ಜಾರಿ ನಿರ್ದೇಶನಾಲಯದ ಮುಖ್ಯಸ್ಥರಾಗಿ ರಾಹುಲ್ ನವೀನ ನೇಮಕ

ನವದೆಹಲಿ: ಜಾರಿ ನಿರ್ದೇಶನಾಲಯದ (ಇ.ಡಿ.) ಹಂಗಾಮಿ ಮುಖ್ಯಸ್ಥ ರಾಹುಲ್ ನವೀನ ಅವರನ್ನು ಈಗ ಪೂರ್ಣಾವಧಿ ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
ಕ್ಯಾಬಿನೆಟ್ ನೇಮಕಾತಿ ಸಮಿತಿ (ಎಸಿಸಿ) ಹೊರಡಿಸಿದ ಆದೇಶದಲ್ಲಿ ಆದಾಯ ತೆರಿಗೆ ಕೇಡರ್‌ನ 1993-ಬ್ಯಾಚ್‌ನ ಭಾರತೀಯ ಕಂದಾಯ ಸೇವೆ (ಐಆರ್‌ಎಸ್) ಅಧಿಕಾರಿ ರಾಹುಲ್‌ ನವೀನ ಅವರನ್ನು “ಎರಡು ವರ್ಷಗಳ ಅವಧಿಗೆ ನೇಮಕ ಮಾಡಲಾಗಿದೆ. ಇ.ಡಿ. ನಿರ್ದೇಶಕರ ಹುದ್ದೆ ಕೇಂದ್ರ ಸರ್ಕಾರದಲ್ಲಿ ಹೆಚ್ಚುವರಿ ಕಾರ್ಯದರ್ಶಿ (ಎಎಸ್) ಶ್ರೇಣಿಯ ಹುದ್ದೆಯಾಗಿದೆ.
ನವೀನ್ (57) ಅವರು ನವೆಂಬರ್, 2019 ರಲ್ಲಿ ಇ.ಡಿ. (ED)ಗೆ ವಿಶೇಷ ನಿರ್ದೇಶಕರಾಗಿ (OSD) ನೇಮಕಗೊಂಡರು,
ಅವರು ಐಐಟಿ ಕಾನ್ಪುರದಿಂದ ಬಿಟೆಕ್ ಮತ್ತು ಎಂಟೆಕ್ ಪದವಿ ಪಡೆದಿದ್ದಾರೆ. ಮೆಲ್ಬೋರ್ನ್‌ನ ಸ್ವಿನ್‌ಬರ್ನ್ ಯೂನಿವರ್ಸಿಟಿ ಆಫ್ ಟೆಕ್ನಾಲಜಿಯಿಂದ ಎಂಬಿಎ ಪದವಿ ಪಡೆದಿದ್ದಾರೆ.

ಇವರ ಮೊದಲಿಗೆ ನಿರ್ದೇಶಕರಾಗಿದ್ದ ಸಂಜಯಕುಮಾರ ಮಿಶ್ರಾ ಅವರ ಅಧಿಕಾರಾವಧಿಯು ಸೆಪ್ಟೆಂಬರ್ 2023 ರಲ್ಲಿ ಮುಕ್ತಾಯವಾದ ನಂತರ ಅವರನ್ನು ಇ.ಡಿ.ಯ ಹಂಗಾಮಿ ನಿರ್ದೇಶಕರನ್ನಾಗಿ ನೇಮಿಸಲಾಗಿತ್ತು.
ಮಿಶ್ರಾ ಅವರ ನಿಕಟವರ್ತಿಯಾಗಿ ಪರಿಗಣಿಸಲ್ಪಟ್ಟಿರುವ ರಾಹುಲ್‌ ನವೀನ ಅಂತಾರಾಷ್ಟ್ರೀಯ ತೆರಿಗೆ ವಿಷಯಗಳಲ್ಲಿ ಪರಿಣಿತರು. ಬಿಹಾರಕ್ಕೆ ಸೇರಿದವರು ಮತ್ತು 30 ವರ್ಷಗಳಿಂದ ಐಟಿ ಇಲಾಖೆಯಲ್ಲಿ ಕೆಲಸ ಮಾಡಿದ್ದಾರೆ. 2004-08 ರಿಂದ ಅಂತಾರಾಷ್ಟ್ರೀಯ ತೆರಿಗೆ ವಿಭಾಗದಲ್ಲಿ ಅವರ ಅವಧಿಯಲ್ಲಿ, ಐ-ಟಿ ಇಲಾಖೆಯು ವೊಡಾಫೋನ್ ಪ್ರಕರಣ ಸೇರಿದಂತೆ ಹಲವಾರು ಕಡಲಾಚೆಯ ವಹಿವಾಟುಗಳ ಮೇಲೆ ಬೆಳಕು ಚೆಲ್ಲಿದ್ದರು.
ವಿದೇಶಿ ವಿನಿಮಯ ನಿರ್ವಹಣಾ ಕಾಯಿದೆಯ (FEMA) ನಾಗರಿಕ ನಿಬಂಧನೆಗಳ ಹೊರತಾಗಿ ಹಣ ವರ್ಗಾವಣೆ ತಡೆ ಕಾಯ್ದೆ (PMLA) ಮತ್ತು ಪ್ಯುಗಿಟಿವ್ ಎಕನಾಮಿಕ್ ಅಪರಾಧಿಗಳ ಕಾಯಿದೆ (FEOA) ಎಂಬ ಎರಡು ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ED ಹಣಕಾಸಿನ ಅಪರಾಧಗಳನ್ನು ತನಿಖೆ ಮಾಡುತ್ತದೆ.

ಪ್ರಮುಖ ಸುದ್ದಿ :-   ಒಂದೇ ಕುಟುಂಬದ ಐವರು ಸಾವು ; ಹಿಂದಿನ ರಾತ್ರಿ ನೂಡಲ್ಸ್‌ ಸೇವಿಸಿದ್ದ ಕುಟುಂಬ

4.7 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement