
ಚೆನ್ನೈನ ಕೊಳತ್ತೂರಿನ ಬಾಲಾಜಿ ನಗರದಲ್ಲಿ ಬೀದಿ ಹಸುವೊಂದು ಮಹಿಳೆ ಮತ್ತು ಆಕೆಯ ಮಗುವಿನ ಮೇಲೆ ದಾಳಿ ಮಾಡಿದ ವೀಡಿಯೊ ವೈರಲ್ ಆಗಿದೆ. ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಒಯ್ಯಲಾಗಿದೆ.
ಹಸು ಮೊದಲು ಮಗುವಿನ ಮೇಲೆ ದಾಳಿ ಮಾಡಲು ಯತ್ನಿಸಿದೆ. ತಾಯಿ ಮಗುವನ್ನು ರಕ್ಷಿಸಲು ಮುಂದಾದಾಗ ಅದು ತಾಯಿ ಮೇಲೆ ದಾಳಿ ನಡೆಸಿವೆ.
ಆದರೆ, ನೆರೆಹೊರೆಯವರು ಆಕೆಯ ರಕ್ಷಣೆಗೆ ಬಂದು ಹಸುವನ್ನು ಓಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ದೈನಿಕ ತಂತಿಯ ವರದಿಯ ಪ್ರಕಾರ, ಮಹಿಳೆಯನ್ನು ಚಿಕಿತ್ಸೆಗಾಗಿ ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಘಟನೆಯ ನಂತರ, ಗ್ರೇಟರ್ ಚೆನ್ನೈ ಕಾರ್ಪೊರೇಷನ್ (ಜಿಸಿಸಿ) ಅಧಿಕಾರಿಗಳು ಹಸುವನ್ನು ಸೆರೆಹಿಡಿದು ವಾಹನದಲ್ಲಿ ತೆಗೆದುಕೊಂಡು ಹೋಗಿದ್ದಾರೆ.

ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದ್ದು, ಇಂತಹ ಘಟನೆಗಳಿಗೆ ಶಾಶ್ವತ ಪರಿಹಾರ ದೊರಕದಿರುವ ಬಗ್ಗೆ ನಿವಾಸಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ದನಗಳು ಮತ್ತು ಬೀದಿನಾಯಿಗಳ ಬಗ್ಗೆ ಪದೇ ಪದೇ ದೂರುಗಳನ್ನು ನಿರ್ಲಕ್ಷಿಸಲಾಗಿದೆ. ಪ್ರತಿದಿನ, ನಾವು ಅದೇ ಸಮಸ್ಯೆಯನ್ನು ಎದುರಿಸುತ್ತೇವೆ, ಆದರೆ ಯಾವುದೇ ಕ್ರಮ ಕೈಗೊಂಡಿಲ್ಲ. ನನ್ನ ಪ್ರದೇಶದಲ್ಲಿ ಮಾತ್ರ, 150 ಕ್ಕೂ ಹೆಚ್ಚು ಬಿಡಾಡಿ ದನಗಳು ಮತ್ತು ಲೆಕ್ಕವಿಲ್ಲದಷ್ಟು ನಾಯಿಗಳು ವಿಶೇಷವಾಗಿ ಬೆಳಿಗ್ಗೆ ಮತ್ತು ಸಂಜೆ ಮುಕ್ತವಾಗಿ ತಿರುಗಾಡುತ್ತಿವೆ ಎಂದು ಬಳಕೆದಾರರೊಬ್ಬರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚಿನ ವರ್ಷಗಳಲ್ಲಿ ಜಾನುವಾರು ಮತ್ತು ಬೀದಿ ನಾಯಿಗಳ ದಾಳಿಯ ಘಟನೆಗಳು ಹೆಚ್ಚಾಗುತ್ತಿವೆ. ಗಮನಾರ್ಹ ಸಂಗತಿಯೆಂದರೆ, ಆಗಸ್ಟ್ 2023 ರಲ್ಲಿ MMDA ಕಾಲೋನಿಯಲ್ಲಿ 9 ವರ್ಷದ ಬಾಲಕಿಯ ಮೇಲೆ ಹಸು ದಾಳಿ ಮಾಡಿ ಎಸೆದಿತ್ತು. ಬಾಲಕಿ ತನ್ನ ತಾಯಿ ಮತ್ತು 5 ವರ್ಷದ ಸಹೋದರನೊಂದಿಗೆ ತನ್ನ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿತ್ತು.


ನಿಮ್ಮ ಕಾಮೆಂಟ್ ಬರೆಯಿರಿ