ನವದೆಹಲಿ: ಪಾಕಿಸ್ತಾನಿ ಆಪರೇಟಿವ್ಸ್ ಗಳಿಗೆ ಸೂಕ್ಷ್ಮ ಮಾಹಿತಿಯನ್ನು ರವಾನಿಸಿದ ಆರೋಪದ ಮೇಲೆ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಸೇರಿದಂತೆ ಆರು ಭಾರತೀಯ ಪ್ರಜೆಗಳನ್ನು ಬಂಧಿಸಲಾಗಿದೆ. ಈ ಜಾಲವು ಹರಿಯಾಣ ಮತ್ತು ಪಂಜಾಬಿನಾದ್ಯಂತ ವ್ಯಾಪಿಸಿದ್ದು, ಪ್ರಮುಖ ಕಾರ್ಯಕರ್ತರು ಏಜೆಂಟ್‌ಗಳು, ಹಣಕಾಸು ಮಾರ್ಗದರ್ಶಕರು ಮತ್ತು ಮಾಹಿತಿದಾರರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಹೇಳಲಾಗಿದೆ.
ಆರೋಪಿಗಳಲ್ಲಿ ಹರಿಯಾಣ ಮೂಲದ ಟ್ರಾವೆಲ್ ಬ್ಲಾಗರ್ ಜ್ಯೋತಿ ಮಲ್ಹೋತ್ರಾ ಕೂಡ ಒಬ್ಬರು, ಅವರು “ಟ್ರಾವೆಲ್ ವಿತ್ ಜೋ” ಎಂಬ ಯೂಟ್ಯೂಬ್ ಚಾನೆಲ್ ಅನ್ನು ನಡೆಸುತ್ತಿದ್ದರು. ಕಮಿಷನ್ ಏಜೆಂಟ್‌ಗಳ ಮೂಲಕ ವೀಸಾ ಪಡೆದ ನಂತರ ಅವರು 2023 ರಲ್ಲಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂದು ಅಧಿಕಾರಿಗಳು ಬಹಿರಂಗಪಡಿಸಿದ್ದಾರೆ. ಅವರ ಪ್ರವಾಸದ ಸಮಯದಲ್ಲಿ, ಅವರು ನವದೆಹಲಿಯ ಪಾಕಿಸ್ತಾನ ಹೈಕಮಿಷನ್‌ನ ಸಿಬ್ಬಂದಿ ಸದಸ್ಯ ಎಹ್ಸಾನ್-ಉರ್-ರಹೀಮ್ ಅಲಿಯಾಸ್ ಡ್ಯಾನಿಶ್ ಅವರೊಂದಿಗೆ ನಿಕಟ ಸಂಬಂಧ ಹೊಂದಿದ್ದಳು. ಸರ್ಕಾರದಿಂದ ಪರ್ಸನಾ ನಾನ್ ಗ್ರಾಟಾ ಎಂದು ಘೋಷಿಸಲ್ಪಟ್ಟ ಮತ್ತು ಮೇ 13ರಂದು ಹೊರಹಾಕಲ್ಪಟ್ಟ ಡ್ಯಾನಿಶ್ ಅನೇಕ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರಿಗೆ (PIOs) ಜ್ಯೋತಿಯನ್ನು ಪರಿಚಯಿಸಿದ್ದಾರೆ ಎಂದು ಆರೋಪಿಸಲಾಗಿದೆ.
ವಾಟ್ಸಾಪ್, ಟೆಲಿಗ್ರಾಮ್ ಮತ್ತು ಸ್ನ್ಯಾಪ್‌ಚಾಟ್‌ನಂತಹ ಎನ್‌ಕ್ರಿಪ್ಟ್ ಮಾಡಲಾದ ಪ್ಲಾಟ್‌ಫಾರ್ಮ್‌ಗಳಲ್ಲಿ, ಶಕೀರ್ ಅಲಿಯಾಸ್ ರಾಣಾ ಶಹಬಾಜ್ ಸೇರಿದಂತೆ ಅನೇಕ ಆಪರೇಟಿವ್ಸ್‌ಗಳ ಜೊತೆ ಜ್ಯೋತಿ ಸಂಪರ್ಕದಲ್ಲಿದ್ದಳು, ಅವಳ ಸಂಖ್ಯೆಯನ್ನು ಅವರು “ಜಾಟ್ ರಾಂಧವಾ” ಎಂದು ಉಳಿಸಿಕೊಂಡಿದ್ದಾರೆ.
ಭಾರತದ ಸ್ಥಳಗಳ ಬಗ್ಗೆ ಸೂಕ್ಷ್ಮ ಮಾಹಿತಿಯನ್ನು ಹಂಚಿಕೊಂಡಿದ್ದ ಆಕೆ, ಸಾಮಾಜಿಕ ಮಾಧ್ಯಮದಲ್ಲಿ ಪಾಕಿಸ್ತಾನದ ಬಗ್ಗೆ ಸಕಾರಾತ್ಮಕ ಚಿತ್ರಣವನ್ನು ಬಿಂಬಿಸಲು ಸಕ್ರಿಯವಾಗಿ ಬಳಸಿಕೊಂಡಿದ್ದಳು ಎಂದು ಆರೋಪಿಸಲಾಗಿದೆ. ತನಿಖಾಧಿಕಾರಿಗಳು ಹೇಳುವಂತೆ, ಆಕೆ ಪಾಕಿಸ್ತಾನಿ ಗುಪ್ತಚರ ಕಾರ್ಯಕರ್ತರ (PIOs) ಜೊತೆ ಆತ್ಮೀಯ ಸಂಬಂಧವನ್ನು ಹೊಂದಿದ್ದಳು ಮತ್ತು ಆತನೊಂದಿಗೆ ಇಂಡೋನೇಷ್ಯಾದ ಬಾಲಿಗೆ ಪ್ರಯಾಣ ಬೆಳೆಸಿದ್ದಳು. .
ಜ್ಯೋತಿ ವಿರುದ್ಧ ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್) ಸೆಕ್ಷನ್ 152 ಮತ್ತು ಅಧಿಕೃತ ರಹಸ್ಯ ಕಾಯ್ದೆ, 1923 ರ ಸೆಕ್ಷನ್ 3, 4 ಮತ್ತು 5 ರ ಅಡಿಯಲ್ಲಿ ಆರೋಪ ಹೊರಿಸಲಾಗಿದೆ. ಲಿಖಿತ ತಪ್ಪೊಪ್ಪಿಗೆಯನ್ನು ಪಡೆಯಲಾಗಿದೆ ಮತ್ತು ಪ್ರಕರಣವನ್ನು ಹಿಸಾರ್‌ನ ಆರ್ಥಿಕ ಅಪರಾಧಗಳ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ.
ಜ್ಯೋತಿಯಲ್ಲದೆ, ಮತ್ತೊಬ್ಬ ಪ್ರಮುಖ ಆರೋಪಿ ಪಂಜಾಬ್‌ನ ಮಲೇರ್‌ಕೋಟ್ಲಾದ 32 ವರ್ಷದ ವಿಧವೆ ಗುಜಲಾ. ಫೆಬ್ರವರಿ 27, 2025 ರಂದು, ಗುಜಲಾ ವೀಸಾಕ್ಕಾಗಿ ಅರ್ಜಿ ಸಲ್ಲಿಸಲು ನವದೆಹಲಿಯಲ್ಲಿರುವ ಪಾಕಿಸ್ತಾನ ಹೈಕಮಿಷನ್‌ಗೆ ಭೇಟಿ ನೀಡಿದ್ದಳು.
ಅಲ್ಲಿ, ಅವಳು ಡ್ಯಾನಿಶ್‌ನನ್ನು ಭೇಟಿಯಾಗಿ ನಿಯಮಿತವಾಗಿ ಮಾತನಾಡಲು ಪ್ರಾರಂಭಿಸಿದಳು. ವಾಟ್ಸಾಪ್‌ನಿಂದ ಟೆಲಿಗ್ರಾಮ್‌ಗೆ ಬದಲಾಯಿಸಲು ಡ್ಯಾನಿಶ್ ಅವಳನ್ನು ಮನವೊಲಿಸಿದ್ದ. ಯಾಕೆಂದರೆ ಅದು ಸುರಕ್ಷಿತ ಎಂದು ಹೇಳಿಕೊಂಡಿದ್ದ. ಮದುವೆಯ ಭರವಸೆ ನೀಡುವ ಮೂಲಕ, ಚಾಟ್‌ಗಳು ಮತ್ತು ವೀಡಿಯೊ ಕರೆಗಳ ಮೂಲಕ ಪ್ರಣಯ ಸಂಬಂಧವನ್ನು ಪ್ರಾರಂಭಿಸುವ ಮೂಲಕ ಅವನು ಅವಳ ನಂಬಿಕೆಯನ್ನು ಗಳಿಸಿದ್ದ ಎಂದು ವರದಿಗಳು ತಿಳಿಸಿವೆ.
ಕಾಲಕ್ರಮೇಣ, ಡ್ಯಾನಿಶ್ ಗುಜಲಾಗೆ ಹಣವನ್ನು ಕಳುಹಿಸಲು ಪ್ರಾರಂಭಿಸಿದ್ದ. ಮಾರ್ಚ್ 7 ರಂದು ಪಾವತಿ ಅಪ್ಲಿಕೇಶನ್, ಫೋನ್‌ಪೇ ಮೂಲಕ 10,000 ರೂ. ಮತ್ತು ಮಾರ್ಚ್ 23 ರಂದು ಮತ್ತೊಂದು ಪಾವತಿ ಅಪ್ಲಿಕೇಶನ್, ಗೂಗಲ್ ಪೇ ಮೂಲಕ 20,000 ರೂ, ನಂತರ ಆತ 10,000 ರೂ.ಗಳನ್ನು ನಿರ್ದಿಷ್ಟವಾಗಿ ಸ್ವೀಕರಿಸುವವರಿಗೆ 1,800 ರೂ., 899 ರೂ., 699 ರೂ., ಮತ್ತು 3,000 ರೂ. ತಿರುಗಿಸಲು ಸೂಚಿಸಿದ್ದ.
ಏಪ್ರಿಲ್ 23 ರಂದು, ಗುಜಲಾ ತನ್ನ ಸ್ನೇಹಿತೆ ಮಲೇರ್ಕೋಟ್ಲಾದ ಮತ್ತೊಬ್ಬ ವಿಧವೆ ಬಾನು ನಸ್ರೀನಾ ಜೊತೆ ಪಾಕಿಸ್ತಾನ ಹೈಕಮಿಷನ್‌ಗೆ ತೆರಳಿದ್ದಳು. ಮರುದಿನ ನೀಡಲಾದ ಅವರ ವೀಸಾವನ್ನು ಡ್ಯಾನಿಶ್ ಮತ್ತೆ ಸುಗಮಗೊಳಿಸಿ ವ್ಯವಸ್ಥೆ ಮಾಡಿಸಿದ್ದ.
ಪ್ರಕರಣದಲ್ಲಿ ಬಂಧಿಸಲ್ಪಟ್ಟ ಇತರರಲ್ಲಿ ಮಲೇರ್ಕೋಟ್ಲಾದ ಯಮೀನ್ ಮೊಹಮ್ಮದ್ ಸೇರಿದ್ದಾನೆ, ಆತ ಹಣಕಾಸಿನ ವ್ಯವಹಾರಗಳು ಮತ್ತು ವೀಸಾ-ಸಂಬಂಧಿತ ಚಟುವಟಿಕೆಗಳಲ್ಲಿ ಡ್ಯಾನಿಶ್ ಜೊತೆ ಸಹಕರಿಸಿದ್ದ; ಪಾಕಿಸ್ತಾನಕ್ಕೆ ತೀರ್ಥಯಾತ್ರೆಯ ಸಮಯದಲ್ಲಿ ನೇಮಕಗೊಂಡ ಮತ್ತು ಪಟಿಯಾಲ ಕಂಟೋನ್ಮೆಂಟ್‌ನ ವೀಡಿಯೊಗಳನ್ನು ಕಳುಹಿಸಿದ ಸಿಖ್ ವಿದ್ಯಾರ್ಥಿ ಹರಿಯಾಣದ ಕೈಥಾಲ್‌ನ ದೇವಿಂದರ್ ಸಿಂಗ್ ಧಿಲ್ಲನ್; ಮತ್ತು ಹರಿಯಾಣದ ನುಹ್‌ನ ಅರ್ಮಾನ್ ಪಾಕಿಸ್ತಾನ ಗುಪ್ತಚರ ಅಧಿಕಾರಿಗಳ ಸೂಚನೆಯ ಮೇರೆಗೆ ಭಾರತೀಯ ಸಿಮ್ ಕಾರ್ಡ್‌ಗಳನ್ನು ಪೂರೈಸಿದ, ಹಣವನ್ನು ವರ್ಗಾಯಿಸಿದ ಮತ್ತು ಡಿಫೆನ್ಸ್ ಎಕ್ಸ್‌ಪೋ 2025 ಗೆ ಭೇಟಿ ನೀಡಿದ್ದ ಎಂದು ಹೇಳಲಾಗಿದೆ.
ಧಾರ್ಮಿಕ ಮತ್ತು ಸಾಮಾಜಿಕ ಹಿನ್ನೆಲೆಯ ದುರ್ಬಲ ವ್ಯಕ್ತಿಗಳನ್ನು ಭಾವನಾತ್ಮಕ ಸಂಪರ್ಕಗಳು, ಹಣದ ಉಡುಗೊರೆಗಳು ಮತ್ತು ವಿವಾಹದ ನಕಲಿ ಭರವಸೆಗಳ ಮೂಲಕ ಕುಶಲತೆಯಿಂದ ಬಳಸಲಾಗುತ್ತಿದ್ದ ಇದು ಪಾಕಿಸ್ತಾನದ ದೊಡ್ಡ ಬೇಹುಗಾರಿಕೆ ಜಾಲದ ಭಾಗವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆರೋಪಿಗಳು ತಮ್ಮ ಪಾತ್ರಗಳನ್ನು ಒಪ್ಪಿಕೊಂಡಿದ್ದಾರೆ ಮತ್ತು ಹೆಚ್ಚಿನ ತನಿಖೆಗಳು ನಡೆಯುತ್ತಿವೆ ಎಂದು ವರದಿಯಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ