ಅಮೆರಿಕದಲ್ಲಿರುವ ಎಚ್‌-1ಬಿ, ಗ್ರೀನ್ ಕಾರ್ಡ್ ಇರುವ ಭಾರತೀಯರ ಬಳಿ ಈಗ ದಿನದ 24 ಗಂಟೆಯೂ ಐಡಿ ಇರಬೇಕು: ಇದು ಹೊಸ ನಿಯಮ

ವಾಷಿಂಗ್ಟನ್‌ : ಡೊನಾಲ್ಡ್ ಟ್ರಂಪ್ ಆಡಳಿತವು ವಲಸಿಗರಿಗೆ ಹೊಸ ನಿಯಮವನ್ನು ತಂದಿದೆ. ಅಮೆರಿಕ ಸಂಯುಕ್ತ ಸಂಸ್ಥಾನದಲ್ಲಿರುವ ಎಲ್ಲಾ ವಲಸಿಗರು ತಮ್ಮ ಕಾನೂನು ಸ್ಥಾನಮಾನದ ಪುರಾವೆಗಳನ್ನು ಯಾವಾಗಲೂ ಹೊಂದಿರಬೇಕು ಎಂದು ಈ ನಿಯಮ ಹೇಳುತ್ತದೆ.
ಇದು ಏಪ್ರಿಲ್ 11 ರಿಂದ ಜಾರಿಗೆ ಬಂದಿತು ಮತ್ತು ಅಕ್ರಮ ವಲಸೆಯನ್ನು ಹತ್ತಿಕ್ಕುವ ಮತ್ತು ಅಕ್ರಮವಾಗಿ ವಾಸಿಸುವ ಲಕ್ಷಾಂತರ ಜನರನ್ನು ಗಡೀಪಾರು ಮಾಡುವ ಗುರಿಯನ್ನು ಹೊಂದಿದೆ.
ಏಲಿಯನ್ ನೋಂದಣಿ ಅವಶ್ಯಕತೆ (ARR) 1940 ರ ಏಲಿಯನ್ ನೋಂದಣಿ ಕಾಯ್ದೆಯಿಂದ ಬಂದಿದೆ. ಈ ನಿರ್ದಿಷ್ಟ ಕಾನೂನು ಪ್ರಕಾರ, ಅಮೆರಿಕದಲ್ಲಿರುವ ವಲಸಿಗರು ನೋಂದಾಯಿಸಿಕೊಳ್ಳುವುದು ಅತ್ಗತ್ಯವಾಗಿತ್ತು. ಆದರೆ ಅದನ್ನು ಎಂದಿಗೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಿರಲಿಲ್ಲ. ಈಗ ಈ ಹೊಸ ನಿಯಮಗಳು ಕಾನೂನಿನ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಖಾತ್ರಿಪಡಿಸುತ್ತದೆ.

ನಿಯಮದ ಪ್ರಮುಖ ನಿಬಂಧನೆಗಳು
– ಕಡ್ಡಾಯ ನೋಂದಣಿ: 30 ದಿನಗಳು ಅಥವಾ ಅದಕ್ಕಿಂತ ಹೆಚ್ಚು ಕಾಲ ಅಮೆರಿಕದಲ್ಲಿ ವಾಸಿಸುವ 14 ವರ್ಷಕ್ಕಿಂತ ಮೇಲ್ಪಟ್ಟ ಅಮೆರಿಕದ ನಾಗರಿಕರಲ್ಲದ ಎಲ್ಲರು “ಫಾರ್ಮ್ G-325R” ಬಳಸಿ ಸರ್ಕಾರದಲ್ಲಿ ನೋಂದಾಯಿಸಿಕೊಳ್ಳಬೇಕು. ಪೋಷಕರು 14 ವರ್ಷದೊಳಗಿನ ತಮ್ಮ ಮಕ್ಕಳಿಗಾಗಿ ನೋಂದಾಯಿಸಿಕೊಳ್ಳಬೇಕಾಗುತ್ತದೆ.
– ದಾಖಲೆ ಅಗತ್ಯತೆಗಳು: ಏಪ್ರಿಲ್ 11 ರಂದು ಅಥವಾ ನಂತರ ಅಮೆರಿಕಕ್ಕೆ ಆಗಮಿಸುವವರು ಆಗಮನದ 30 ದಿನಗಳ ಒಳಗೆ ನೋಂದಾಯಿಸಿಕೊಳ್ಳಬೇಕು. ಪಾಲಿಸಲು ವಿಫಲವಾದರೆ ದಂಡ, ಜೈಲು ಶಿಕ್ಷೆ ಅಥವಾ ಎರಡಕ್ಕೂ ಕಾರಣವಾಗಬಹುದು.
– ವಿಳಾಸ ಬದಲಾವಣೆಗಳು: ತಮ್ಮ ವಿಳಾಸವನ್ನು ಬದಲಾಯಿಸುವ ವ್ಯಕ್ತಿಗಳು 10 ದಿನಗಳಲ್ಲಿ ವರದಿ ಮಾಡಬೇಕು, ಪಾಲಿಸದಿದ್ದಕ್ಕಾಗಿ $5,000 ವರೆಗಿನ ಸಂಭಾವ್ಯ ದಂಡ ವಿಧಿಸಲಾಗುತ್ತದೆ.
– ಮರು ನೋಂದಣಿ: 14 ವರ್ಷ ತುಂಬುವ ಮಕ್ಕಳು 30 ದಿನಗಳಲ್ಲಿ ಮರು ನೋಂದಣಿ ಮಾಡಿಕೊಳ್ಳಬೇಕು ಮತ್ತು ಬೆರಳಚ್ಚುಗಳನ್ನು ಸಲ್ಲಿಸಬೇಕು.

ಪ್ರಮುಖ ಸುದ್ದಿ :-   ಪಾಕಿಸ್ತಾನದಿಂದ ಪರಮಾಣು ಬೆದರಿಕೆ ಇಲ್ಲ ; ಅಮೆರಿಕ ಕದನ ವಿರಾಮಕ್ಕೆ ಮಧ್ಯಸ್ಥಿಕೆ ವಹಿಸಿಲ್ಲ : ವಿದೇಶಾಂಗ ಕಾರ್ಯದರ್ಶಿ

ಇದರ ಪರಿಣಾಮ
– ಅಕ್ರಮ ವಲಸಿಗರು: ಹೊಸ ನಿಯಮವು ಪ್ರಾಥಮಿಕವಾಗಿ ದಾಖಲೆರಹಿತ ವಲಸಿಗರ ಮೇಲೆ ಪರಿಣಾಮ ಬೀರುತ್ತದೆ, ಅವರು ನೋಂದಾಯಿಸಿಕೊಳ್ಳಬೇಕು ಮತ್ತು ದಾಖಲೆಗಳನ್ನು ಕೊಂಡೊಯ್ಯಬೇಕಾಗುತ್ತದೆ.
– ಕಾನೂನು ವಲಸಿಗರು: ಮಾನ್ಯ ವೀಸಾಗಳನ್ನು ಹೊಂದಿರುವವರು (ಕೆಲಸ ಅಥವಾ ಅಧ್ಯಯನ) ಅಥವಾ ಹಸಿರು ಕಾರ್ಡ್ ಹೊಂದಿರುವವರು ಈಗಾಗಲೇ ನೋಂದಾಯಿಸಿಕೊಂಡಿದ್ದಾರೆ ಎಂದು ಪರಿಗಣಿಸಲಾಗುತ್ತದೆ ಮತ್ತು ಮತ್ತೆ ಫಾರ್ಮ್ ಅನ್ನು ಭರ್ತಿ ಮಾಡುವ ಅಗತ್ಯವಿಲ್ಲ. ಆದಾಗ್ಯೂ, ಅವರು ಎಲ್ಲಾ ಸಮಯದಲ್ಲೂ ತಮ್ಮೊಂದಿಗೆ ದಾಖಲೆಗಳನ್ನು ಕೊಂಡೊಯ್ಯಬೇಕಾಗುತ್ತದೆ.
– ಭಾರತೀಯ ಪ್ರಜೆಗಳು: ಸುಮಾರು 54 ಲಕ್ಷ ಭಾರತೀಯರು ಅಮೆರಿಕದಲ್ಲಿದ್ದಾರೆ, ಅವರಲ್ಲಿ 2,20,000 ಜನರು ಅಕ್ರಮ ವಲಸಿಗರು (ಒಟ್ಟು ವಲಸಿಗರ ಪೈಕಿ 2%). H-1B ವೀಸಾ ಹೊಂದಿರುವ ಭಾರತೀಯ ಪ್ರಜೆಗಳು ಅಥವಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳು ನೋಂದಾಯಿಸಿಕೊಳ್ಳುವ ಅಗತ್ಯವಿಲ್ಲ, ಆದರೆ ದಾಖಲೆಗಳನ್ನು ಯಾವಾಗಲು ಒಯ್ಯಬೇಕು.

ನಿಯಮ ಪಾಲಿಸದಿದ್ದರೆ ಏನಾಗುತ್ತದೆ…?
– ದಂಡ ಮತ್ತು ಜೈಲು ಶಿಕ್ಷೆ: ನೋಂದಾಯಿಸಲು ವಿಫಲವಾದರೆ ದಂಡ ಅಥವಾ 6 ತಿಂಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು.
– ಗಡೀಪಾರು: ನೋಂದಣಿಯು ಅಮೆರಿಕದಲ್ಲಿ ಉಳಿಯಲು ಅನುಮತಿಯನ್ನು ಖಾತರಿಪಡಿಸುವುದಿಲ್ಲ. ಸರಿಯಾದ ಕಾನೂನು ದಾಖಲೆಗಳಿಲ್ಲದಿದ್ದರೆ ಅಥವರಿಗೆ ಗಡೀಪಾರು ಭೀತಿ ಎದುರಾಗಬಹುದು.
18 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಅಮೆರಿಕ ನಾಗರಿಕರಲ್ಲದ ಎಲ್ಲರರೂ ಈ ದಸ್ತಾವೇಜನ್ನು (ನೋಂದಣಿ ಪುರಾವೆ) ಎಲ್ಲಾ ಸಮಯದಲ್ಲೂ ಕೊಂಡೊಯ್ಯಬೇಕು. ಆಡಳಿತವು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆಗೆ (DHS) ಇದರ ಜಾರಿಗೆ ಆದ್ಯತೆ ನೀಡುವಂತೆ ನಿರ್ದೇಶಿಸಿದೆ. ಅನುಸರಣೆಯನ್ನು ನಿರ್ಲಕ್ಷಿಸುವುದಕ್ಕೆ ಯಾವುದೇ ಆಶ್ರಯವಿರುವುದಿಲ್ಲ” ಎಂದು ಹೋಮ್‌ಲ್ಯಾಂಡ್ ಸೆಕ್ಯುರಿಟಿ ಇಲಾಖೆ (DHS) ಕಾರ್ಯದರ್ಶಿ ಕ್ರಿಸ್ಟಿ ನೋಯೆಮ್ ಹೇಳಿದರು.
ಹೊಸ ನಿಯಮವು ಅಮೆರಿಕದಲ್ಲಿ ಕಠಿಣ ವಲಸೆ ನೀತಿಗಳನ್ನು ಜಾರಿಗೊಳಿಸುವ ವಿಶಾಲ ಪ್ರಯತ್ನದ ಭಾಗವಾಗಿದೆ. ಟ್ರಂಪ್ ಆಡಳಿತವು ಜಾರಿಗೊಳಿಸುವಿಕೆಯ ಮೇಲೆ ಒತ್ತು ನೀಡುವುದು ಸ್ಪಷ್ಟವಾಗಿದೆ.

ಪ್ರಮುಖ ಸುದ್ದಿ :-   ಭಯೋತ್ಪಾದನೆ ವಿರುದ್ಧ ಭಾರತವು ಜಾಗತಿಕವಾಗಿ ತಲುಪುವ ಪ್ರಯತ್ನಕ್ಕೆ ಸ್ಥಳೀಯ ರಾಜಕೀಯ ತರಬೇಡಿ ; ಸಂಜಯ ರಾವತಗೆ ಶರದ್ ಪವಾರ್

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement