ಬೆಂಗಳೂರು: ಇಬ್ಬರು ಪುಟ್ಟ ಮಕ್ಕಳನ್ನು ಉಸಿರುಗಟ್ಟಿಸಿ ಸಾಯಿಸಲಾಗಿದೆ. ತಾಯಿ ಆತ್ಮಹತ್ಯೆಗೆ ಯತ್ನಿಸಿದ ಆಘಾತಕಾರಿ ಘಟನೆ ನಗರದ ಸುಬ್ರಮಣ್ಯಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ ಎಂದು ವರದಿಯಾಗಿದೆ.
ಮೃತ ಮಕ್ಕಳನ್ನು ಶುಭಂ ಸಾಹು (7), ಶಿಯಾ ಸಾಹು (3) ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದ ತಾಯಿಯನ್ನು ಮಮತಾ ಸಾಹು ಎಂದು ಗುರುತಿಸಲಾಗಿದೆ.
ಜಾರ್ಖಂಡ ಮೂಲದ ಮಮತಾ ದಂಪತಿ 6 ತಿಂಗಳಿಂದ ಸುಬ್ರಮಣ್ಯಪುರದಲ್ಲಿ ವಾಸವಿದ್ದರು. ಮಮತಾ ಪತಿ ಆಟೋ ಚಾಲನೆ ಮಾಡುತ್ತಿದ್ದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಇತ್ತೀಚಿಗೆ ದಂಪತಿ ನಡುವೆ ಪದೇಪದೇ ಕಲಹಗಳು ನಡೆಯುತ್ತಿದ್ದವು. ಗುರುವಾರ ಕೂಡ ಗಂಡ-ಹೆಂಡಿರ ಮಧ್ಯೆ ಜಗಳ ನಡೆದಿದೆ ಎನ್ನಲಾಗಿದೆ.
ನಂತರ ಗಂಡ ಹೊರಗೆ ಹೋಗುತ್ತಿದ್ದಂತೆ ಮನೆ ಲಾಕ್ ಮಾಡಿಕೊಂಡ ಮಮತಾ, ಮಕ್ಕಳ ಜೊತೆ ತಾನು ಪ್ರಾಣ ಕಳೆದುಕೊಳ್ಳುವ ನಿರ್ಧಾರ ಮಾಡಿ ಮಕ್ಕಳಿಬ್ಬರನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾಳೆ ಎಂದು ಶಂಕಿಸಲಾಗಿದೆ.
ನಂತರಗಂಡನಿಗೆ ಸೆಲ್ಫಿ ಕಳಿಸಿ ಗಲತ್ ಹೋಗಯಾ.. ಮಾಫ್ ಕರೋ ಎಂದು ಮೆಸೇಜ್ ಮಾಡಿ ತಾನು ಚಾಕುವಿನಿಂದ ಕತ್ತು ಕೊಯ್ದು ಆತ್ಮಹತ್ಯೆಗೆ ಯತ್ನಿಸಿದ್ದಾಳೆ ಎನ್ನಲಾಗಿದೆ. ಮೆಸೇಜ್ ನೋಡಿದ ಕೂಡಲೇ ಪತಿ ಮನೆಗೆ ಬಂದಿದ್ದಾರೆ. ನಂತರ ಸುಬ್ರಹ್ಮಣ್ಯಪುರ ಠಾಣೆ ಪೊಲೀಸರು ಮಾಹಿತಿ ನೀಡಿದ್ದು, ಆತ್ಮಹತ್ಯೆಗೆ ಯತ್ನಿಸಿದ್ದ ಮಮತಾಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಪತಿಯಿಂದಲೇ ಹತ್ಯೆ ನಡೆದಿದೆ ಎಂದು ಮಮತಾ ಸಾಹು ಆರೋಪಿಸಿದ್ದಾಳೆ. ಈಗ ಆರೋಪ ಪ್ರತ್ಯಾರೋಪದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ