ಲಿಂಗಸುಗೂರು | ಬೀದಿ ನಾಯಿಗಳ ದಾಳಿ ; ಬಾಲಕ ಸಾವು

ರಾಯಚೂರು: ಬಹಿರ್ದೆಸೆಗೆ ತೆರಳಿದ್ದ ವೇಳೆ ಬೀದಿ ನಾಯಿ ದಾಳಿ ನಡೆಸಿದ ನಂತರ ಗಂಭೀರ ಗಾಯಗೊಂಡಿದ್ದ ಜಿಲ್ಲೆಯ ಲಿಂಗಸಗೂರು ತಾಲೂಕಿನ ಕಸಬಾ ಲಿಂಗಸುಗೂರು ಗ್ರಾಮದ ಬಾಲಕ ಚಿಕಿತ್ಸೆ ಫಲಕಾರಿಯಾಗದೆ ಬಾಗಲಕೋಟೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.
ಲಿಂಗಸಗೂರು ಪುರಸಭೆ ವ್ಯಾಪತಿಯ ಕಸಬಾ ಲಿಂಗಸುಗೂರು ಗ್ರಾಮದ ಸಿದ್ದಪ್ಪ ಬೀರಪ್ಪ(6) ಮೃತ ಬಾಲಕ ಎಂದು ಗುರುತಿಸಲಾಗಿದೆ.
ಶನಿವಾರ ಸಂಜೆ ಸಮಯದಲ್ಲಿ ಬಾಲಕ ಸಿದ್ದಪ್ಪ ಬಹಿರ್ದೆಸೆಗೆಂದು ತೆರಳಿದ್ದ. ಆ ವೇಳೆ ಮರಿ ಹಾಕಿದ ನಾಯಿಯೊಂದು ಬಿಗಳು ಆರಂಭಿಸಿತು. ನಂತರ ಐದಾರು ಬೀದಿ ನಾಯಿಗಳ ಹಿಂಡು ಬಂದು ದಾಳಿ ನಡೆಸಿದ್ದರಿಂದ ಬಾಲಕ ಗಂಭೀರ ಗಾಯಗೊಂಡಿದ್ದ ಎನ್ನಲಾಗಿದೆ.
ಸ್ಥಳೀಯರು ನಾಯಿಗಳನ್ನು ಓಡಿಸಿ ಬಾಲಕನನ್ನು ರಕ್ಷಿಸಿದ ನಂತರ ಆತನನ್ನು ಬಾಗಲಕೋಟೆ ಖಾಸಗಿ ಆಸ್ಪತ್ರೆಗೆ ಒಯ್ದು ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗಿದೆ ಆಸ್ಪತ್ರೆಯಲ್ಲಿ ಬಾಲಕ ಮೃತಪಟ್ಟಿದ್ದಾನೆ ಎಮದು ವರದಿಯಾಗಿದೆ.

ಪ್ರಮುಖ ಸುದ್ದಿ :-   ತೆಲಂಗಾಣ ಕಾಂಗ್ರೆಸ್‌ನಲ್ಲಿ ಬಿರುಗಾಳಿ : ಮಗಳ ಮಾತಿಗೆ ತಾಯಿಯ ಸಚಿವ ಸ್ಥಾನಕ್ಕೆ ಕುತ್ತು: ರೇವಂತ ರೆಡ್ಡಿ ಸಂಪುಟದಿಂದ ದಿಢೀರ್ ವಜಾ !

3.5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement