ವಕ್ಫ್ ತಿದ್ದುಪಡಿ ಮಸೂದೆ | 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚನೆ : ಅವರಲ್ಲಿ 21 ಲೋಕಸಭಾ ಸದಸ್ಯರು; ಪಟ್ಟಿ ಇಲ್ಲಿದೆ..

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ 2024ಕ್ಕೆ ಹಲವು ವಿರೋಧ ಪಕ್ಷದ ಸದಸ್ಯರು ಕಳವಳ ವ್ಯಕ್ತಪಡಿಸಿದ ನಂತರ ಜಂಟಿ ಸಂಸದೀಯ ಸಮಿತಿಗೆ ಉಲ್ಲೇಖಿಸಲಾಗಿದ್ದು, ಅದರ ಒಂದು ದಿನದ ನಂತರ, ಲೋಕಸಭೆಯು ಶುಕ್ರವಾರ ಪ್ರಸ್ತಾವಿತ ಶಾಸನವನ್ನು ಪರಿಶೀಲಿಸಲು ಸಮಿತಿಗೆ 31 ಸದಸ್ಯರನ್ನು ನೇಮಕ ಮಾಡುವ ಪ್ರಸ್ತಾಪವನ್ನು ಅಂಗೀಕರಿಸಿತು. ಸ್ಪೀಕರ್ ಓಂ ಬಿರ್ಲಾ(Om Birla) ಅವರು ಶುಕ್ರವಾರ 31 ಸದಸ್ಯರ ಜಂಟಿ ಸಂಸದೀಯ ಸಮಿತಿ ರಚಿಸಿದ್ದಾರೆ.
ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಮಂಡಿಸಿದ ಪ್ರಸ್ತಾವನೆಯ ಪ್ರಕಾರ, ವಕ್ಫ್ (ತಿದ್ದುಪಡಿ) ಮಸೂದೆ 2024 ಅನ್ನು ಪರಿಶೀಲಿಸುವ ಜಂಟಿ ಸಮಿತಿಯು ಲೋಕಸಭೆಯಿಂದ 21 ಮತ್ತು ರಾಜ್ಯಸಭೆಯಿಂದ 10 ಸದಸ್ಯರನ್ನು ಹೊಂದಿರುತ್ತದೆ. ಮುಂದಿನ ಸಂಸತ್ ಅಧಿವೇಶನದಲ್ಲಿ ಸಮಿತಿಯು ತನ್ನ ಅಂತಿಮ ವರದಿಯನ್ನು ಸಲ್ಲಿಸಲಿದೆ.
ಜಂಟಿ ಸಂಸದೀಯ ಸಮಿತಿಯಲ್ಲಿ ಲೋಕಸಭೆಯ ಸದಸ್ಯರ ಪಟ್ಟಿ ಇಲ್ಲಿದೆ:
ಜಗದಾಂಬಿಕಾ ಪಾಲ್ (ಬಿಜೆಪಿ)
ನಿಶಿಕಾಂತ ದುಬೆ (ಬಿಜೆಪಿ)
ತೇಜಸ್ವಿ ಸೂರ್ಯ (ಬಿಜೆಪಿ)
ಅಪರಾಜಿತಾ ಸಾರಂಗಿ (ಬಿಜೆಪಿ)
ಸಂಜಯ ಜೈಸ್ವಾಲ್ (ಬಿಜೆಪಿ)
ದಿಲೀಪ ಸೈಕಿಯಾ (ಬಿಜೆಪಿ)
ಅಭಿಕಿತ್ ಗಂಗೋಪಾಧ್ಯಾಯ (ಬಿಜೆಪಿ)
ಡಿ.ಕೆ. ಅರುಣಾ (ಬಿಜೆಪಿ)
ಗೌರವ ಗೊಗೊಯ್ (ಕಾಂಗ್ರೆಸ್)
ಇಮ್ರಾನ್ ಮಸೂದ್ (ಕಾಂಗ್ರೆಸ್)
ಮೊಹಮ್ಮದ್ ಜಾವೇದ್ (ಕಾಂಗ್ರೆಸ್)
ಮೌಲಾನಾ ಮೊಹಿಬುಲ್ಲಾ (ಎಸ್‌ಪಿ)
ಕಲ್ಯಾಣ ಬ್ಯಾನರ್ಜಿ (ಟಿಎಂಸಿ)
ಎ. ರಾಜಾ (ಡಿಎಂಕೆ)
ಲವು ಶ್ರೀಕೃಷ್ಣ ದೇವರಾಯಲು (ಟಿಡಿಪಿ)
ದಿಲೇಶ್ವರ್ ಕಮಾವೈತ್ (ಜೆಡಿಯು)
ಅರವಿಂದ್ ಸಾವಂತ (ಶಿವಸೇನೆ – ಯುಬಿಟಿ)
ಸುರೇಶ ಮ್ಹಾತ್ರೆ (ಎನ್‌ಸಿಪಿ-ಶರದ್ ಪವಾರ್)
ನರೇಶ ಮ್ಹಾಸ್ಕೆ (ಶಿವಸೇನೆ)
ಅರುಣ ಭಾರತಿ (ಲೋಕ ಜನಶಕ್ತಿ ಪಕ್ಷ-ರಾಮ್ ವಿಲಾಸ್)
ಅಸಾದುದ್ದೀನ್ ಓವೈಸಿ (ಎಐಎಂಐಎಂ)
ಗುರುವಾರ ಲೋಕಸಭೆಯಲ್ಲಿ ಈ ಮಸೂದೆಯನ್ನು ಮಂಡಿಸಲಾಯಿತು ಮತ್ತು ಕೆಳಮನೆಯಲ್ಲಿ ತೀವ್ರ ಚರ್ಚೆಗೆ ಕಾರಣವಾದ ನಂತರ ಅದನ್ನು ಜಂಟಿ ಸಂಸದೀಯ ಸಮಿತಿಗೆ ಕಳುಹಿಸಲಾಯಿತು.
ವಕ್ಫ್ ಮಸೂದೆಯಲ್ಲಿನ ಪ್ರಸ್ತಾವಿತ ತಿದ್ದುಪಡಿಗಳು ಮಸೀದಿಗಳ ಕಾರ್ಯಾಚರಣೆಯಲ್ಲಿ ಹಸ್ತಕ್ಷೇಪ ಮಾಡುವ ಉದ್ದೇಶವನ್ನು ಹೊಂದಿಲ್ಲ ಎಂದು ಸರ್ಕಾರ ಹೇಳಿದರೆ, ವಿರೋಧ ಪಕ್ಷಗಳು ಕಳವಳ ವ್ಯಕ್ತಪಡಿಸಿವೆ, ಮಸೂದೆಯು ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಹೇಳಿವೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement