60 ಕಿಮೀ ಬೆನ್ನಟ್ಟಿದ ನಂತರ ಪಾರ್ಶ್ವನಾಥ ಲ್ಯಾಂಡ್‌ಮಾರ್ಕ್ ಸಿಇಒ ಸಂಜೀವ್ ಜೈನ್ ಬಂಧನ…

ನವದೆಹಲಿ: ರಿಯಾಲ್ಟಿ ಸಂಸ್ಥೆಯ ಪಾರ್ಶ್ವನಾಥ ಡೆವಲಪರ್ಸ್‌ನ ಅಂಗಸಂಸ್ಥೆಯ ನಿರ್ದೇಶಕ ಮತ್ತು ಸಿಇಒ ಸಂಜೀವ ಜೈನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. 60 ಕಿಲೋಮೀಟರ್ ಬೆನ್ನಟ್ಟಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ಭಾನುವಾರ ತಿಳಿಸಿದ್ದಾರೆ.
“ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಮುಂದೆ ಹಾಜರಾಗಲು ವಿಫಲವಾದ ನಂತರ ಸಿಇಒ ಸಂಜೀವ ಜೈನ್ ವಿರುದ್ಧ ಜಾಮೀನು ರಹಿತ ವಾರೆಂಟ್‌ಗಳನ್ನು ಹೊರಡಿಸಿದ ಬಳಿಕ ದೆಹಲಿಯ ಇಂದಿರಾ ಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಶಹದಾರದ ಎಸ್‌ಟಿಎಫ್ ತಂಡವು ಜೈನ್ ಅವರನ್ನು ಶನಿವಾರ ಬಂಧಿಸಿದೆ” ಎಂದು ಪೊಲೀಸ್ ಉಪ ಆಯುಕ್ತ (ಶಹದಾರ) ಸುರೇಂದ್ರ ಚೌಧರಿ ತಿಳಿಸಿದ್ದಾರೆ.

ರಜತ್ ಬಬ್ಬರ್ ಎಂಬಾತ ದಾಖಲಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾರ್ಶ್ವನಾಥ ಲ್ಯಾಂಡ್‌ಮಾರ್ಕ್ ಡೆವಲಪರ್ಸ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೈನ್ ವಿರುದ್ಧ ವಾರಂಟ್‌ಗಳನ್ನು ಹೊರಡಿಸಲಾಗಿದ್ದು, 60 ಕಿಲೋಮೀಟರ್ ಬೆನ್ನಟ್ಟಿ ಆರೋಪಿಯನ್ನು ಬಂಧಿಸಲಾಗಿದೆ ಎಂದು ಹೇಳಿಕೆ ತಿಳಿಸಿದೆ.
ಜೈನ್ ಅವರ ಗುರುಗ್ರಾಮ ನಿವಾಸದಲ್ಲಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಆರಂಭದಲ್ಲಿ ಸಿಕ್ಕಿತ್ತು. ಪೊಲೀಸ್ ತಂಡ ಅವರ ನಿವಾಸ ತಲುಪುವಷ್ಟರಲ್ಲಿ ಆರೋಪಿ ಜೈನ್ ದೆಹಲಿಗೆ ಹೋಗಿಬಿಟ್ಟಿದ್ದರು.  ಅವರನ್ಜೈನು ಪೊಲೀಸರು ಬೆನ್ನ್ನಟ್ಟಿದರು.  ಅವರು ಇಂದಿರಾಗಾಂಧಿ ಅಂತಾರಾಷ್ಟ್ರೀಯ (ಐಜಿಐ) ವಿಮಾನ ನಿಲ್ದಾಣದಲ್ಲಿದ್ದಾರೆ ಎಂದು ಸ್ಥಳೀಯ ಮೂಲಗಳು ಪೊಲೀಸ್ ತಂಡಕ್ಕೆ ಮಾಹಿತಿ ಸಿಕ್ಕಿತು. ತಕ್ಷಣವೇ ಅಲ್ಲಿಗೆ ತೆರಳಿ ಅಲ್ಲಿಂದ ಅವರನ್ನು ಬಂಧಿಸಲಾಯಿತು.

ಪ್ರಮುಖ ಸುದ್ದಿ :-   ಬೆಂಗಳೂರು ಬಳಿ ಯುವತಿಗೆ ಕಿರುಕುಳ ನೀಡಿ, ಹಲ್ಲೆಗೈದ ಗ್ಯಾಂಗ್ ; ಕೃತ್ಯ ಸಿಸಿಟಿವಿಯಲ್ಲಿ ಸೆರೆ

“ಜಾಮೀನು ರಹಿತ ನಾಲ್ಕು ವಾರಂಟ್‌ಗಳು ಮತ್ತು ರಾಷ್ಟ್ರೀಯ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಒಂದು ಜಾಮೀನು ವಾರೆಂಟ್‌ಗಳು ಜೈನ್ ವಿರುದ್ಧ ಶಹದಾರಾ ಪೊಲೀಸ್ ಠಾಣೆಯಲ್ಲಿ ಬಾಕಿ ಉಳಿದಿವೆ” ಎಂದು ಹೇಳಿಕೆಯಲ್ಲಿ ತಿಳಿಸಿದ್ದು, ಅವರನ್ನು ಭಾನುವಾರ ಆಯೋಗದ ಮುಂದೆ ಹಾಜರುಪಡಿಸಲಾಯಿತು.
ಸಂಜೀವ್ ಜೈನ್ – ರಿಯಾಲ್ಟಿ ಸಂಸ್ಥೆಯ ಪಾರ್ಶ್ವನಾಥ್ ಡೆವಲಪರ್ಸ್‌ನ ಅಂಗಸಂಸ್ಥೆಯಾದ ಪಾರ್ಶ್ವನಾಥ್ ಲ್ಯಾಂಡ್‌ಮಾರ್ಕ್ ಡೆವಲಪರ್ಸ್‌ನ ನಿರ್ದೇಶಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಅವರನ್ನು 60 ಕಿಮೀ ಬೆನ್ನಟ್ಟಿದ ನಂತರ ಬಂಧಿಸಲಾಗಿದೆ ಎಂದು ದೆಹಲಿ ಪೊಲೀಸರು ತಿಳಿಸಿದ್ದಾರೆ.

 

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement