ಬ್ಲೇಡ್‌ ಹಿಡಿದು ಗ್ಯಾಂಗ್-ರೇಪ್ ಯತ್ನದಿಂದ ಪಾರಾದ ನರ್ಸ್… !

ಪಾಟ್ನಾ: ಕೋಲ್ಕತ್ತಾದಲ್ಲಿ ತರಬೇತಿ ನಿರತ ವೈದ್ಯೆಯೊಬ್ಬರ ಮೇಲೆ ಅತ್ಯಾಚಾರ ಎಸಗಿ ಹತ್ಯೆಗೈದು, ರಾಷ್ಟ್ರವ್ಯಾಪಿ ಆಕ್ರೋಶ ಮತ್ತು ಪ್ರತಿಭಟನೆಗೆ ಕಾರಣವಾದ ಒಂದು ತಿಂಗಳ ನಂತರ, ಬಿಹಾರದ ಖಾಸಗಿ ಆಸ್ಪತ್ರೆಯೊಂದರಲ್ಲಿ ನರ್ಸ್ ಮೇಲೆ ಸಾಮೂಹಿಕ ಅತ್ಯಾಚಾರದ ಯತ್ನ ನಡೆದಿದೆ ಎಂದು ವರದಿಯಾಗಿದೆ.
ಅತ್ಯಾಚಾರಕ್ಕೆ ಯತ್ನಿಸಿದವರಲ್ಲಿ ಒಬ್ಬರು ವೈದ್ಯರಾಗಿದ್ದು, ಅವರು ಸಂಸ್ಥೆಯ ನಿರ್ವಾಹಕರೂ ಆಗಿದ್ದಾರೆ ಎಂದು ಹೇಳಲಾಗಿದೆ. ನರ್ಸ್ ವೈದ್ಯರ ಖಾಸಗಿ ಭಾಗಗಳಿಗೆ ಬ್ಲೇಡ್‌ ಹಾಕಿ ಪರಾರಿಯಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಿಹಾರದ ಸಮಸ್ಟಿಪುರ ಜಿಲ್ಲೆಯ ಮುಸ್ರಿಘರಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಗಂಗಾಪುರದ ಆರ್‌ಬಿಎಸ್ ಹೆಲ್ತ್ ಕೇರ್ ಸೆಂಟರ್‌ನಲ್ಲಿ ಬುಧವಾರ ರಾತ್ರಿ ನರ್ಸ್ ತನ್ನ ಡ್ಯೂಟಿ ಮುಗಿಸುತ್ತಿದ್ದಾಗ ಆಸ್ಪತ್ರೆಯ ಆಡಳಿತಾಧಿಕಾರಿ ಡಾ. ಸಂಜಯಕುಮಾರ ಮತ್ತು ಅವರ ಇಬ್ಬರು ಸಹಚರರು – ಅವರೆಲ್ಲರೂ ಪಾನಮತ್ತರಾಗಿ – ಆಕೆಯ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನಿಸಿದರು ಎಂದು ಆರೋಪಿಸಲಾಗಿದೆ.

ವೈದ್ಯರು ಮತ್ತು ಇತರರ ಹಿಡಿತದಿಂದ ತನ್ನನ್ನು ಬಿಡಿಸಿಕೊಳ್ಳಲು ನರ್ಸ್ ವೈದ್ಯರ ಗುಪ್ತಾಂಗಕ್ಕೆ ಬ್ಲೇಡ್‌ನಿಂದ ಸೀಳಿದ್ದಾಳೆ. ನಂತರ ಅಲ್ಲಿಂದ ತಪ್ಪಿಸಿಕೊಂಡ ನರ್ಸ್‌ ಆಸ್ಪತ್ರೆಯ ಹೊರಗಿರುವ ಮೈದಾನದಲ್ಲಿ ಅಡಗಿ ಕುಳಿತು ಪೊಲೀಸರಿಗೆ ಕರೆ ಮಾಡಿದ್ದಾಳೆ. ಪೊಲೀಸರ ಒಂದು ತಂಡ ತಕ್ಷಣವೇ ಆಸ್ಪತ್ರೆಗೆ ಧಾವಿಸಿದ್ದು, ನರ್ಸ್ ಸುರಕ್ಷಿತವಾಗಿದ್ದಾಳೆ ಎಂದು ಖಚಿತಪಡಿಸಿಕೊಂಡ ನಂತರ ವೈದ್ಯರು ಸೇರಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ಸಂಜಯಕುಮಾರ ಪಾಂಡೆ ತಿಳಿಸಿದ್ದಾರೆ. ಇನ್ನಿಬ್ಬರು ಆರೋಪಿಗಳನ್ನು ಸುನೀಲಕುಮಾರ ಗುಪ್ತಾ ಮತ್ತು ಅವಧೇಶಕುಮಾರ ಎಂದು ಗುರುತಿಸಲಾಗಿದೆ.

ಪ್ರಮುಖ ಸುದ್ದಿ :-   ತನ್ನ ಬುಡಕ್ಕೇ ಬಂದಾಗ...| ರಷ್ಯಾ ತೈಲ ಖರೀದಿಗೆ ಭಾರತದ ಮೇಲೆ ಉದ್ದೇಶಿತ ಶೇ.100 ಸುಂಕಕ್ಕೆ ತಾತ್ಕಾಲಿಕ ವಿನಾಯಿತಿ ಘೋಷಿಸಿದ ಟ್ರಂಪ್

ನರ್ಸ್ ಮೇಲೆ ಲೈಂಗಿಕ ದೌರ್ಜನ್ಯ ನಡೆಸಲು ಯತ್ನಿಸುವ ಮೊದಲು ಇವರು ಆಸ್ಪತ್ರೆಯನ್ನು ಒಳಗಿನಿಂದ ಲಾಕ್ ಮಾಡಿದ್ದಾರೆ ಮತ್ತು ಸಿಸಿಟಿವಿ ಕ್ಯಾಮೆರಾಗಳನ್ನು ಆಫ್ ಮಾಡಿದ್ದಾರೆ ಎಂದು ಪಾಂಡೆ ಹೇಳಿದರು. ನರ್ಸ್‌ ತೋರಿದ ಸಮಯ ಪ್ರಜ್ಞೆ ಮತ್ತು ಧೈರ್ಯವು ಶ್ಲಾಘನೀಯವಾಗಿದೆ ಎಂದು ಅವರು ಹೇಳಿದರು. ಅರ್ಧ ಬಾಟಲಿ ಮದ್ಯ, ನರ್ಸ್ ತನ್ನ ರಕ್ಷಣೆಗೆ ಬಳಸಿದ್ದ ಬ್ಲೇಡ್, ರಕ್ತಸಿಕ್ತ ಬಟ್ಟೆ ಮತ್ತು ಮೂರು ಸೆಲ್‌ಫೋನ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ನರ್ಸ್ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸುವ ಮೊದಲು ಮೂವರು ವ್ಯಕ್ತಿಗಳು ಮದ್ಯಪಾನ ಮಾಡುತ್ತಿದ್ದರು ಮತ್ತು ಬಿಹಾರ ಮದ್ಯ ಮುಕ್ತ ರಾಜ್ಯವಾಗಿರುವುದರಿಂದ ಅವರ ವಿರುದ್ಧ ಮದ್ಯ ನಿಷೇಧ ಕಾನೂನಿನ ಅಡಿಯಲ್ಲಿಯೂ ಆರೋಪ ಹೊರಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement