ಕರ್ನಾಟಕ ಬಜೆಟ್‌ 2025 | ಬೆಂಗಳೂರಿಗೆ ಭರ್ಜರಿ ಕೊಡುಗೆ ನೀಡಿದ ಸಿದ್ದರಾಮಯ್ಯ

ಬೆಂಗಳೂರು : ಕರ್ನಾಟಕ ಬಜೆಟ್‌ 2025ರಲ್ಲಿ ಬೆಂಗಳೂರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಭರ್ಜರಿ ಕೊಡುಗೆ
ನೀಡಿದ್ದಾರೆ. ಮಹಾನಗರಕ್ಕೆ ಕಳೆದ ವರ್ಷಕ್ಕೆ ಹೆಚ್ಚಿನ ಅನುದಾನ ನೀಡಿದ್ದಕಿಂತ 7 ಸಾವಿರ ಕೋಟಿ ರೂ.ಗಷ್ಟು ಹೆಚ್ಚಿಗೆ ನೀಡಲಾಗಿದೆ. ಅಲ್ಲದೆ, ಟನಲ್‌ ಯೋಜನೆಗೆ 40,000 ಕೋಟಿ ರೂ. ಮೀಸಲಿಡಲಾಗಿದೆ.
ಬಿಬಿಎಂಪಿಯ ಅಂದಾಜು ಮೊತ್ತ 40,000 ಕೋಟಿ ರೂಪಾಯಿ ವೆಚ್ಚದ ಉತ್ತರ- ದಕ್ಷಿಣ ಮತ್ತು ಪೂರ್ವ -ಪಶ್ಚಿಮ ಸುರಂಗ ಮಾರ್ಗದ ಟನಲ್‌ ಕಾರಿಡಾರ್ ಗೆ ಸರ್ಕಾರ 19,000 ಕೋಟಿ ಗ್ಯಾರಂಟಿ ನೀಡಲಿದೆ.
ಬಜೆಟ್‌ನಲ್ಲಿ ಬೆಂಗಳೂರಿಗೆ ಏನೇನು ಘೋಷಣೆ?
ನಮ್ಮ ಮೆಟ್ರೋ ಹಂತ-3 ಯೋಜನೆಯೊಂದಿಗೆ 8,916 ಕೋಟಿ ರೂ. ವೆಚ್ಚದಲ್ಲಿ 40.50 ಕಿ.ಮೀ. ಉದ್ದದ ಡಬಲ್ ಡೆಕರ್‌ ರಸ್ತೆ ನಿರ್ಮಾಣ.
ಕಾಲುವೆಯ ಬಫ‌ರ್ ಪ್ರದೇಶವನ್ನು ಬಳಸಿಕೊಂಡು 3,000 ಕೋಟಿ ರೂ. ವೆಚ್ಚದಲ್ಲಿ 300 ಕಿ.ಮೀ. ಹೆಚ್ಚುವರಿ ರಸ್ತೆ ಜಾಲದ ಅಭಿವೃದ್ಧಿ
660 ಕೋಟಿ ರೂ. ವೆಚ್ಚದಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿರುವ 460 ಕಿ.ಮೀ. ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆ ಜಾಲ ಅಭಿವೃದ್ಧಿ
ಬೆಂಗಳೂರು ನಗರದಲ್ಲಿ 120 ಕಿ.ಮೀ. ಉದ್ದದ ಫ್ಲೈ ಓವರ್‌ ಹಾಗೂ ಗ್ರೇಡ್‌ ಸೆಪರೇಟರ್‌ಗಳನ್ನು ನಿರ್ಮಾಣ
‘ನಮ್ಮ ಮೆಟ್ರೋ’ಗೆ ಮುಂದಿನ ಎರಡು ವರ್ಷಗಳಲ್ಲಿ ಒಟ್ಟಾರೆ 98.60 ಕಿ.ಮೀ ಹೆಚ್ಚುವರಿ ಮಾರ್ಗಗಳ ಕಾರ್ಯಾಚರಣೆ ಜಾಲ ಅಭಿವೃದ್ಧಿಪಡಿಸುವ ಗುರಿ
‘ಬ್ರಾಂಡ್ ಬೆಂಗಳೂರು’
‘ಬ್ರಾಂಡ್ ಬೆಂಗಳೂರು’ ಯೋಜನೆಯಡಿ 2024-25ನೇ ಸಾಲಿನಲ್ಲಿ ಅನುಮೋದನೆಗೊಂಡ 21 ಯೋಜನೆಗಳು 1,800 ಕೋಟಿ ರೂ. ಮೊತ್ತದಲ್ಲಿ ಅನುಷ್ಠಾನ
ಬೆಂಗಳೂರನ್ನು ಅಂತಾರಾಷ್ಟ್ರೀಯ ಆರೋಗ್ಯ ಮಾನದಂಡಗಳ ನಗರವನ್ನಾಗಿ ಮಾಡಲು, ‘ಬ್ರಾಂಡ್ ಬೆಂಗಳೂರು’ ಅಭಿಯಾನದ ಅಡಿಯಲ್ಲಿ ಮುಂದಿನ ಮೂರು ವರ್ಷಗಳಲ್ಲಿ 413 ಕೋಟಿ ರೂ. ವೆಚ್ಚದಲ್ಲಿ ‘ಸಮಗ್ರ ಆರೋಗ್ಯ ಯೋಜನೆ’ ಜಾರಿ
ಬೆಂಗಳೂರು ನಗರವು ಎದುರಿಸುತ್ತಿರುವ ಪ್ರವಾಹ ನಿಯಂತ್ರಿಸಲು ವ್ಯವಸ್ಥಿತ ಒಳಚರಂಡಿ ಜಾಲ ಮತ್ತು ಎಸ್.ಟಿ.ಪಿ ಗಳನ್ನು ನಿರ್ಮಿಸಲು ಬಿಬಿಎಂಪಿ ಹಾಗೂ ಬಿಡಬ್ಲ್ಯುಎಸ್‌ಎಸ್‌ಬಿಗೆ ಸರ್ಕಾರದಿಂದ 3,000 ಕೋಟಿ ರೂ. ಆರ್ಥಿಕ ನೆರವು

ಪ್ರಮುಖ ಸುದ್ದಿ :-   ವೀಡಿಯೊ..| ಆಡಳಿತ ಸಂಪೂರ್ಣ ವಿಫಲ ; ಬಿ.ಆರ್.​ ಪಾಟೀಲ ಬೆನ್ನಲ್ಲೇ ತಮ್ಮ ಸರ್ಕಾರದ ವಿರುದ್ಧವೇ ಸಿಡಿದೆದ್ದ ಮತ್ತೊಬ್ಬ ಕಾಂಗ್ರೆಸ್ ಶಾಸಕ ; ರಾಜೀನಾಮೆ ಮಾತು

4 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement