ಕಾಂಗ್ರೆಸ್‌ ನಾಯಕ ಶಶಿ ತರೂರ್ ಮೈಮೇಲೆ ಮಲಗಿದ ಎಲ್ಲಿಂದಲೋ ಬಂದ ಮಂಗ..! ಹೃದಯಸ್ಪರ್ಶಿ ಫೋಟೋ ಹಂಚಿಕೊಂಡ ಸಂಸದ

ಕಾಂಗ್ರೆಸ್ ಸಂಸದ ಶಶಿ ತರೂರ್ ಅವರು ಇತ್ತೀಚೆಗೆ ಮಂಗನೊಂದಿಗೆ ತಾವು ಮುಖಾಮುಖಿಯಾದ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅದನ್ನು ತಮಗಾದ “ಅಸಾಧಾರಣ ಅನುಭವ” ಎಂದು ಕರೆದಿದ್ದಾರೆ.
ತಮ್ಮ ತೋಟದಲ್ಲಿ ನಡೆದ ಈ ಘಟನೆಯ ಬಗ್ಗೆ ವಿವರಿಸಿದ ಅವರು, ಮಂಗವು ಅವರ ಕಾಲ ಮೇಲೆ ವಿಶ್ರಮಿಸುತ್ತಿರುವ ಮತ್ತು ಅದಕ್ಕೆ ನೀಡಿದ ಬಾಳೆಹಣ್ಣನ್ನು ತಿನ್ನುತ್ತ ಆನಂದಿಸುತ್ತಿರುವ ದೃಶ್ಯಗಳನ್ನು ಅವರು ಹಂಚಿಕೊಂಡಿದ್ದಾರೆ. ನಂತರ ಮಂಗವು ತರೂರ್‌ ಅವರನ್ನು ಆಪ್ಯಾಯಮಾನವಾಗಿ ಅಪ್ಪಿಕೊಂಡ ಫೋಟೋವನ್ನೂ ಅವರು ಹಂಚಿಕೊಂಡಿದ್ದಾರೆ. ಕೆಲವೇ ಸಮಯದಲ್ಲಿ ಚಿತ್ರಗಳು ಅಂತರ್ಜಾಲದಲ್ಲಿ ವೈರಲ್ ಆಗಿವೆ.

ಬುಧವಾರ, ಶಶಿ ತರೂರ್ ಅವರು ತಮ್ಮ ತೋಟಕ್ಕೆ ಹಾರಿ ಬಂದ ಕೋತಿಯೊಂದಿಗೆ ತಮ್ಮ ವಿಶೇಷ ಸಂವಾದದ ಬಗ್ಗೆ ಜನರಿಗೆ ತಿಳಿಸಲು X ನಲ್ಲಿ ಈ ಫೋಟೊಗಳನ್ನು ಹಂಚಿಕೊಂಡಿದ್ದಾರೆ.ಬೆಳಿಗ್ಗೆ ತನ್ನ ತೋಟದಲ್ಲಿ ಕುಳಿತು ದಿನಪತ್ರಿಕೆಯಲ್ಲಿ ಓದುತ್ತಿರುವಾಗ ಕೋತಿಯು ತನ್ನ ಬಳಿಗೆ ಬಂದು ತನ್ನ ಕಾಲ ಮೇಲೆ ಕುಳಿತುಕೊಂಡಿತು ಎಂದು ತರೂರ್‌ ಹೇಳಿದ್ದಾರೆ. ರು.
“ನಾನು ಉದ್ಯಾನದಲ್ಲಿ ಕುಳಿತು, ನನ್ನ ಬೆಳಗಿನ ಪತ್ರಿಕೆಗಳನ್ನು ಓದುತ್ತಿದ್ದಾಗ, ಒಂದು ಕೋತಿ ಅಲೆದಾಡುತ್ತಿತ್ತು, ನಂತರ ನೇರವಾಗಿ ನನ್ನ ಬಳಿಗೆ ಬಂದು ನನ್ನ ಮಡಿಲಲ್ಲಿ ಕುಳಿತಿತು” ಎಂದು ಅವರು X ನಲ್ಲಿ ಬರೆದಿದ್ದಾರೆ.

” ಹಸಿದ ಅದಕ್ಕೆ ನಾವು ಒಂದೆರಡು ಬಾಳೆಹಣ್ಣುಗಳನ್ನು ನೀಡಿದ ನಂತರ ಅದನ್ನು ತಿಂದಿತು. ನಂತರ ನನ್ನನ್ನು ತಬ್ಬಿಕೊಂಡಿತು. ಮತ್ತು ನನ್ನ ಎದೆಯ ಮೇಲೆ ತಲೆಯನ್ನಿಟ್ಟು ಮಲಗಿತು. ನಾನು ನಿಧಾನವಾಗಿ ಎದ್ದೇಳಲು ಪ್ರಾರಂಭಿಸಿದೆ, ಅದು ಹಾರಿ ಓಡಿಹೋಯಿತು” ಎಂದು ತರೂರ್ ಬರೆದಿದ್ದಾರೆ. “ಈ ಮುಖಾಮುಖಿ ಸಂಪೂರ್ಣವಾಗಿ ಶಾಂತಿಯುತವಾಗಿತ್ತು ಮತ್ತು ಸೌಮ್ಯವಾಗಿತ್ತು” ಎಂದು ಹೇಳಿದ್ದಾರೆ.
“ವನ್ಯಜೀವಿಗಳ ಬಗ್ಗೆ ಗೌರವವು ನಮ್ಮಲ್ಲಿ ಬೇರೂರಿದೆ, ಆದ್ದರಿಂದ ನಾನು ಮಂಗಗಳ ಕಡಿತದ ಅಪಾಯದ ಬಗ್ಗೆ ಸ್ವಲ್ಪ ಕಾಳಜಿ ವಹಿಸಿದರೂ, ನಾನು ಶಾಂತವಾಗಿದ್ದೆ ಮತ್ತು ನನ್ನ ಬಳಿ ಬಂದ ಅದನ್ನು ಹೆದರಿಕೆಯಿಲ್ಲದೆ ಸ್ವಾಗತಿಸಿದೆ. ನನ್ನ ನಂಬಿಕೆಯು ಬಲಗೊಂಡಿದ್ದಕ್ಕಾಗಿ ನನಗೆ ಸಂತೋಷವಾಗಿದೆ ಮತ್ತು ನಮ್ಮ ಮುಖಾಮುಖಿ ಸಂಪೂರ್ಣವಾಗಿ ಶಾಂತಿಯುತ ಮತ್ತು ಸೌಮ್ಯವಾಗಿತ್ತು ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಪಾಕಿಸ್ತಾನದ ದಾಳಿಗೆ ಭಾರತದ ಪ್ರತಿದಾಳಿ: ಪಾಕಿಸ್ತಾನದ 3 ಯುದ್ಧ ವಿಮಾನಗಳನ್ನು ಹೊಡೆದುರುಳಿಸಿದ ಭಾರತ...

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement