ಸಿಇಟಿ ಫಲಿತಾಂಶ ಫಲಿತಾಂಶ ಪ್ರಕಟ: ಎಂಜಿನಿಯರಿಂಗ್ ವಿಭಾಗದಲ್ಲಿ ಭವೇಶ ರಾಜ್ಯಕ್ಕೆ ಪ್ರಥಮ

ಬೆಂಗಳೂರು: ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ನಡೆಸಿದ್ದ ಸಿಇಟಿ ಫಲಿತಾಂಶ (CET Result) ಇಂದು (ಮೇ 24) ಪ್ರಕಟವಾಗಿದೆ.
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಉನ್ನತ ಶಿಕ್ಷಣ ಸಚಿವ ಡಾ. ಎಂ ಸಿ ಸುಧಾಕರ ಸುದ್ದಿಗೋಷ್ಠಿ ನಡೆಸಿ ಫಲಿತಾಂಶ ಪ್ರಕಟಿಸಿದ್ದಾರೆ. ಶನಿವಾರ ಮಧ್ಯಾಹ್ನ 2 ಗಂಟೆ ನಂತರ ಇಲಾಖೆಯ ವೆಬ್ ಸೈಟ್‌ನಲ್ಲಿ ಫಲಿತಾಂಶ ಲಭ್ಯವಾಗಲಿದೆ ಎಂದು ಕೆಇಎ ತಿಳಿಸಿದೆ. ಕರ್ನಾಟಕ ಪದವಿಪೂರ್ವ ಸಾಮಾನ್ಯ ಪ್ರವೇಶ ಪರೀಕ್ಷೆಗೆ ಹಾಜರಾದ ಅಭ್ಯರ್ಥಿಗಳು ಕೆಇಎ (KEA) ಅಧಿಕೃತ ವೆಬ್‌ಸೈಟ್ kea.kar.nic.in ಅಥವಾ cetonline.karnataka.gov.in ನಲ್ಲಿ ತಮ್ಮ ಫಲಿತಾಂಶವನ್ನು ಮಧ್ಯಾಹ್ನ 2 ಗಂಟೆಯ ನಂತರ ಪರಿಶೀಲಿಸಬಹುದು.
ಇಂಜಿನಿಯರಿಂಗ್ ಸೇರಿದಂತೆ ವಿವಿಧ ವೃತ್ತಿ ಶಿಕ್ಷಣ ಕೋರ್ಸ್​ಗಳ ಪ್ರವೇಶಕ್ಕೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಏಪ್ರಿಲ್ 17, 17ರಂದು ರಾಜ್ಯಾದ್ಯಂತ 775 ಕೇಂದ್ರಗಳಲ್ಲಿ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ನಡೆಸಿತ್ತು. ಏಪ್ರಿಲ್ 16, 17ರಂದು ರಾಜ್ಯಾದ್ಯಂತ ಸಾಮಾನ್ಯ ಪ್ರವೇಶ ಪರೀಕ್ಷೆ ನಡೆಸಲಾಗಿತ್ತು. ಸಿಇಟಿ ಪರೀಕ್ಷೆಗೆ 3.30 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಕೆ ಮಾಡಿದ್ದರು. ಆ ಪೈಕಿ 3,11,000 ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹಾಜರಾಗಿದ್ದರು.

ಎಂಜಿನಿಯರಿಂಗ್​​
1.ಭವೇಶ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
2.ಸಾತ್ವಿಕ್​​​ ಬಿರಾದಾರ- ಶ್ರೀ ಚೈತನ್ಯ ಟೆಕ್ನೋ ಸ್ಕೂಲ್​ ಉತ್ತರಹಳ್ಳಿ
3.ದಿನೇಶ್ ಅರುಣಾಚಲಂ​​ – ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
ಕೃಷಿ
1. ಅಕ್ಷಯ​​ ಎಂ. – ಆಳ್ವಾಸ್​​ ಕಾಲೇಜ್​ ಮೂಡುಬಿದ್ರೆ
2. ಶಶಿ ಪಂಡಿತ – ಎಕ್ಸ್​​ಪರ್ಟ್​​ ಪಿಯು ಕಾಲೇಜ್ ಮಂಗಳೂರು​
3. ಸುಚಿತ್​​ ಪಿ. ಪ್ರಸಾದ – ಎಕ್ಸ್​​ಪರ್ಟ್​​ ಪಿಯು ಕಾಲೇಜ್ ಮಂಗಳೂರು
ಪಶುಸಂಗೋಪನೆ
1. ಹರೀಶ ರಾಜ್​ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ – ಎನ್‌ಪಿಎಸ್‌-ಎಚ್​​ಎಸ್​ ಆರ್​ ಲೇಔಟ್​​
3. ಸಫಲ್​​.ಎಸ್​​. ಶೆಟ್ಟಿ – ಎಕ್ಸ್​​ಪರ್ಟ್​​ ಪಿಯು ಕಾಲೇಜ್​ ಮಂಗಳೂರು
ಡಿ- ಫಾರ್ಮ 
1. ಆತ್ರೇಯ – ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​- ಎಚ್​​ಎಸ್​ ಆರ್​ ಲೇಔಟ್​​
2. ಭವೇಶ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
3. ಹರೀಶ​ ರಾಜ್​ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
ನರ್ಸಿಂಗ್​​
1. ಹರೀಶ​ ರಾಜ್​ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ
2. ಆತ್ರೇಯ – ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​. ಎಚ್​​ಎಸ್​ ಆರ್​ ಲೇಔಟ್​​
3. ಸಫಲ್​​.ಎಸ್​​. ಶೆಟ್ಟಿ – ಎಕ್ಸ್​​ಪರ್ಟ್​​ ಪಿಯು ಕಾಲೇಜ್​ ಮಂಗಳೂರು
ಬಿ- ಫಾರ್ಮ 
1. ಆತ್ರೇಯ – ನ್ಯಾಷನಲ್​ ಪಬ್ಲಿಕ್​ ಸ್ಕೂಲ್​​​. ಎಚ್​​ಎಸ್​ ಆರ್​ ಲೇಔಟ್​​
2. ಭವೇಶ ಜಯಂತಿ – ಚೈತನ್ಯ ಟೆಕ್ನೋ ಸ್ಕೂಲ್​​ ಮಾರತಹಳ್ಳಿ
3. ಹರೀಶ​ ರಾಜ್​ ಡಿ.ವಿ – ನಾರಾಯಣ ಇ ಟೆಕ್ನೋ ಯಲಹಂಕ

ಪ್ರಮುಖ ಸುದ್ದಿ :-   ರೈಲ್ವೆ ಹಳಿಯ ಸಮೀಪವೇ ಮರಿಗೆ ಜನ್ಮ ನೀಡಿದ ಕಾಡಾನೆ ; 2 ತಾಸು ನಿಂತ ರೈಲು | ಹೃದಯಸ್ಪರ್ಶಿ ವೀಡಿಯೊ ವೀಕ್ಷಿಸಿ

ಸಿಇಟಿ ಫಲಿತಾಂಶ ಚೆಕ್​ ಮಾಡುವ ವಿಧಾನ
ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಅಧಿಕೃತ ಪೋರ್ಟಲ್ https://cetonline.karnataka.gov.in/kea ಗೆ ಹೋಗಬೇಕು
ಮುಖಪುಟದಲ್ಲಿ “KCET ಫಲಿತಾಂಶಗಳು 2024” ಎಂದು ಲೇಬಲ್ ಮಾಡಲಾದ ಲಿಂಕ್ ಅನ್ನು ಹುಡುಕಿ ಮತ್ತು ಕ್ಲಿಕ್ ಮಾಡಬೇಕು
ಗೊತ್ತುಪಡಿಸಿದ ಕ್ಷೇತ್ರಗಳಲ್ಲಿ ನಿಮ್ಮ ಹೆಸರಿನ ಮೊದಲ ನಾಲ್ಕು ಅಕ್ಷರಗಳೊಂದಿಗೆ ನಿಮ್ಮ KCET ನೋಂದಣಿ ಸಂಖ್ಯೆಯನ್ನು ನಮೂದಿಸಬೇಕು.
ಮುಂದುವರೆಯಲು “Submit” ಮೇಲೆ ಕ್ಲಿಕ್ ಮಾಡಬೇಕು
KCET ಫಲಿತಾಂಶವನ್ನು ಪರದೆಯ ಮೇಲೆ ಬರುತ್ತದೆ.
ಈ ಫಲಿತಾಂಶವನ್ನು ಡೌನ್‌ಲೋಡ್‌ ಮಾಡಿಕೊಂಡು, ಪ್ರಿಂಟ್‌ಔಟ್‌ ತೆಗೆದಿಟ್ಟುಕೊಳ್ಳಬಹುದು.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement