ಆರ್‌ ಎಸ್‌ ಎಸ್‌ ಹಿರಿಯ ಕಾರ್ಯಕರ್ತ ಪ.ರಾ. ನಾಗರಾಜ ಭಟ್ ನಿಧನ

ಹುಬ್ಬಳ್ಳಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ(RSS)ದ ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕದ ಉತ್ತರ ಪ್ರಾಂತ ಸಂಯೋಜಕರಾಗಿದ್ದ ಪ.ರಾ. ನಾಗರಾಜ ಭಟ್ (62) ಅವರು ಮಂಗಳವಾರ ನಿಧನರಾಗಿದ್ದಾರೆ
ಮೂಲತಃ ಅಥಣಿಯವರಾದ ಇವರು ಸದ್ಯ ಹುಬ್ಬಳ್ಳಿಯ ಗೋಕುಲ ರಸ್ತೆಯ ಕೋಟಿಲಿಂಗ ನಗರದ ನಿವಾಸಿಯಾಗಿದ್ದರು. ಮೃತರು ಪತ್ನಿ ಹಾಗೂ ಇಬ್ಬರು ಸಹೋದರರು ಮತ್ತು ಒಬ್ಬ ಸಹೋದರಿ ಹಾಗೂ ಅಪಾರ ಹಿತೈಷಿಗಳನ್ನು ಅಗಲಿದ್ದಾರೆ. 12 ವರ್ಷಗಳ ಕಾಲ ಸಂಘದ ಪ್ರಚಾರಕರಾಗಿದ್ದರು ಅವರು ವಿಭಾಗ, ಪ್ರಾಂತ ಸ್ತರದಲ್ಲಿ ಸಂಘದ ಜವಾಬ್ದಾರಿ ನಿರ್ವಹಿಸಿದ್ದರು. ಸದ್ಯ ಕುಟುಂಬ ಪ್ರಬೋಧನ ಗತಿವಿಧಿಯ ಕರ್ನಾಟಕ ಉತ್ತರ ಪ್ರಾಂತ ಸಂಯೋಜಕರಾಗಿದ್ದರು.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕರ್ನಾಟಕ ಉತ್ತರ ಪ್ರಾಂತದ ಸಂಘಚಾಲಕರಾದ ಬಸವರಾಜ ಡಂಬಳವರು ಮತ್ತು ಹಿರಿಯ ಕಾರ್ಯಕರ್ತರು ಸಂತಾಪ ಸೂಚಿಸಿದ್ದಾರೆ.

5 / 5. 3

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಸಿದ್ದರಾಮಯ್ಯಗೆ ಬ್ಲ್ಯಾಕ್‌ಮೇಲ್‌ ಮಾಡಲು ಸ್ಟಿಂಗ್ ಆಪರೇಷನ್.. ಇದ್ರಲ್ಲಿ ಕಾಂಗ್ರೆಸ್ಸಿನವರು ಇದ್ದಾರೆ: ಸಚಿವ ಯತೀಂದ್ರ

ನಿಮ್ಮ ಕಾಮೆಂಟ್ ಬರೆಯಿರಿ

advertisement