
ಕುಂಬಮ್ : ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯಲ್ಲಿ ತನ್ನ ಸಂಬಂಧಿ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ಕಾರಣಕ್ಕೆ “ವಿಕೃತ” ವ್ಯಕ್ತಿಯನ್ನು ಆತನ ತಾಯಿಯೇ ಕೊಂದಿದ್ದಾರೆ ಎಂದು ಪೊಲೀಸರು ಶನಿವಾರ ತಿಳಿಸಿದ್ದಾರೆ.
ಮೃತ ವ್ಯಕ್ತಿಯನ್ನು ಕೆ ಶ್ಯಾಮಪ್ರಸಾದ (35) ಎಂದು ಗುರುತಿಸಲಾಗಿದ್ದು, ಮಗನನ್ನೇ ಕೊಂದ ಆರೋಪ ಹೊತ್ತಿರುವ ಮಹಿಳೆಯನ್ನು ಕೆ ಲಕ್ಷ್ಮೀದೇವಿ (57) ಎಂದು ಗುರುತಿಸಲಾಗಿದೆ. ಘಟನೆ ಫೆಬ್ರವರಿ 13 ರಂದು ನಡೆದಿದೆ ಎಂದು ಪ್ರಕಾಶಂ ಪೊಲೀಸ್ ವರಿಷ್ಠಾಧಿಕಾರಿ ಎ ಆರ್ ದಾಮೋದರ ತಿಳಿಸಿದ್ದಾರೆ. ಮಹಿಳೆಯ ಸಂಬಂಧಿಕರು ಕೂಡ ಈ ಕೃತ್ಯಕ್ಕೆ ಸಹಾಯ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.
“ತನ್ನ ಮಗನ ವಿಕೃತ ಮತ್ತು ಅಸಭ್ಯ ವರ್ತನೆಯನ್ನು ಸಹಿಸಲಾಗದೆ, ತಾಯಿ(ಲಕ್ಷ್ಮಿ ದೇವಿ) ಕೊಡಲಿ ಅಥವಾ ಹರಿತವಾದ ಆಯುಧದಿಂದ ಆತನನ್ನು ಕೊಂದಿದ್ದಾಳೆ ಎಂದು ಪೊಲೀಸ್ ವರಿಷ್ಠಾಧಿಕಾರಿ ದಾಮೋದರ ಹೇಳಿದರು.

ಮೃತ ವ್ಯಕ್ತಿ ಅವಿವಾಹಿತನಾಗಿದ್ದು, ಬೆಂಗಳೂರು, ಖಮ್ಮಂ ಮತ್ತು ಹೈದರಾಬಾದ್‌ನಲ್ಲಿರುವ ತಮ್ಮ ಮಹಿಳಾ ಸಂಬಂಧಿಕರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಎಂದು ಅಧಿಕಾರಿ ತಿಳಿಸಿದ್ದಾರೆ.
ಶ್ಯಾಮಪ್ರಸಾದ ಹೈದರಾಬಾದ್ ಮತ್ತು ನರಸರಾವ್ ಪೇಟೆಯಲ್ಲಿ ಅತ್ಯಾಚಾರಕ್ಕೆ ಯತ್ನಿಸಿದ್ದ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತನನ್ನು ಹತ್ಯೆ ಮಾಡಿದ ನಂತರ ಆತನ ದೇಹವನ್ನು ಐದು ತುಂಡುಗಳಾಗಿ ತುಂಡರಿಸಿ ಮೂರು ಗೋಣಿಚೀಲಗಳಲ್ಲಿ ತುಂಬಿ ನಂತರ ಜಿಲ್ಲೆಯ ಕಂಬಂ ಗ್ರಾಮದ ನಾಕಲಗಂಡಿ ಕಾಲುವೆಗೆ ಎಸೆಯಲಾಗಿತ್ತು.
ಆರೋಪಿ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.


ನಿಮ್ಮ ಕಾಮೆಂಟ್ ಬರೆಯಿರಿ