ಬೆಂಗಳೂರು: ಆನೇಕಲ್ ತಾಲೂಕಿನಲ್ಲಿ ಮದ್ದೂರಮ್ಮ ಜಾತ್ರೆಯ ಬೃಹತ್ ತೇರು ಉರುಳಿಬಿದ್ದಿದ್ದು, ಈ ಘಟನೆಯಲ್ಲಿ ಓರ್ವ ವ್ಯಕ್ತಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ಈ ತೇರನ್ನು ಎಳೆಯಲಾಗುತ್ತಿತ್ತು. ಎರಡು ಕುರ್ಜುಗಳು ಧರೆಗೆ ಉರುಳಿಬಿದ್ದಿದೆ.
150 ಕ್ಕೂ ಹೆಚ್ಚು ಅಡಿ ಎತ್ತರದ ಕುರ್ಜುಗಳು ಇದಾಗಿದ್ದು, ತೇರು ಎಳೆದು ತರುವ ಸಂದರ್ಭದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದೆ. ಅತೀ ಎತ್ತರ ತೇರು ಕಟ್ಟಿ ಎಳೆದು ತರುವ ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಗಾಳಿ ಸಹಿತ ಮಳೆಯ ಕಾರಣದಿಂದಾಗಿ ತೇರು ಧರೆಗೆ ಉರುಳಿದೆ.
ಮದ್ದೂರಮ್ಮ ಜಾತ್ರೆಗೆ ನೂರಾರು ವರ್ಷಗಳ ಇತಿಹಾಸವಿದ್ದು, ಟ್ರ್ಯಾಕ್ಟರ್ ಹಾಗೂ ನೂರಾರು ಎತ್ತುಗಳ ಮೂಲಕ ತೇರು ಎಳೆದು ತರಲಾಗುತ್ತದೆ. ಜಾತ್ರೆ ನೋಡಲು ಲಕ್ಷಾಂತರ ಜನ ಆಗಮಿಸುತ್ತಾರೆ. ಈ ಬಾರಿ 6 ಕುರುಜುಗಳು ಆಗಮಿಸಿದ್ದವು.
ಗಾಳಿ ಮಳೆಯಿಂದಾಗಿ ಆಯತಪ್ಪಿ ತೇರು ಬಿದ್ದಿದೆ ಎನ್ನಲಾಗಿದೆ. ತೇರಿನಲ್ಲಿ ಇದ್ದ ಹಲವರಿಗೆ ಗಾಯಗಳಾಗಿವೆ. ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಳೆದ ವರ್ಷದ (2024) ಜಾತ್ರೆಯಲ್ಲೂ ರಾಯಸಂದ್ರದ ತೇರು ಉರುಳಿಬಿದ್ದಿತ್ತು. ಆದರೆ ಆಗ ಸಾವು ನೋವುಗಳು ಸಂಭವಿಸಿರಲಿಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ