ ವಿವರಗಳನ್ನು ಹಂಚಿಕೊಂಡಿಲ್ಲ, ಸೋನಾವಾನೆ ಅವರು ಶೂಗಳ ಬದಲಿಗೆ ಚಪ್ಪಲಿಗಳನ್ನು ಧರಿಸಿ ಹೋಗಿದ್ದಾಗ ಬೆಂಗಳೂರಿನ ರೆಸ್ಟೋರೆಂಟ್‌ನಲ್ಲಿ ಪ್ರವೇಶ ನಿರಾಕರಿಸಲಾಗಿತ್ತು ಎಂದು ಹೇಳಿದ್ದಾರೆ.
ಅಥರ್ ಸಹ-ಸಂಸ್ಥಾಪಕ ಸ್ವಪ್ನಿಲ್ ಮತ್ತು ನಾನು ಒಮ್ಮೆ ಬೆಂಗಳೂರಿನ ರೆಸ್ಟೋರೆಂಟ್‌ಗೆ ಹೋಗಿದ್ದೆವು ಮತ್ತು ಶೂಗಳ ಬದಲಿಗೆ ಚಪ್ಪಲಿಗಳನ್ನು ಧರಿಸಿದ್ದಕ್ಕಾಗಿ ಅಲ್ಲಿ ನಮಗೆ ಪ್ರವೇಶವನ್ನು ನಿರಾಕರಿಸಲಾಯಿತು” ಎಂದು ಸೋನಾವಾನೆ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.ನಾವು ಅದನ್ನು ಗೌರವಿಸಿ ಬೇರೆಡೆಗೆ ಹೋದೆವು, ಅದನ್ನು ತಾರತಮ್ಯ ಎಂದು ಕರೆಯುವುದಿಲ್ಲ, ಕೇವಲ ಒಂದು ಘಟನೆಯನ್ನು ಹಂಚಿಕೊಂಡಿದ್ದೇನೆ ಎಂದು ಅವರು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ನನ್ನ ಬ್ಲ್ಯಾಕ್‌ಮೇಲ್ ಮಾಡಲು ಯತ್ನ ; ಇಬ್ಬರ ಪಾತ್ರದ ಬಗ್ಗೆ ತನಿಖೆ : ಸ್ಟಿಂಗ್‌ ಬಗ್ಗೆ ಮೌನ ಮುರಿದ ಸಿದ್ದರಾಮಯ್ಯ

ಎರಡು ದಿನಗಳ ಹಿಂದೆ ಧೋತಿ ಧರಿಸಿ ಬಂದಿದ್ದಾರೆ ಎನ್ನುವ ಕಾರಣಕ್ಕೆ ಮಾಗಡಿ ರಸ್ತೆಯಲ್ಲಿರುವ ಜಿಟಿ ಮಾಲ್​​ನ (GT Mall) ಒಳಗೆ ಹಾವೇರಿ ಮೂಲದ ರೈತರೊಬ್ಬರನ್ನು ಮಾಲ್‌ ಒಳಗೆ ಬಿಟ್ಟಿರಲಿಲ್ಲ. ರೈತ ಧೋತಿ ಧರಿಸಿದ್ದರು ಹಾಗೂ ತಲೆಗೆ ಪೇಟ ಸುತ್ತಿಕೊಂಡಿದ್ದರು. ಈ ಕಾರಣಕ್ಕೆ ಮಾಲ್‌ನ ಭದ್ರತಾ ಸಿಬ್ಬಂದಿ ಅವರನ್ನು ಮಾಲ್‌ ಒಳಕ್ಕೆ ಬಿಟ್ಟಿರಲಿಲ್ಲ. ನಂತರ ಅವರ ಮಗ ನಾಗರಾಜ ಎಂಬವವರು ಇದರ ವೀಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು. ನಂತರ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ನಂತರ ಮಾಲ್‌ ನವರು ಕ್ಷಮೆ ಯಾಚಿಸಿದ್ದರು.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement