ರಾಜ್ಯಸಭೆ ಚೇರ್ಮನ್‌ ಜಗದೀಪ್ ಧನಕರ ವಿರುದ್ಧ ವಿಪಕ್ಷಗಳಿಂದ ಅವಿಶ್ವಾಸ ಮಂಡನೆ

ನವದೆಹಲಿ: ಸದನದಲ್ಲಿ ಪಕ್ಷಪಾತ ಮಾಡುತ್ತಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ನೇತೃತ್ವದ ವಿಪಕ್ಷಗಳ ಇಂಡಿಯಾ ಮೈತ್ರಿಕೂಟವು ರಾಜ್ಯಸಭಾ ಚೇರ್ಮನ್‌ ಜಗದೀಪ ಧನಕರ ವಿರುದ್ಧ ಮಂಗಳವಾರ ಬೆಳಿಗ್ಗೆ ಅವಿಶ್ವಾಸ ನಿರ್ಣಯ ಮಂಡಿಸಿದೆ.
ಕಾಂಗ್ರೆಸ್, ತೃಣಮೂಲ ಕಾಂಗ್ರೆಸ್‌, ಆಮ್ ಆದ್ಮಿ ಪಕ್ಷ, ಸಮಾಜವಾದಿ ಪಕ್ಷ, ಡಿಎಂಕೆ ಮತ್ತು ರಾಷ್ಟ್ರೀಯ ಜನತಾ ದಳದ 50ಕ್ಕೂ ಹೆಚ್ಚು ಸಂಸದರ ಸಹಿಯೊಂದಿಗೆ ನೋಟಿಸ್ ಅನ್ನು ರಾಜ್ಯಸಭಾ ಕಾರ್ಯದರ್ಶಿಗೆ ಸಲ್ಲಿಸಲಾಗಿದೆ.
“ಕಲಾಪಗಳನ್ನು ಅತ್ಯಂತ ಪಕ್ಷಪಾತದ ರೀತಿಯಲ್ಲಿ ನಡೆಸುತ್ತಿರುವ ರಾಜ್ಯಸಭೆಯ ಚೇರ್ಮನ್‌ ವಿರುದ್ಧ ಔಪಚಾರಿಕವಾಗಿ ಅವಿಶ್ವಾಸ ನಿರ್ಣಯವನ್ನು ಸಲ್ಲಿಸುವುದನ್ನು ಬಿಟ್ಟು ಿಂಡಿಯಾ ಮೈತ್ರಿಕೂಟಕ್ಕೆ ಸೇರಿದ ಎಲ್ಲಾ ಪಕ್ಷಗಳಿಗೆ ಯಾವುದೇ ಬೇರೆ ಆಯ್ಕೆ ಇರಲಿಲ್ಲ” ಎಂದು ಕಾಂಗ್ರೆಸ್‌ನ ಜೈರಾಮ್ ರಮೇಶ್ ಹೇಳಿದ್ದಾರೆ.

ಇದು ಇಂಡಿಯಾ ಮೈತ್ರಿಕೂಟವು ತೆಗೆದುಕೊಂಡ ಅತ್ಯಂತ ನೋವಿನ ನಿರ್ಧಾರವಾಗಿದೆ, ಆದರೆ ಸಂಸದೀಯ ಪ್ರಜಾಪ್ರಭುತ್ವದ ಹಿತದೃಷ್ಟಿಯಿಂದ ಅವರು ಈ ಕ್ರಮವನ್ನು ತೆಗೆದುಕೊಳ್ಳಬೇಕಾಗಿದೆ ಎಂದು ಅವರು ಹೇಳಿದರು.
ತೃಣಮೂಲ ಸಂಸದೆ ಸಾಗರಿಕಾ ಘೋಷ್ ತಮ್ಮ ಹೇಳಿಕೆಯಲ್ಲಿ ಸರ್ಕಾರವು “ಸಂಸತ್ತನ್ನು ಕೊಂದಿದೆ” ಎಂದು ಆರೋಪಿಸಿದ್ದಾರೆ. ನಮ್ಮ ಹಕ್ಕುಗಳ ಅನ್ವೇಷಣೆಯಲ್ಲಿ, ಸಂಸದೀಯ ಪ್ರಜಾಪ್ರಭುತ್ವವನ್ನು ರಕ್ಷಿಸುವ ಸಲುವಾಗಿ, ನಾವು ನಮ್ಮ ಅವಿಶ್ವಾಸ ನಿರ್ಣಯ ಮಂಡಿಸಿದ್ದೇವೆ… ಜನರ ಸಮಸ್ಯೆಗಳನ್ನು ಪ್ರಸ್ತಾಪಿಸಲು ನಮಗೆ ಅವಕಾಶ ನೀಡುತ್ತಿಲ್ಲ” ಎಂದು ಆರೋಪಿಸಿದ್ದಾರೆ.
ನಿಯಮಗಳ ಪ್ರಕಾರ, ಧನಕರ ಅವರನ್ನು ತೆಗೆದುಹಾಕುವ ಪ್ರಸ್ತಾಪವನ್ನು ಸರಳ ಬಹುಮತದಿಂದ ಅಂಗೀಕರಿಸಬೇಕು, ಇದು ರಾಜ್ಯಸಭೆ. ನಂತರ ಲೋಕಸಭೆಯಲ್ಲಿ ಅಂಗೀಕಾರವಾಗಬೇಕು. ಮತ್ತು ವಿಪಕ್ಷಗಳಿಗೆ ಸ್ಪಷ್ಟ ಬಹುಮತವಿಲ್ಲದ ಕಾರಣ, ಧನಕರ ಅವರನ್ನು ರಾಜ್ಯಸಭೆ ಚೇರ್ಮನ್‌ ಸ್ಥಾನದಿಂದ ವಜಾಗೊಳಿಸುವ ಸಾಧ್ಯತೆಯಿಲ್ಲ.

ಪ್ರಮುಖ ಸುದ್ದಿ :-   ವೀಡಿಯೊ..| ಗ್ರಾಮದ ಪದ್ಧತಿ ಉಲ್ಲಂಘಿಸಿ ಮದುವೆ ; ದಂಪತಿಯನ್ನು ನೊಗಕ್ಕೆ ಕಟ್ಟಿ, ಕೋಲಿನಿಂದ ಹೊಡೆದು ಹೊಲ ಉಳುಮೆ ಮಾಡಿಸಿದ ಗುಂಪು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement