4 ರಾಜ್ಯಗಳ ವಿಧಾನಸಭಾ ಉಪಚುನಾವಣೆ ಘೋಷಣೆ

ನವದೆಹಲಿ: ಗುಜರಾತ್, ಕೇರಳ, ಪಂಜಾಬ್ ಮತ್ತು ಪಶ್ಚಿಮ ಬಂಗಾಳದ ಐದು ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕವನ್ನು ಭಾರತೀಯ ಚುನಾವಣಾ ಆಯೋಗ (ಇಸಿಐ) ಪ್ರಕಟಿಸಿದೆ.
ಐದು ಕ್ಷೇತ್ರಗಳಿಗೆ ಜೂನ್ 19 ರಂದು ಮತದಾನ ನಡೆಯಲಿದ್ದು, ಮತ ಎಣಿಕೆ ಜೂನ್ 23 ರಂದು ನಡೆಯಲಿದೆ. ಗುಜರಾತಿನ ಕಾಡಿ (ಮೀಸಲು ಸ್ಥಾನ) ಮತ್ತು ವಿಸಾವದರ್ ಕ್ಷೇತ್ರಗಳು , ಕೇರಳದ ನಿಲಂಬೂರ್ ಕ್ಷೇತ್ರ, ಪಂಜಾಬ್‌ನ ಲುಧಿಯಾನ ಪಶ್ಚಿಮ ಕ್ಷೇತ್ರ ಹಾಗೂ ಪಶ್ಚಿಮ ಬಂಗಾಳದ ಕಾಳಿಗಂಜ್‌ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ.
ಚುನಾವಣಾ ಆಯೋಗವು ಈ ಮಾಹಿತಿಯನ್ನು ತನ್ನ ಹ್ಯಾಂಡಲ್‌ನಲ್ಲಿರುವ ಎಕ್ಸ್‌ನಲ್ಲಿ ಭಾನುವಾರ ಹಂಚಿಕೊಂಡಿದೆ.
ಗೆಜೆಟ್ ಅಧಿಸೂಚನೆ ಹೊರಡಿಸುವ ದಿನಾಂಕ ಮೇ 26 ಆಗಿದ್ದು, ನಾಮಪತ್ರಗಳನ್ನು ಸಲ್ಲಿಸಲು ಕೊನೆಯ ದಿನಾಂಕ ಜೂನ್ 2, ಮತ್ತು ನಾಮಪತ್ರಗಳ ಪರಿಶೀಲನೆಗೆ ದಿನಾಂಕ ಜೂನ್ 3 ನಿಗದಿ ಮಾಡಲಾಗಿದೆ. ನಾಮಪತ್ರ ಹಿಂಪಡೆಯಲು ಜೂನ್ 5 ಕೊನೆಯ ದಿನಾಂಕ. ಚುನಾವಣೆ ಪೂರ್ಣಗೊಳ್ಳುವ ದಿನಾಂಕ ಜೂನ್ 25 ಎಂದು ಚುನಾವಣಾ ಆಯೋಗ ತಿಳಿಸಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement