ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಒಂದು ಅಸಮಾಮಾನ್ಯ ಘಟನೆಯೊಂದು ಗಮನ ಸೆಳೆದಿದ್ದು, ಚಿರತೆಯೊಂದು ರಾತ್ರಿಯ ವೇಳೆ ಬೀದಿ ನಾಯಿಯ ಮೇಲೆ ದಾಳಿ ಮಾಡಿದ ನಂತರ ಧೈರ್ಯಶಾಲಿ ನಾಯಿಗಳ ಗುಂಪು ಚಿರತೆ ಮೇಲೆ ಪ್ರತಿ ದಾಳಿ ನಡೆಸಿ ಅದನ್ನು ಓಡಿಸಿದೆ.
ಸೋಮವಾರ ಬೆಳಗಿನ ಜಾವ 2 ಗಂಟೆ ಸುಮಾರಿಗೆ ನಡೆದ ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದನ್ನು ವ್ಯಾಪಕವಾಗಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ.
ಶಾಂತವಾಗಿದ್ದ ಬೀದಿಗೆ ಪ್ರವೇಶಿಸಿದ ಚಿರತೆ ಮಲಗಿದ್ದ ನಾಯಿಯ ಮೇಲೆ ಹಠಾತ್ ದಾಳಿ ನಡೆಸಿತು. ಮಲಗಿದ್ದ ನಾಯಿಯ ಕುತ್ತಿಗೆ ಹಿಡಿದ ಚಿರತೆ ಅದನ್ನು ಹೊತ್ತೊಯ್ಯಲು ಪ್ರಯತ್ನಿಸುತ್ತಿತ್ತು. ಆದರೆ ತಿರುಗಿಬಿದ್ದ ನಾಯಿಯ ಕೂಗಾಟ ಕೇಳಿ ಮಲಗಿದ್ದ ಇತರ ನಾಯಿಗಳನ್ನು ಎಚ್ಚರಿಸಿತು.
ಚಿರತೆಯು ನಾಯಿಗೆ ಗಂಭಿರವಾಗಿ ಹಾನಿ ಮಾಡಿ ಹೊತ್ತೊಯ್ಯುವ ಮೊದಲು ಹಲವಾರು ಇತರ ಬೀದಿ ನಾಯಿಗಳು ಚಿರತೆ ಮೇಲೆ ಏಕಾಏಕಿ ದಾಳಿ ಮಾಡಿದವು. ಇದನ್ನು ನಿರೀಕ್ಷಿಸಿದ ಚಿರತೆ ಅವುಗಳ ವಿರುದ್ಧ ಹೋರಾಡಲು ಪ್ರಯತ್ನಿಸಿತು. ಆದರೆ ನಾಯಿಗಳ ಹಿಂಡು ಚಿರತೆಯ ಮೇಲೆ ದಾಳಿ ಮಾಡಿ ಕಚ್ಚಿ ಎಳೆಯಲು ಪ್ರಾರಂಭಿಸಿದ ನಂತರ ಚಿರತೆ ಅಲ್ಲಿಂದ ಪರಾರಿಯಾಗಬೇಕಾಯಿತು.
ನಾಯಿಗಳ ಸಾಮೂಹಿಕ ಧೈರ್ಯವು ಚಿರತೆಯನ್ನು ಬೆಚ್ಚಿಬೀಳಿಸಿದ್ದಲ್ಲದೆ, ಅವುಗಳ ಸ್ನೇಹಿತನ ಜೀವವನ್ನು ಉಳಿಸಿತು.
ಒಂದು ಮನಮುಟ್ಟುವ ವನ್ಯಜೀವಿಗಳ ಈ ಘಟನೆಯು ಸ್ನೇಹದ ಹೃದಯಸ್ಪರ್ಶಿ ಕಥೆಯಾಗಿ ಬದಲಾಯಿತು.ಈ ವಿಡಿಯೋ ಅಂದಿನಿಂದ ವೈರಲ್ ಆಗಿದೆ. ಗಾಯಗೊಂಡ ನಾಯಿಯ ಆರೋಗ್ಯದ ಬಗ್ಗೆ ಇನ್ನೂ ಯಾವುದೇ ನವೀಕರಣ ಇಲ್ಲ.
ನಿಮ್ಮ ಕಾಮೆಂಟ್ ಬರೆಯಿರಿ