ವಿಧಾನಸೌಧದ ಮುಂದೆ ವಿಷ ಸೇವಿಸಲು ಯತ್ನಿಸಿದ ಯುವಕ

ಬೆಂಗಳೂರು: ವಿಧಾನಸೌಧದ ಮುಂದೆಯೇ ಯುವಕನೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದು, ಭದ್ತರಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ಮೂಲದ ಸಂಜಯ ಎಂಬಾತ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವ ಎಂದು ಹೇಳಲಾಗಿದೆ. ಕೂಡಲೇ ವಿಧಾನಸೌಧ ಠಾಣೆಯ ಪೊಲೀಸರು ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಪ್ಲಾಸ್ಟಿಕ್ ಕವರ್‌ನಲ್ಲಿ ವಿಷದ ಸಣ್ಣ ಬಾಟಲು ಹಾಗೂ ಕೆಲವು ದಾಖಲೆಗಳ ಸಮೇತ ಈತ ವಿಧಾನಸೌಧದ ಮುಂದೆ ಬಂದಿದ್ದ ಎನ್ನಲಾಗಿದೆ. ಚನ್ನರಾಯಪಟ್ಟಣ ಠಾಣೆಯ ಪೊಲೀಸರು ನನಗೆ ಹೊಡೆದಿದ್ದಾರೆ. ನನಗೆ ನ್ಯಾಯ ಕೊಡಿಸಬೇಕು ಎಂಬುದಾಗಿ ಹೇಳಿ ವಿಷ ಸೇವಿಸಲು ಮುಂದಾಗಿದ್ದ. ಪೊಲೀಸರು ತಡೆದು ಆತನನ್ನು ವಶಕ್ಕೆ ಪಡೆದಿದ್ದಾರೆ. ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

0 / 5. 0

ಶೇರ್ ಮಾಡಿ :
ಪ್ರಮುಖ ಸುದ್ದಿ :-   ಬೆಚ್ಚಿ ಬೀಳಿಸುವ ವೀಡಿಯೊ..| ಬೆಂಗಳೂರು : ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಚರಂಡಿಗೆ ಉರುಳಿ ಬಿದ್ದ ಬಸ್‌ ; ಪೊಲೀಸ್‌ ಅಧಿಕಾರಿ ಸಾವು

ನಿಮ್ಮ ಕಾಮೆಂಟ್ ಬರೆಯಿರಿ

advertisement