ಮುಂದಿನ 3 ವರ್ಷವೂ ವಿದ್ಯುತ್‌ ದರ ಏರಿಕೆ? ಕೆ ಇ ಆರ್‌ ಸಿಗೆ ಪ್ರಸ್ತಾವನೆ ಸಲ್ಲಿಕೆ

ಬೆಂಗಳೂರು: ವಿದ್ಯುತ್ ವಿತರಣಾ ಕಂಪನಿಗಳು (ಎಸ್ಕಾಮ್‌ಗಳು) ಶುಕ್ರವಾರ (ಡಿ.06) ರಂದು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಮುಂದಿನ ಮೂರು ವರ್ಷಗಳಿಗೆ ವಿದ್ಯುತ್ ದರ ಹೆಚ್ಚಳದ ಪ್ರಸ್ತಾವನೆಯನ್ನು ಸಲ್ಲಿಸಿವೆ.
ಬಹು-ವರ್ಷದ ಸುಂಕ (MYT) ವ್ಯವಸ್ಥೆಗೆ ಅಧಿಸೂಚನೆಯನ್ನು ಹೊರಡಿಸಿದ ನಂತರ ಕೆಇಆರ್‌ಸಿ (KERC) ದರ ಪರಿಷ್ಕರಣೆ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಬಹು-ವರ್ಷದ ಸುಂಕ ವ್ಯವಸ್ಥೆಯ ಪ್ರಕಾರ, ಎಸ್ಕಾಂಗಳು 2025-26 ನೇ ಸಾಲಿಗೆ 67 ರಿಂದ 70 ಪೈಸೆ, 2026-27 ನೇ ಸಾಲಿಗೆ 70 ರಿಂದ 75 ಪೈಸೆ ಮತ್ತು 2027-28 ನೇ ಸಾಲಿಗೆ 85 ರಿಂದ 90 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿವೆ. ಇದಕ್ಕೆ ಒಪ್ಪಿಗೆ ನೀಡಿದರೆ ಬೆಲೆ ಏರಿಕೆಯ ಬಿಸಿ ಗ್ರಾಹಕರಿಗೆ ತಟ್ಟಲಿದೆ.

ಪ್ರಸ್ತಾವನೆಯಲ್ಲಿ, ಬೆಸ್ಕಾಂಗೆ ಮುಂದಿನ ವರ್ಷದಲ್ಲಿ (2025-26) 2,572.69 ಕೋಟಿ ಆದಾಯದ ಕೊರತೆ ಉಂಟಾಗಲಿದೆ. ಇದನ್ನು ಹೋಗಲಾಡಿಸಲು 2025ರ ಜನವರಿಯಿಂದ ಜಾರಿಗೆ ಬರುವಂತೆ ಪ್ರತಿ ಯೂನಿಟ್‌ಗೆ 67 ಪೈಸೆ ಹೆಚ್ಚಿಸಬೇಕು ಎಂದು ಮನವಿ ಮಾಡಲಾಗಿದೆ.
ಬೆಸ್ಕಾಂ ಸೇರಿದಂತೆ ಎಲ್ಲಾ ಎಸ್ಕಾಂಗಳು ದರ ಹೆಚ್ಚಳದ ಪ್ರಸ್ತಾವನೆ ಸಲ್ಲಿಸಿವೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಇಂಧನ ಸಚಿವ ಕೆ.ಜೆ.ಜಾರ್ಜ್, ಇದು ಮಾಮೂಲಿ ಪ್ರಕ್ರಿಯೆ. ಎಲ್ಲಾ ಭಾಗಿದಾರರನ್ನು ಕರೆಸಿ ಚರ್ಚಿಸಲಾಗುವುದು ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ಕಾರವಾರ : ರಸ್ತೆ ಅಪಘಾತದಲ್ಲಿ ಖ್ಯಾತ ವೈದ್ಯ ಸಾವು

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement