
ಬೆಂಗಳೂರು : ನಾನು ತಪ್ಪು ಮಾಡಿಲ್ಲ, ಮುಂದೆಯೂ ಮಾಡುವುದಿಲ್ಲ, ನನಗೆ ನ್ಯಾಯ ಸಿಗುವ ವಿಶ್ವಾಸ ಇದೆ ಎಂದು ಮುಡಾ ಪ್ರಕರಣದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿರುವ ಬೆನ್ನಲ್ಲೇ ಅವರ ವಿರುದ್ಧ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಮತ್ತೊಂದು ಗಂಭೀರ ಆರೋಪ ಮಾಡಿದ್ದಾರೆ.
ನಗರದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಹಿಂದೆ ಉಪಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ಒಂದು ಮನೆ ಕಟ್ಟಿದ್ದರು. ಯಾರ ಜಾಗದಲ್ಲಿ ನೀವು ಮನೆ ಕಟ್ಟಿದ್ದರು ಎಂಬುದರ ಬಗ್ಗೆ ದಾಖಲೆ ಕೊಡಬೇಕಾ? ದಲಿತರ ಸಿಎ ಸೈಟ್ನಲ್ಲಿ ಅಕ್ರಮವಾಗಿ ಮನೆ ಕಟ್ಟಿದವರು ಯಾರು ಎಂದು ಪ್ರಶ್ನಿಸಿದ್ದಾರೆ.

14 ಸೈಟ್ ತಗೊಂಡಿದ್ದಲ್ಲದೆ, ಇಂತಹದ್ದೇ ಹಗರಣದ ಸರಣಿಯೇ ಮೈಸೂರಿನಲ್ಲಿ ಇದೆ. ವಿಕಲಚೇತನ ದಲಿತ ವ್ಯಕ್ತಿಗೆ 10 ಸಾವಿರ ರೂ. ಚದಡಿ ಅಡಿ ನಿವೇಶನ ಮಂಜೂರಿ ಮಾಡಿದ್ದ ಮುಡಾ ಅವರಿಂದ 24 ಸಾವಿರ ರೂ. ಕಟ್ಟಿಸಿಕೊಂಡಿತ್ತು. ಆದರೆ ನಿವೇಶನಕ್ಕೆ ಸಂಬಂಧಿಸಿದಂತೆ ಸಾಕಮ್ಮ ಎಂಬುವರ ಹೆಸರಿನಲ್ಲಿ ಸಿದ್ದರಾಮಯ್ಯ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿ ಆ ನಿವೇಶನ ಪಡೆದು ಮನೆ ಕಟ್ಟಿದ್ದಾರೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ.
ನನ್ನದು ತೆರದ ಪುಸ್ತಕ ಎಂದು ಸಿದ್ದರಾಮಯ್ಯ ಯಾವಾಗಲೂ ಹೇಳುತ್ತಾರೆ. ಆದರೆ ಈ ವಿಚಾರ ಬಹಿರಂಗವಾಗುತ್ತದೆ ಎಂದು ಆ ಮನೆಯನ್ನು ಮಾರಾಟ ಮಾಡುವ ನಾಟಕ ಮಾಡಿದ್ದಾರೆ. ಯಾರಿಗೆ ಯಾರಿಗೆ ಮಾರಾಟ ಮಾಡಿದ್ದಾರೆ..? ಅದು ಇನ್ನೂ ಯಾರ ಕೈಯಲ್ಲಿದೆ..? ಹೆಸರಿಗೆ ಮಾರಾಟ ಎಂದು ತೋರಿಸಿಕೊಂಡಿದ್ದಾರೆ. ಅದನ್ನು ತೆಗೆದರೆ ಮತ್ತೊಂದು ಹಗರಣವಾಗುತ್ತದೆ ಎಂದು ಸಿದ್ದರಾಮಯ್ಯ ವಿರುದ್ಧ ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ. ನಾನು ರೈತರಿಗೆ ಏನು ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ. ರೈತರ ಸಾಲ ಮಾಡಿದ್ದು ನಾನಲ್ಲವೇ ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ