ನವದೆಹಲಿ : ಲೋಕಸಭೆಯು ಬುಧವಾರ ಮಧ್ಯರಾತ್ರಿ ವಕ್ಫ್ (ತಿದ್ದುಪಡಿ) ಮಸೂದೆ 2025ಕ್ಕೆ ಅಂಗೀಕಾರ ನೀಡಿದ್ದು, ಇಂದು ರಾಜ್ಯಸಭೆಯತ್ತ ಎಲ್ಲರ ಚಿತ್ತವಿದೆ. ಲೋಕಸಭೆಯಲ್ಲಿ ಮಸೂದೆಯ ಪರವಾಗಿ 288 ಮತ್ತು ವಿರುದ್ಧವಾಗಿ 232 ಮತಗಳು ಬಂದವು.
100 ಕ್ಕೂ ಹೆಚ್ಚು ತಿದ್ದುಪಡಿಗಳನ್ನು ವಿಪಕ್ಷದ ಸದಸ್ಯರು ಪ್ರಸ್ತಾಪಿಸಿದರು, ಆದರೆ ಮತದಾನದ ಸಮಯದಲ್ಲಿ ಎಲ್ಲವನ್ನೂ ತಿರಸ್ಕರಿಸಲಾಯಿತು. ಚರ್ಚೆಯ ಸಂದರ್ಭದಲ್ಲಿ, ಸರ್ಕಾರವು ಮಸೂದೆಯನ್ನು ಸಮರ್ಥಿಸಿತು, ಈ ತಿದ್ದುಪಡಿಗಳಿಲ್ಲದಿದ್ದರೆ ಸಂಸತ್ತಿನ ಕಟ್ಟಡ ಸೇರಿದಂತೆ ಹಲವಾರು ಆಸ್ತಿಗಳು ದೆಹಲಿ ವಕ್ಫ್ ಮಂಡಳಿಯ ಅಡಿಯಲ್ಲಿ ಬರಬಹುದಿತ್ತು ಎಂದು ಪ್ರತಿಪಾದಿಸಿತು. ಆಡಳಿತ ಪಕ್ಷವು ಹಿಂದಿನ ಸರ್ಕಾರಗಳು ವಕ್ಫ್ ಆಸ್ತಿಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ಟೀಕಿಸಿತು.
ರಾಜ್ಯಸಭೆಯಲ್ಲಿ ನಂಬರ್ ಗೇಮ್
ಮಸೂದೆಯು ಈಗ ರಾಜ್ಯಸಭೆಯಲ್ಲಿ ನಿರ್ಣಾಯಕ ಪರೀಕ್ಷೆಯನ್ನು ಎದುರಿಸುತ್ತಿದೆ, ರಾಜ್ಯಸಭೆಯಲ್ಲಿ ವಿಧೇಯಕದ ಮೇಲಿನ ಚರ್ಚೆಗೆ ಒಟ್ಟು 8 ಗಂಟೆಗಳ ಕಾಲಾವಕಾಶ ನೀಡಲಾಗಿದ್ದು, ಈ ವೇಳೆ ಸರ್ಕಾರ ಮತ್ತು ವಿರೋಧ ಪಕ್ಷದ ನಾಯಕರು ಸದನವನ್ನು ಉದ್ದೇಶಿಸಿ ತಮ್ಮ ವಾದ ಮಂಡಿಸಲಿದ್ದಾರೆ.ಮೇಲ್ಮನೆಯಲ್ಲಿ 245 ಸ್ಥಾನಗಳಿವೆ. ಅಲ್ಲಿ ಪ್ರಸ್ತುತ ಸದಸ್ಯರ ಒಟ್ಟು ಸಂಖ್ಯಾಬಲ 236 ಆಗಿದೆ. 9 ಸ್ಥಾನಗಳು ಖಾಲಿ ಇವೆ. ಮಸೂದೆಯನ್ನು ಅಂಗೀಕರಿಸಲು, ಆಡಳಿತಾರೂಢ ಎನ್‌ಡಿಎ (NDA) ಸರ್ಕಾರಕ್ಕೆ 119 ಮತಗಳ ಅಗತ್ಯವಿದೆ ಮತ್ತು ಸ್ವತಂತ್ರ ಮತ್ತು ನಾಮನಿರ್ದೇಶಿತ ಸದಸ್ಯರ ಬೆಂಬಲದೊಂದಿಗೆ ಅದರ ಬಲ 125ಕ್ಕೆ ತಲುಪುತ್ತದೆ. ವಿಪಕ್ಷಗಳು 95 ಮತಗಳನ್ನು ಹೊಂದಿದ್ದು, 16 ಸದಸ್ಯರು ತಟಸ್ಥವಾಗಿ ಉಳಿದಿದ್ದಾರೆ. ಲೋಕಸಭೆಯಲ್ಲಿ ಎನ್‌ಡಿಎ ಮಿತ್ರಪಕ್ಷಗಳು ಮಸೂದೆಯನ್ನು ಬೆಂಬಲಿಸಿರುವುದರಿಂದ, ಅವರು ಮೇಲ್ಮನೆಯಲ್ಲೂ ಅದೇ ರೀತಿ ಮಾಡುವ ನಿರೀಕ್ಷೆಯಿದೆ.
ಪಕ್ಷವಾರು ಸದಸ್ಯರು
ಮಸೂದೆಯನ್ನು ಬೆಂಬಲಿಸುವ ಎನ್‌ಡಿಎ ಪಕ್ಷಗಳು (NDA) – 125 ಸದಸ್ಯರು
ಬಿಜೆಪಿ: 98
ಜೆಡಿಯು: 4
ಎನ್‌ಸಿಪಿ: 3
ಟಿಡಿಪಿ: 2
ಜೆಡಿಎಸ್: 1
ಶಿವಸೇನೆ: 1
ಆರ್‌ಪಿಐ (A): 1
ಎಜಿಪಿ: 1
ಆರ್‌ಎಲ್‌ಡಿ: 1
ಯುಪಿಎಲ್: 1
ಆರ್‌ಎಲ್‌ಎಂ: 1
ಪಿಎಂಕೆ : 1
ಟಿಎಂಸಿ-ಎಂ: 1
ಎನ್‌ಪಿಪಿ : 1
ಸ್ವತಂತ್ರರು: 2
ನಾಮನಿರ್ದೇಶಿತ ಸದಸ್ಯರು: 6
ಮಸೂದೆಯನ್ನು ವಿರೋಧಿಸುವ ಪಕ್ಷಗಳು – 95 ಮತಗಳು
ಕಾಂಗ್ರೆಸ್: 27
ಟಿಎಂಸಿ: 13
ಡಿಎಂಕೆ: 10
ಎಎಪಿ : 10
ಎಸ್ಪಿ: 4
ವೈಎಸ್‌ಆರ್‌ಸಿಪಿ : 7
ಆರ್‌ಜೆಡಿ-5
ಜೆಎಂಎಂ: 3
ಸಿಪಿಐ(ಎಂ): 4
ಸಿಪಿಐ: 2
ಐಯುಎಂಎಲ್ : 2
ಎನ್‌ಸಿಪಿ (ಪವಾರ್): 2
ಶಿವಸೇನೆ (ಯುಬಿಟಿ): 2
ಎಜಿಎಂ: 1
ಎಂಡಿಎಂಕೆ: 1
ಕೆಸಿಎಂ: 1
ಸ್ವತಂತ್ರ: 1
ನಿರ್ಣಯಿಸದ ಸದಸ್ಯರು- 16
ಬಿಆರ್‌ಎಸ್: 4
ಬಿಜೆಡಿ: 7
ಎಐಎಡಿಎಂಕೆ: 4
ಬಿಎಸ್ಪಿ: 1
ನಿಮ್ಮ ಕಾಮೆಂಟ್ ಬರೆಯಿರಿ