ಭೂ ವೀಕ್ಷಣಾ ಉಪಗ್ರಹ ಉಡಾವಣೆ ; ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದ ಇಸ್ರೊ

ಶ್ರೀಹರಿಕೋಟಾ : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಶ್ರೀಹರಿಕೋಟಾದ ಸತೀಶ ಧವನ್ ಬಾಹ್ಯಾಕಾಶ ಕೇಂದ್ರದಿಂದ ಸಣ್ಣ ಉಪಗ್ರಹ ಉಡಾವಣಾ ವಾಹನದಲ್ಲಿ (ಎಸ್‌ಎಸ್‌ಎಲ್‌ವಿ-ಡಿ3) ಭೂ ವೀಕ್ಷಣಾ ಉಪಗ್ರಹವನ್ನು (ಇಒಎಸ್-08) ಶುಕ್ರವಾರ ಯಶಸ್ವಿಯಾಗಿ ಉಡಾವಣೆ ಮಾಡಿದೆ. ಹಾಗೂ ಉಡಾವಣೆಯಾದ ಸುಮಾರು 17 ನಿಮಿಷಗಳ ನಂತರ, EOS-08 ಉಪಗ್ರಹವನ್ನು SR-0 DEMOSAT ಜೊತೆಗೆ ಯಶಸ್ವಿಯಾಗಿ 475 ಕಿಮೀ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಿದೆ.
ಇದು ಭಾರತೀಯ ಉದ್ಯಮ ಮತ್ತು ನ್ಯೂಸ್ಪೇಸ್ ಇಂಡಿಯಾ ಲಿಮಿಟೆಡ್ (NSIL)ನ ಭವಿಷ್ಯದ ಕಾರ್ಯಾಚರಣೆಗಳಿಗೆ ದಾರಿ ಮಾಡಿಕೊಡುತ್ತದೆ.
SSLV-D3 ಮಿಷನ್ ಅನ್ನು ಆರಂಭದಲ್ಲಿ ಆಗಸ್ಟ್ 15 ಕ್ಕೆ ನಿಗದಿಪಡಿಸಲಾಗಿತ್ತು ಆದರೆ ನಂತರ ಒಂದು ದಿನಕ್ಕೆ ಮುಂದೂಡಲಾಯಿತು. ಇದು ಬಾಹ್ಯಾಕಾಶ ಯೋಜನೆಯನ್ನು ಕಡಿಮೆ ವೆಚ್ಚದಲ್ಲಿ ಒದಗಿಸುವ ಇಸ್ರೋದ ಪ್ರಯತ್ನಗಳಲ್ಲಿ ಮಹತ್ವದ ಹೆಜ್ಜೆಯಾಗಿದೆ.

EOS-08 ಎಂದರೇನು?
EOS-08, ಸುಮಾರು 175.5 ಕೆಜಿ ತೂಗುವ, ಹೊಸ ತಂತ್ರಜ್ಞಾನಗಳುಳ್ಳ ಮತ್ತು ಮೈಕ್ರೋಸ್ಯಾಟಲೈಟ್ ಬಸ್‌ಗಳಿಗೆ ಹೊಂದಿಕೆಯಾಗುವ ಪೇಲೋಡ್ ಉಪಕರಣಗಳನ್ನು ಪ್ರದರ್ಶಿಸಲು ವಿನ್ಯಾಸಗೊಳಿಸಲಾದ ಭೂ ವೀಕ್ಷಣಾ ಉಪಗ್ರಹವಾಗಿದೆ.
ಇಸ್ರೋದ ಮೈಕ್ರೋಸ್ಯಾಟ್/IMS-1 ಬಸ್‌ನಲ್ಲಿ ಇದನ್ನು ನಿರ್ಮಿಸಲಾಗಿದೆ, ಎಲೆಕ್ಟ್ರೋ ಆಪ್ಟಿಕಲ್ ಇನ್‌ಫ್ರಾರೆಡ್ ಪೇಲೋಡ್ (EOIR), ಗ್ಲೋಬಲ್ ನ್ಯಾವಿಗೇಷನ್ ಸ್ಯಾಟಲೈಟ್ ಸಿಸ್ಟಮ್-ರಿಫ್ಲೆಕ್ಟೋಮೆಟ್ರಿ ಪೇಲೋಡ್ (GNSS-R), ಮತ್ತು SiC UV ಡೋಸಿಮೀಟರ್ ಎಂಬ ಮೂರು ಸುಧಾರಿತ ಪೇಲೋಡ್‌ಗಳನ್ನು ಇದು ಹೊಂದಿದೆ.
EOIR ಪೇಲೋಡ್ ಮಿಡ್-ವೇವ್ ಮತ್ತು ಲಾಂಗ್-ವೇವ್ ಇನ್‌ಫ್ರಾರೆಡ್ ಬ್ಯಾಂಡ್‌ಗಳಲ್ಲಿ ಚಿತ್ರಗಳನ್ನು ಸೆರೆಹಿಡಿಯುತ್ತದೆ, ಇದು ಹಗಲು ಮತ್ತು ರಾತ್ರಿಯಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ. EOIR ಪೇಲೋಡ್ ಅನ್ನು ಮಿಡ್-ವೇವ್ IR (MIR) ಮತ್ತು ಲಾಂಗ್-ವೇವ್ IR (LWIR) ಬ್ಯಾಂಡ್‌ಗಳಲ್ಲಿ, ಉಪಗ್ರಹ ಆಧಾರಿತ ಕಣ್ಗಾವಲು, ವಿಪತ್ತು ಮೇಲ್ವಿಚಾರಣೆ, ಪರಿಸರ ಮೇಲ್ವಿಚಾರಣೆ, ಜ್ವಾಲಾಮುಖಿ ಚಟುವಟಿಕೆ ವೀಕ್ಷಣೆ ಮತ್ತು ಕೈಗಾರಿಕಾ ಮತ್ತು ವಿದ್ಯುತ್ ಸ್ಥಾವರ ವಿಪತ್ತು ಇವೇ ಮೊದಲಾದವುಗಳನ್ನು ಮೇಲ್ವಿಚಾರಣೆ ಮಾಡುತ್ತದೆ.

ಪ್ರಮುಖ ಸುದ್ದಿ :-   ನೆಲಮಂಗಲ ಬಳಿ ರಸ್ತೆ ಜಗಳ-ಹಲ್ಲೆ ಆರೋಪ: ಮಾಜಿ ಸಂಸದ ಅನಂತಕುಮಾರ ಹೆಗಡೆ ಸೇರಿ ಮೂವರ ವಿರುದ್ಧ ಎಫ್‌ಐಆರ್‌

ಮಿಡ್-ವೇವ್ ಇನ್ಫ್ರಾರೆಡ್ (MWIR) ಮತ್ತು ಲಾಂಗ್-ವೇವ್ ಇನ್ಫ್ರಾರೆಡ್ (LWIR) ನಾವು ನಮ್ಮ ಕಣ್ಣುಗಳಿಂದ ನೋಡಲಾಗದ ಬೆಳಕಿನ ವಿಧಗಳಾಗಿವೆ. ಆದರೆ, ನಾವು ಇದರ ಶಾಖವನ್ನು ಅನುಭವಿಸಬಹುದು. ಉಪಗ್ರಹಗಳು ಭೂಮಿಯನ್ನು ವೀಕ್ಷಿಸಲು ಮತ್ತು ಅಧ್ಯಯನ ಮಾಡಲು ಈ ರೀತಿಯ ಬೆಳಕನ್ನು ಬಳಸುತ್ತವೆ. GNSS-R ಪೇಲೋಡ್ ಸಾಗರ ಮೇಲ್ಮೈ ಗಾಳಿ ವಿಶ್ಲೇಷಣೆ, ಮಣ್ಣಿನ ತೇವಾಂಶದ ಮೌಲ್ಯಮಾಪನ, ಹಿಮಾಲಯ ಪ್ರದೇಶದ ಮೇಲಿನ ಕ್ರಯೋಸ್ಪಿಯರ್ ಅಧ್ಯಯನಗಳು, ಪ್ರವಾಹ ಪತ್ತೆ ಮತ್ತು ಒಳನಾಡಿನ ಜಲಮೂಲ ಪತ್ತೆಯಂತಹ ಅಪ್ಲಿಕೇಶನ್‌ಗಳಿಗಾಗಿ GNSS-R-ಆಧಾರಿತ ರಿಮೋಟ್ ಸೆನ್ಸಿಂಗ್ ಅನ್ನು ಬಳಸುತ್ತದೆ.
ಉಪಗ್ರಹದಲ್ಲಿರುವ GNSS-R ಪೇಲೋಡ್ ರಿಮೋಟ್ ಸೆನ್ಸಿಂಗ್ ಸಾಮರ್ಥ್ಯಗಳನ್ನು ಬಳಸಿ ಸಮುದ್ರದ ಮೇಲ್ಮೈ ಗಾಳಿ ವಿಶ್ಲೇಷಣೆ ಮತ್ತು ಮಣ್ಣಿನ ತೇವಾಂಶ ಮೌಲ್ಯಮಾಪನ ಮಾಡುತ್ತದೆ. ಅದರಲ್ಲಿರುವ SiC UV ಡೋಸಿಮೀಟರ್ ಅಲ್ಟ್ರಾ ವಯಲೆಟ್‌ (UV) ವಿಕಿರಣವನ್ನು ಮೇಲ್ವಿಚಾರಣೆ ಮಾಡುತ್ತದೆ. ಅಲ್ಟ್ರಾ ವಯಲೆಟ್‌ (UV) ವಿಕಿರಣವು ಸೂರ್ಯನಿಂದ ಬರುವ ನೇರಳಾತೀತ (UV) ಬೆಳಕು ಸೂರ್ಯನಿಂದ ಬರುವ ಒಂದು ರೀತಿಯ ಶಕ್ತಿಯಾಗಿದೆ ಮತ್ತು ನಮ್ಮ ಕಣ್ಣುಗಳಿಗೆ ಅಗೋಚರವಾಗಿರುತ್ತದೆ, ಆದರೆ ಇದು ಚರ್ಮದ ಮೇಲೆ ಬಿಸಿಲು ಮತ್ತು ಇತರ ಪರಿಣಾಮಗಳನ್ನು ಉಂಟುಮಾಡಬಹುದು..
EOS-08 ಮಿಷನ್ ಭಾರತದ ಬಾಹ್ಯಾಕಾಶ ಸಾಮರ್ಥ್ಯಗಳನ್ನು ಹೆಚ್ಚಿಸುವುದಲ್ಲದೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ಸಮುದಾಯದಲ್ಲಿ ತನ್ನ ಸ್ಥಾನವನ್ನು ಬಲಪಡಿಸುತ್ತದೆ.

ಪ್ರಮುಖ ಸುದ್ದಿ :-   ನೀಟ್ ಅಣಕು ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ 17 ವರ್ಷದ ಮಗಳನ್ನು ಹೊಡೆದು ಕೊಂದ ಶಿಕ್ಷಕ...!

.

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement