ಕೋಲ್ಕೊತ್ತಾ ವೈದ್ಯೆ ಅತ್ಯಾಚಾರ-ಕೊಲೆ ಪ್ರಕರಣ : ಪ್ರತಿಭಟಿಸಿದ ನಟಿ ಮಿಮಿ ಚಕ್ರವರ್ತಿಗೆ ಅತ್ಯಾಚಾರ ಬೆದರಿಕೆ

ನವದೆಹಲಿ : ಕೋಲ್ಕತ್ತಾ ಆರ್‌.ಜಿ.ಕರ್‌ ವೈದ್ಯಕೀಯ ಕಾಲೇಜು ಮತ್ತ ಆಸ್ಪತ್ರೆಯಲ್ಲಿ ನಡೆದ ವೈದ್ಯೆಯ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಯ ಪೋಸ್ಟ್‌ಗಳನ್ನು ಹಾಕಿದ ನಂತರ ತನಗೆ ಅತ್ಯಾಚಾರ ಬೆದರಿಕೆಗಳು ಮತ್ತು ಅಶ್ಲೀಲ ಸ್ವರೂಪದ ಸಂದೇಶಗಳು ಬರುತ್ತಿವೆ ಎಂದು ತೃಣಮೂಲ ಕಾಂಗ್ರೆಸ್‌ನ ಮಾಜಿ ಸಂಸದೆ ಮತ್ತು ಖ್ಯಾತ ಬೆಂಗಾಲಿ ನಟಿ ಮಿಮಿ ಚಕ್ರವರ್ತಿ ಮಂಗಳವಾರ ಹೇಳಿದ್ದಾರೆ.
ಅಲ್ಲದೆ, ಕೋಲ್ಕತ್ತಾ ಪೊಲೀಸರ ಸೈಬರ್ ಸೆಲ್ ವಿಭಾಗಕ್ಕೆ ಪೋಸ್ಟ್‌ ಅನ್ನು ಟ್ಯಾಗ್ ಮಾಡಿರುವ ನಟಿ ಮಿಮಿ ಚಕ್ರವರ್ತಿ ಅವರು,“ಮತ್ತು ನಾವು ಮಹಿಳೆಯರಿಗೆ ನ್ಯಾಯವನ್ನು ಕೋರುತ್ತಿದ್ದೇವೆ, ಕೆಲವು ವಿಷಕಾರಿ ಪುರುಷರು ಮಹಿಳೆಯರ ಪರವಾಗಿ ಜನರ ಮಧ್ಯೆ ಹೇಳುತ್ತಾರೆ. ಆದರೆ ಮುಖವಾಡ ಧರಿಸಿಕೊಂಡರು ಅತ್ಯಾಚಾರದ ಬೆದರಿಕೆಗಳನ್ನು ಹಾಕುತ್ತಾರೆ. ಯಾವ ಪಾಲನೆ ಮತ್ತು ಶಿಕ್ಷಣ ಇದಕ್ಕೆ ಅನುಮತಿ ನೀಡುತ್ತದೆ ಎಂದು ಪ್ರಶ್ನಿಸಿದ್ದಾರೆ.
ಕೋಲ್ಕತ್ತಾದ ವೈದ್ಯೆಯ ಅತ್ಯಾಚಾರ ಮತ್ತು ಹತ್ಯೆಯ ವಿರುದ್ಧದ ಪ್ರತಿಭಟನೆಯಲ್ಲೂ ನಟಿ ಮಿಮಿ ಚಕ್ರವರ್ತಿ ಭಾಗವಹಿಸಿದ್ದರು. ಆಗಸ್ಟ್ 14 ರ ರಾತ್ರಿ ನಡೆದ ಪ್ರತಿಭಟನೆಯಲ್ಲಿ ಮಿಮಿ ಅಲ್ಲದೆ, ನಟರಾದ ರಿದ್ಧಿ ಸೇನ್, ಅರಿಂದಮ್ ಸಿಲ್ ಮತ್ತು ಮಧುಮಿತಾ ಸರ್ಕಾರ್ ಕೂಡ ಭಾಗವಹಿಸಿದ್ದರು.
ಗಮನಾರ್ಹವಾಗಿ, ಮಿಮಿ ಚಕ್ರವರ್ತಿ ಅವರು ಜಾದವಪುರ ಲೋಕಸಭಾ ಕ್ಷೇತ್ರದಿಂದ (2019-2024) ತೃಣಮೂಲ ಕಾಂಕ್ರೆಸ್ಸಿನ ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರು.

ಪ್ರಮುಖ ಸುದ್ದಿ :-   ವೀಡಿಯೊಗಳು..| ಇರಾನಿನ 6 ವಾಯುನೆಲೆಗಳ ಮೇಲೆ ಇಸ್ರೇಲ್‌ ದಾಳಿ ; 15 ವಿಮಾನಗಳು ನಾಶ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement