ವೀಡಿಯೊ..| ಪಹಲ್ಗಾಮ್‌ ಹತ್ಯಾಕಾಂಡ ; ನಮಗೇನೂ ಮಾಡ್ಬೇಡಿ…ಸೈನಿಕರನ್ನು ಉಗ್ರರೆಂದು ಭಾವಿಸಿ ಕೈಮುಗಿದು ಅಂಗಲಾಚಿ ಬೇಡಿದ ಮಹಿಳೆ

ಶ್ರೀನಗರ : ದಕ್ಷಿಣ ಕಾಶ್ಮೀರದ ( ಪಹಲ್ಗಾಮ್‌ನ (Pahalgam) ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ಭಯೋತ್ಪಾದಕ ದಾಳಿಯಿಂದ ಭಯಭೀತರಾಗಿರುವ ಪ್ರವಾಸಿಗರನ್ನು ರಕ್ಷಿಸಲು ತೆರಳಿದ ಭಾರತೀಯ ಸೈನಿಕರನ್ನು ನೋಡಿ ಭಯೋತ್ಪಾದಕರೆಂದು ಭಾವಿಸಿ ಮಹಿಳೆಯರು ಮತ್ತು ಮಕ್ಕಳು ಪ್ರಾಣಭಿಕ್ಷೆ ಬೇಡಿದ ಹೃದಯವಿದ್ರಾವಕ ಘಟನೆ ನಡೆದಿದೆ.
ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral video) ಆಗಿದೆ. ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕರ ಭೀಕರ ಹತ್ಯಾಕಾಂಡದಿಂದ ಬದುಕುಳಿದ ಭಯಭೀತರಾದ ಜನರಿಗೆ ಭಾರತೀಯ ಸೇನಾ ಸಿಬ್ಬಂದಿ ಸಾಂತ್ವನ ಹೇಳುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಮಂಗಳವಾರ ನಡೆದ ಭಯೋತ್ಪಾದಕ ದಾಳಿಯಲ್ಲಿ ಸುಮಾರು ೨೮ ಮಂದಿ ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ.

ಭಯೋತ್ಪಾದಕರ ದಾಳಿಯಿಂದ ಪಾರಾಗಿರುವ ಪ್ರವಾಸಿಗರನ್ನು ರಕ್ಷಿಸಲು ತಕ್ಷಣ ಭಾರತೀಯ ಸೇನೆ ಹೋದಾಗ, ಇವರ ಮುಂದೆ ಭಯಭೀತರಾದ ಪ್ರವಾಸಿಗರು ಇವರನ್ನು ಭಯೋತ್ಪಾದಕರೆಂದು ಭಾವಿಸಿ ನಮ್ಮ ಮಕ್ಕಳಿಗೆ ಏನೂ ಮಾಡಬೇಡಿ ಎಂದು ಅಂಗಲಾಚುತ್ತಿದ್ದರು. ಭಯೋತ್ಪಾದಕರ ದಾಳಿಯಿಂದ ಭಯಭೀತರಾಗಿರುವವರಿಗೆ ಭಾರತೀಯ ಸೇನೆ ಸಾಂತ್ವನ ಹೇಳುತ್ತಿರುವ ವೀಡಿಯೊ ಈಗ ವೈರಲ್ ಆಗಿದೆ. ಇದರಲ್ಲಿ ಭಾರತೀಯ ಸೇನಾ ಸಿಬ್ಬಂದಿ, ಹೆದರಬೇಡಿ, ನಾವು ಭಾರತದ ಸೈನಿಕರು, ನಿಮ್ಮನ್ನು ರಕ್ಷಿಸಲು ನಾವು ಬಂದಿದ್ದೇವೆ ಎಂದು ಭಾರತೀಯ ಸೇನೆಯವರು ಸಮಾಧಾನಪಡಿಸುತ್ತಿರುವುದನ್ನು ಕಾಣಬಹುದು.
ಉಗ್ರರ ದಾಳಿಯನ್ನು ಕಣ್ಣಾರೆ ಕಂಡಿರುವ ಕೆಲವರು ಮಂಗಳವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಹುಲ್ಲುಗಾವಲು ಬೈಸರನ್‌ನಲ್ಲಿ ಸೇನಾ ಸಿಬ್ಬಂದಿ ಡ್ರೆಸ್‌ನಲ್ಲಿ ಬಂದ ನಾಲ್ವರು ಉಗ್ರರು ಪ್ರವಾಸಿಗರ ಮೇಲೆ ಗುಂಡು ಹಾರಿಸಿದರು.

ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ. ಇದರಲ್ಲಿ ಹಲವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ. ಕಾಶ್ಮೀರದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ದಾಳಿ ಇದಾಗಿದೆ. ಈ ರೀತಿಯ ಕೊನೆಯ ಘಟನೆ 2024ರ ಮೇ ತಿಂಗಳಲ್ಲಿ ಪಹಲ್ಗಾಮ್‌ನಲ್ಲಿ ನಡೆದಿತ್ತು. ಅಲ್ಲಿ ಇಬ್ಬರು ಪ್ರವಾಸಿಗರು ಗಾಯಗೊಂಡಿದ್ದರು.
ಈ ವಿಡಿಯೋದಲ್ಲಿ ಒಬ್ಬ ವ್ಯಕ್ತಿ ಭಾರತೀಯ ಸೇನಾ ಸಿಬ್ಬಂದಿಗೆ ಉಗ್ರರು ಹತ್ತು ವಿಭಿನ್ನ ದಿಕ್ಕುಗಳಿಂದ ಗುಂಡು ಹಾರಿಸಿದ್ದಾರೆ ಎಂದು ಹೇಳುವುದನ್ನು ಕೇಳಬಹುದು. ಸೈನಿಕರು ಭಯಭೀತರಾದ ಪ್ರವಾಸಿಗರ ರಕ್ಷಣೆಗಾಗಿ ತೆರಳಿದಾಗ ಕೆಲವರು ಭಯದಿಂದ ಕಿರುಚಿದ್ದಾರೆ. ಭಾರತೀಯ ಸೈನಿಕರು ಸಂತ್ರಸ್ತರಿಗೆ ಧೈರ್ಯ ತುಂಬುತ್ತ ಅವರ ರಕ್ಷಣಾ ಕಾರ್ಯ ನಡೆಸಿದರು.
ಈ ಸಂದರ್ಭದಲ್ಲಿ ಒಬ್ಬ ಮಹಿಳೆ ದಾಳಿಯ ಸಮಯದಲ್ಲಿ ತನ್ನ ಪತಿಯನ್ನು ಗುಂಡಿಕ್ಕಿ ಕೊಂದಿದ್ದಾರೆ ಎಂದು ಹೇಳುವುದನ್ನು ಕೂಡ ಕೇಳಬಹುದು. ದಾಳಿಯ ಪ್ರಾಥಮಿಕ ತನಿಖೆಯಲ್ಲಿ ಬೈಸರನ್ ಹುಲ್ಲುಗಾವಲಿನಲ್ಲಿ ನಾಲ್ವರು ಭಯೋತ್ಪಾದಕರು ಅಮೆರಿಕನ್ ನಿರ್ಮಿತ ಎಂ4 ಕಾರ್ಬೈನ್‌ಗಳು ಮತ್ತು ಎಕೆ -47 ರೈಫಲ್‌ಗಳನ್ನು ಬಳಸಿ ಗುಂಡು ಹಾರಿಸಿದ್ದಾರೆ ಎನ್ನಲಾಗಿದೆ. ಅಧಿಕಾರಿಗಳು ಸ್ಥಳದಿಂದ 50 ರಿಂದ 70 ಬಳಸಲಾದ ಗುಂಡುಗಳ ಕವಚಗಳನ್ನು ವಶಪಡಿಸಿಕೊಂಡಿದ್ದಾರೆ. ದಾಳಿಕೋರರಲ್ಲಿ ಇಬ್ಬರನ್ನು ಗುರುತಿಸಲಾಗಿದೆ.

ಪ್ರಮುಖ ಸುದ್ದಿ :-   ವೀಡಿಯೊ.. |ಹಾಸ್ಯನಟ ಕಪಿಲ್ ಶರ್ಮಾ ಕೆಫೆ ಮೇಲೆ ಒಂಬತ್ತು ಗುಂಡು ಹಾರಿಸಿದ ಖಲಿಸ್ತಾನಿ ಭಯೋತ್ಪಾದಕ

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement