ಐದು ಭಾಷೆಗಳಿಗೆ ‘ಶಾಸ್ತ್ರೀಯ ಭಾಷಾ’ ಸ್ಥಾನಮಾನ ನೀಡಿದ ಕೇಂದ್ರ ಸರ್ಕಾರ

ನವದೆಹಲಿ : ಪ್ರಮುಖ ನಿರ್ಧಾರವೊಂದರಲ್ಲಿ ಕೇಂದ್ರ ಸಚಿವ ಸಂಪುಟವು ಮರಾಠಿ, ಬಂಗಾಳಿ, ಪಾಲಿ, ಪ್ರಾಕೃತ ಮತ್ತು ಅಸ್ಸಾಮಿ ಈ ಐದು ಭಾಷೆಗಳಿಗೆ “ಶಾಸ್ತ್ರೀಯ ಭಾಷೆ” ಸ್ಥಾನಮಾನ ನೀಡುವುದಕ್ಕೆ ಗುರುವಾರ ಅನುಮೋದನೆ ನೀಡಿದೆ. ಕೇಂದ್ರ ಸಚಿವ ಸಂಪುಟದ ಈ ನಿರ್ಧಾರದೊಂದಿಗೆ ಶಾಸ್ತ್ರೀಯ ಭಾಷೆ” ಸ್ಥಾನಮಾನ ಹೊಂದಿರುವ ಭಾಷೆಗಳ ಸಂಖ್ಯೆ ಆರರಿಂದ 11 ಕ್ಕೆ ಏರಿದೆ.
ಮೊದಲು ಸಂಸ್ಕೃತ, ತಮಿಳು, ತೆಲುಗು, ಕನ್ನಡ, ಮಲಯಾಳಂ ಮತ್ತು ಒಡಿಯಾ ಭಾಷೆಗಳಿಗೆ “ಶಾಸ್ತ್ರೀಯ ಭಾಷೆ” ಸ್ಥಾನಮಾನ ನೀಡಲಾಗಿತ್ತು.
ಘೋಷಣೆಯ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಸಾಮಾಜಿಕ ಮಾಧ್ಯಮ ವೇದಿಕೆ X ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತು ಪ್ರಾದೇಶಿಕ ಭಾಷೆಗಳನ್ನು ಜನಪ್ರಿಯಗೊಳಿಸಲು ತಮ್ಮ ಸರ್ಕಾರದ ಬಲವಾದ ಬದ್ಧತೆ ಬಗ್ಗೆ ಹೇಳಿದ್ದಾರೆ

.“ನಮ್ಮ ಸರ್ಕಾರವು ಭಾರತದ ಶ್ರೀಮಂತ ಇತಿಹಾಸ ಮತ್ತು ಸಂಸ್ಕೃತಿಯನ್ನು ಗೌರವಿಸುತ್ತದೆ ಮತ್ತು ಸಂಬ್ರಮಿಸುತ್ತದೆ. ಪ್ರಾದೇಶಿಕ ಭಾಷೆಗಳನ್ನು ಜನಪ್ರಿಯಗೊಳಿಸುವ ನಮ್ಮ ಬದ್ಧತೆಯಲ್ಲೂ ನಾವು ಅಚಲವಾಗಿದ್ದೇವೆ ಎಂದು ಮೋದಿ ಹೇಳಿದ್ದಾರೆ.“ಪ್ರತಿಯೊಂದೂ ಸುಂದರವಾದ ಭಾಷೆಗಳು, ನಮ್ಮ ರೋಮಾಂಚಕ ವೈವಿಧ್ಯತೆಯನ್ನು ಎತ್ತಿ ತೋರಿಸುತ್ತವೆ. ಎಲ್ಲರಿಗೂ ಅಭಿನಂದನೆಗಳು ಎಂದು ಅವರು ಹೇಳಿದ್ದಾರೆ.
2004 ರಲ್ಲಿ ತಮಿಳಿಗೆ ಸ್ಥಾನಮಾನ ನೀಡಲಾಯಿತು. 2008 ರಲ್ಲಿ ಕನ್ನಡ ಶಾಸ್ತ್ರೀಯ ಭಾಷಾ ಸ್ಥಾನಮಾನ ಪಡೆದುಕೊಂಡಿತ್ತು.

ಪ್ರಮುಖ ಸುದ್ದಿ :-   ವೀಡಿಯೊ...| ವಂದೇ ಭಾರತ ರೈಲಿನಲ್ಲಿ ಬಿಜೆಪಿ ಶಾಸಕನ ಜೊತೆ ತನ್ನ ಸೀಟು ಬದಲಾಯಿಸಿಕೊಳ್ಳಲು ಒಪ್ಪದ ಪ್ರಯಾಣಿಕನ ಮೇಲೆ ಹಲ್ಲೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement