ಬೆಂಗಳೂರು : ಉದ್ಯಮಿಯೊಬ್ಬರಿಗೆ ಬ್ಲ್ಯಾಕ್ಮೇಲ್ ಮಾಡಿ ಹಣ ವಸೂಲಿ ಮಾಡಿದ ಆರೋಪದ ಮೇಲೆ ಶಿಶುವಿಹಾರದ ಶಿಕ್ಷಕಿ ಸೇರಿದಂತೆ ಮೂವರನ್ನು ಬೆಂಗಳೂರು ಕೇಂದ್ರ ಅಪರಾಧ ವಿಭಾಗ (ಸಿಸಿಬಿ) ಬಂಧಿಸಿದೆ ಎಂದು ವರದಿಯಾಗಿದೆ
ಶಿಶುವಿಹಾರ (ಪ್ರಿ ಸ್ಕೂಲ್)ದ ಮಗುವಿನ ತಂದೆಯಿಂದ ಹಣ ಸುಲಿಗೆ ಮಾಡಿದ ಆರೋಪದ ಮೇಲೆ 25 ವರ್ಷದ ಶ್ರೀದೇವಿ ರೂಡಗಿ ಮತ್ತು ಗಣೇಶ ಕಾಳೆ (38) ಮತ್ತು ಸಾಗರ (28) ಅವರನ್ನು ಬಂಧಿಸಲಾಗಿದೆ.
ಹನಿಟ್ರ್ಯಾಪ್ ಸೆಟಪ್
ಪೊಲೀಸರ ಪ್ರಕಾರ, ಹೆಂಡತಿ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ವಾಸಿಸುತ್ತಿದ್ದ ರಾಕೇಶ ಎಂಬ ವ್ಯಾಪಾರಿ 2023 ರಲ್ಲಿ ತನ್ನ ಐದು ವರ್ಷದ ಮಗಳನ್ನು ಶಿಶುವಿಹಾರಕ್ಕೆ ಸೇರಿಸಿದ್ದ.
ಪ್ರವೇಶ ಪ್ರಕ್ರಿಯೆಯಲ್ಲಿ ವೇಳೆ ಆತನ ರೂಡಗಿಯನ್ನು ಭೇಟಿಯಾದ. ನಂತರ ಶಾಲೆಗೆ ಸಂಬಂಧಿತ ವಿಷಯದಲ್ಲಿ ಅವರ ಸಂಪರ್ಕ ಮುಂದುವರಿಯಿತು. 2024 ರಲ್ಲಿ ಶಾಲೆಗೆ ಸಂಬಂಧಿಸಿದ ಖರಚು-ವೆಚ್ಚಗಳಿಗಾಗಿ ಶೀಘ್ರವೇ ಹಣ ವಾಪಸ್ ನೀಡುವ ಭರವಸೆಯೊಂದಿಗೆ ಶ್ರೀದೇವಿ ಆತನಿಂದ 4 ಲಕ್ಷ ರೂ. ಸಾಲ ಕೇಳಿದ್ದಳು, ಅದನ್ನು ಆತ ನೀಡಿದ್ದ. ಆದರೆ ಜನವರಿ 2024 ರಲ್ಲಿ ರಾಕೇಶ ಹಣ ವಾಪಸ್ ನೀಡುವಂತೆ ಕೇಳಿದಾಗ, ಶ್ರೀದೇವಿ ಆತನಿಗೆ ತನ್ನ ಶಾಲೆಯಲ್ಲಿ ಪಾರ್ಟ್ನರ್ ಆಗುವಂತೆ ಕೇಳಿಕೊಂಡಳು. ನಂತರ ಅವರ ಮಾತುಕತೆಗಳು ಮತ್ತಷ್ಟು ಹೆಚ್ಚಾಯಿತು, ಅವಳೊಂದಿಗೆ ಖಾಸಗಿಯಾಗಿ ಮಾತುಕತೆ ನಡೆಸಲು ಆತ ಪ್ರತ್ಯೇಕ ಫೋನ್ ಮತ್ತು ಸಿಮ್ ಕಾರ್ಡ್ ಖರೀದಿಸಲು ಕಾರಣವಾಯಿತು.
ಆದರೆ ಕೆಲ ದಿನಗಳ ನಂತರ ತಾನು ನೀಡಿದ್ದ ಹಣ ವಾಪಸ್ ಮಾಡುವಂತೆ ಒತ್ತಾಯಿಸಿದಾಗ ಶ್ರೀದೇವಿ ಆತನನ್ನು ಮನೆಗೆ ಕರೆದಳು, ಆತನನ್ನು ಚುಂಬಿಸಿದಳು ಮತ್ತು ಕಾಲಾನಂತರದಲ್ಲಿ ಇದಕ್ಕಾಗಿ 50,000 ರೂ. ವಸೂಲಿ ಮಾಡಿದಳು, ಉದ್ದೇಶಿತ ಸಂಬಂಧಕ್ಕೆ ಪ್ರತಿಯಾಗಿ ಆಕೆಯ ಬೇಡಿಕೆಗಳು 15 ಲಕ್ಷ ರೂ.ಗಳಿಗೆ ಏರಿತು ಎಂದು ಆರೋಪಿಸಲಾಗಿದೆ.
ಬೇಡಿಕೆಗಳನ್ನು ಈಡೇರಿಸಲಾಗದೆ ಸತೀಶ ಸಿಮ್ ಕಾರ್ಡ್ ಮುರಿದುಹಾಕಿ ಸಂಬಂಧ ಕಡಿದುಕೊಳ್ಳಲು ಯತ್ನಿಸಿದ್ದಾನೆ. ನಂತರ, ಆತನ ವ್ಯವಹಾರವು ಹಿನ್ನಡೆ ಅನುಭವಿಸಿದಾಗ, ಆತ ತನ್ನ ಕುಟುಂಬವನ್ನು ಗುಜರಾತ್ಗೆ ಸ್ಥಳಾಂತರಿಸಲು ನಿರ್ಧರಿಸಿದ್ದಾನೆ. ಆತನಿಗೆ ಮಗುವಿನ ವರ್ಗಾವಣೆ ಪ್ರಮಾಣಪತ್ರದ ಅಗತ್ಯವಿತ್ತು.
ಮಾರ್ಚ್ 12 ರಂದು ಶ್ರೀದೇವಿ ಆತನ ಪತ್ನಿಯನ್ನು ಸಂಪರ್ಕಿಸಿ, ಮಗಳ ವರ್ಗಾವಣೆ ಪ್ರಮಾಣಪತ್ರ ಪಡೆಯಲು ಪ್ರಿಸ್ಕೂಲ್ಗೆ ಭೇಟಿ ನೀಡುವಂತೆ ರಾಕೇಶನಿಗೆ ಹೇಳುವಂತೆ ಕೇಳಿಕೊಂಡಿದ್ದಾಳೆ. ರಾಕೇಶ ಆಗಮಿಸಿದ ನಂತರ, ಅಲ್ಲಿ ಶ್ರೀದೇವಿ ಜೊತೆಗೆ ಗಣೇಶ ಮತ್ತು ಸಾಗರ ಎಂಬವರು ಇದ್ದರು. ಅವರು ಶ್ರೀದೇವಿಯೊಂದಿಗೆ ಸಂಬಂಧ ಹೊಂದಿದ್ದೀರೆಂದು ಆರೋಪಿಸಿ ಈ ವಿಷಯವನ್ನು ಆತನ ಕುಟುಂಬ ಮತ್ತು ಪೊಲೀಸರಿಗೆ ಹೇಳುವುದಾಗಿ ಬೆದರಿಕೆ ಹಾಕಿದರು. ಹಾಗೂ ಈ ವಿಷಯದಲ್ಲಿ ಸುಮ್ಮನಿರಲು ಇಬ್ಬರಿಗೂ 1 ಕೋಟಿ ರೂ.ನೀಡಬೇಕು ಎಂಬ ಬೇಡಿಕೆಯಿಟ್ಟರು.
ನಂತರ ಅವರು ಆತನನ್ನು ಬಲವಂತವಾಗಿ ಕಾರಿಗೆ ಹತ್ತಿಸಿದ ಗ್ಯಾಂಗ್, ರಾಜಾಜಿನಗರ ಬಳಿಯ ಮಹಾಲಕ್ಷ್ಮಿ ಲೇಔಟ್ ಹಾಗೂ ಗೊರಗುಂಟೆಪಾಳ್ಯ ಸುತ್ತಮುತ್ತ ಓಡಾಡಿಸಿ ಹಣಕ್ಕಾಗಿ ಒತ್ತಾಯಿಸಿದರು. ಕೊನೆಗೆ 20 ಲಕ್ಷ ರೂ.ಗಳನ್ನು ನೀಡಬೇಕು ಎಂದು ತಮ್ಮ ಬೇಡಿಕೆಯ ಮೊತ್ತವನ್ನು ಇಳಿಸಿದರು. ಅಲ್ಲದೆ, ರಾಕೇಶನನ್ನು ಬಿಡುಗಡೆ ಮಾಡುವ ಮೊದಲು ಆರಂಭಿಕ ಮೊತ್ತವಾಗಿ 1.9 ಲಕ್ಷ ರೂ.ಹಣ ವಸೂಲಿ ಮಾಡಿದರು.
ಮಾರ್ಚ್ 17 ರಂದು, ಶ್ರೀದೇವಿ ಮತ್ತೆ ಕರೆ ಮಾಡಿ, 15 ಲಕ್ಷ ರೂಪಾಯಿ ನೀಡದಿದ್ದರೆ ವೀಡಿಯೊ ಚಾಟ್ಗಳನ್ನು ಸೋರಿಕೆ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಇವರ ಬ್ಲ್ಯಾಕ್ ಮೇಲ್ನಿಂದ ರೋಸಿ ಹೋಗಿದ್ದ ರಾಕೇಶ ಈ ಬಗ್ಗೆ ಬೆಂಗಳೂರು ಸಿಸಿಬಿಗೆ ದೂರು ಸಲ್ಲಿಸಿದರು.
ಅವರು ನೀಡಿದ ದೂರು ಆಧರಿಸಿ ಅಧಿಕಾರಿಗಳು ಶ್ರೀದೇವಿ, ಗಣೇಶ ಮತ್ತು ಸಾಗರ ಎಂಬವರನ್ನು ಬಂಧಿಸಿದ್ದಾರೆ. ಹೆಚ್ಚಿನ ತನಿಖೆ ನಡೆಯುತ್ತಿದೆ.
ನಿಮ್ಮ ಕಾಮೆಂಟ್ ಬರೆಯಿರಿ