‘ಹಾವಿನ ಚರ್ಮ’ದ ತರಹದ ಚರ್ಮ ಇರುವ ಈ ಹುಡುಗ ಪ್ರತಿ ಗಂಟೆಗೊಮ್ಮೆ ಸ್ನಾನ ಮಾಡಲೇಬೇಕು…: ಅದು ಯಾಕಂದ್ರೆ…

ಪ್ರಭು ಪ್ರಸಾದ ಎಂಬ ಆಂಧ್ರದ ಯುವಕ ಅಪರೂಪದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಕೇವಲ 21 ವರ್ಷ ವಯಸ್ಸಿನ ಆಂಧ್ರಪ್ರದೇಶದ ಅನಕಪಲ್ಲಿಯ ಈ ಯುವಕ ಅಪರೂಪದ ಮತ್ತು ತೀವ್ರ ತರಹದ ಚರ್ಮದ ಕಾಯಿಲೆಯಿಂದ ಬಳಲುತ್ತಿದ್ದಾರೆ. ಅದು ಅವರ ಚರ್ಮವನ್ನು ಪ್ರತಿದಿನ ಸಿಪ್ಪೆ ಸುಲಿಯುವಂತೆ ಮಾಡುತ್ತದೆ, ಅವರ ಚರ್ಮವು ಹಾವಿನಂತೆ ಕಾಣುತ್ತದೆ. ಚರ್ಮ ಅವರಿಗೆ ವಿಪರೀತ ನೋವು ಹಾಗೂ ಉರಿಯನ್ನುಂಟು ಮಾಡುತ್ತದೆ. ಹೀಗಾಗಿ ಅವರು ಸೂರ್ಯನ ಬೆಳಕಿನಿಂದ ಉಂಟಾಗುವ ಸುಡುವಿಕೆಯನ್ನುಹೋಗಲಾಡಿಸಲು ಪ್ರತಿ ಗಂಟೆಗೊಮ್ಮೆ ಸ್ನಾನ ಮಾಡಬೇಕಾಗುತ್ತದೆ ಎಂದು ನ್ಯೂಸ್‌ 18 ವರದಿ ಮಾಡಿದೆ.
ಸ್ಥಳೀಯವಾಗಿ ‘ಸಾಂಪ್‌ ಪ್ರಸಾದ’ ಎಂದು ಕೆಲವರು ಅವರನ್ನು ಕರೆದರೂ ಅದು ತಪ್ಪು ತಿಳುವಳಿಕೆಯಿಂದ ಬಂದ ಅಡ್ಡಹೆಸರು, ಪ್ರಭು ಪ್ರಸಾದ ತೀವ್ರವಾದ ಸಾಮಾಜಿಕ ಅಂತರವನ್ನು ಎದುರಿಸಿದ್ದಾರೆ. ಇದರ ಹೊರತಾಗಿಯೂ ಉತ್ತಮ ಭವಿಷ್ಯ ನಿರ್ಮಿಸುವ ತನ್ನ ದೃಢಸಂಕಲ್ಪದಲ್ಲಿ ಅವರು ಅಚಲರಾಗಿದ್ದಾರೆ. ಅವರ ವಿಧವೆ ತಾಯಿ ಕೂಲಿಯಾಗಿ ಕೆಲಸ ಮಾಡುತ್ತಿದ್ದಾರೆ.

ಅವರ ತಂದೆ ಅವರು ಚಿಕ್ಕವರಿದ್ದಾಗ ನಿಧನರಾದರು. ಅಂದಿನಿಂದ, ಅವರ ತಾಯಿ ಈ ಚರ್ಮದ ರೋಗವನ್ನು ಗುಣಪಡಿಸಲು ಪ್ರಭು ಪ್ರಸಾದ ಅವರನ್ನು ಹಲವಾರು ಸರ್ಕಾರಿ ಆಸ್ಪತ್ರೆಗಳಿಗೆ ಕರೆದೊಯ್ದಿದ್ದಾರೆ. ಆದರೂ, ವೈದ್ಯಕೀಯ ವೃತ್ತಿಪರರಿಗೆ ಅವರ ಸ್ಥಿತಿಯನ್ನು ಪತ್ತೆಹಚ್ಚಲು ಅಥವಾ ಚಿಕಿತ್ಸೆ ನೀಡಲು ಸಾಧ್ಯವಾಗಿಲ್ಲ. ಕೆಲವರು ಇಂತಹದ್ದನ್ನು ಯಾವತ್ತೂ ನೋಡಿಲ್ಲ ಎಂದು ಹೇಳಿದ್ದರೆ ಇತರರು ಇದಕ್ಕೆ ತಮಗೆ ಗೊತ್ತಿಲ್ಲ ಎಂದು ಹೇಳುತ್ತಾರೆ. ಆದರೆ ಹಣಕಾಸಿನ ತೊಂದರೆಯಿಂದಾಗಿ ತಾಯಿಗೆ ಇವರನ್ನು ಹೆಸರಾಂತ ಖಾಸಗಿ ಆಸ್ಪತ್ರೆಗಳಿಗೆ ಕರೆದೊಯ್ಯಲು ಸಾಧ್ಯವಾಗಿಲ್ಲ.
ತಮ್ಮ ಚರ್ಮದ ಕಾರಣದಿಂದ ಪ್ರಭು ಪ್ರಸಾದ ಸಮಾಜದಲ್ಲಿ ಒಂಟಿತನದ ಜೀವನವನ್ನು ನಡೆಸಬೇಕಾಗಿದೆ. ಜನರು ಅವರಿಂದ ಅಂತರವನ್ನು ಕಾಯ್ದುಕೊಳ್ಳುತ್ತಾರೆ ಮತ್ತು ಸ್ನೇಹಿತರು ಅಪರೂಪ. ಆದರೂ, ಅವರು ಆಶಾವಾದಿಗಳಾಗಿಯೇ ಇದ್ದಾರೆ. ಅವರು ಶಿಕ್ಷಣದ ಕನಸು ಕಾಣುತ್ತಾರೆ, ಅಪಾರ ಧೈರ್ಯವನ್ನು ಹೊಂದಿರುವ ಅವರು ಏನನ್ನಾದರೂ ಸಾಧಿಸಬೇಕು ಎಂಬ ಹಂಬಲ ಹೊಂದಿದ್ದಾರೆ.

ಪ್ರಮುಖ ಸುದ್ದಿ :-   ಬೆಂಗಳೂರು ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತ ದುರಂತ : ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದ ಹೈಕೋರ್ಟ್‌

3.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement