ಹೈದರಾಬಾದ್ : ಬುಡಕಟ್ಟು ಸಮುದಾಯವನ್ನು ಉಲ್ಲೇಖಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಒಂದು ತಿಂಗಳ ನಂತರ, ನಟ ವಿಜಯ ದೇವರಕೊಂಡ ವಿರುದ್ಧ ಎಸ್ಸಿ/ಎಸ್ಟಿ (ದೌರ್ಜನ್ಯ ತಡೆ) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಸೈಬರಾಬಾದ್ನ ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಸೈದಾಬಾದ್ ನಿವಾಸಿ ಮತ್ತು ಬುಡಕಟ್ಟು ಸಮುದಾಯಗಳ ಜಂಟಿ ಕ್ರಿಯಾ ಸಮಿತಿಯ ರಾಜ್ಯಾಧ್ಯಕ್ಷ ನೆನವತ್ ಅಶೋಕಕುಮಾಕ ನಾಯಕ್ ಅವರು ದೂರು ದಾಖಲಿಸಿದ್ದಾರೆ. ಸೂರ್ಯ ಅವರ ‘ರೆಟ್ರೊ’ ಚಿತ್ರದ ಪೂರ್ವ-ಬಿಡುಗಡೆ ಕಾರ್ಯಕ್ರಮದ ಸಂದರ್ಭದಲ್ಲಿ ವಿಜಯ ದೇವರಕೊಂಡ ಅವರು ಮಾಡಿದ ಹೇಳಿಕೆಗೆ ಅವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ, ದೇವರಕೊಂಡ ಅವರು ಕಾಶ್ಮೀರದಲ್ಲಿ ಪಹಲ್ಗಾಂವ್ ಭಯೋತ್ಪಾದಕ ದಾಳಿಯನ್ನು ಉಲ್ಲೇಖಿಸಿ, “ಕಾಶ್ಮೀರದಲ್ಲಿ ನಡೆಯುತ್ತಿರುವ ಘಟನೆಗಳಿಗೆ ಪರಿಹಾರವೆಂದರೆ ಅವರಿಗೆ (ಭಯೋತ್ಪಾದಕರಿಗೆ) ಶಿಕ್ಷಣ ನೀಡುವುದು ಮತ್ತು ಅವರು ತಲೆ ಕೆಡಿಸದಂತೆ ನೋಡಿಕೊಳ್ಳುವುದು. ಅವರು ಏನು ಸಾಧಿಸುತ್ತಾರೆ? ಕಾಶ್ಮೀರ ಭಾರತಕ್ಕೆ ಸೇರಿದ್ದು, ಕಾಶ್ಮೀರಿಗಳು ನಮ್ಮವರು ಎಂದು ಹೇಳಿದ್ದರು. “ಭಾರತ ಪಾಕಿಸ್ತಾನದ ಮೇಲೆ ದಾಳಿ ಮಾಡುವ ಅಗತ್ಯವಿಲ್ಲ, ಏಕೆಂದರೆ ಪಾಕಿಸ್ತಾನಿಗಳು ಸ್ವತಃ ತಮ್ಮ ಸರ್ಕಾರದಿಂದ ಬೇಸತ್ತಿದ್ದಾರೆ ಮತ್ತು ಇದು ಮುಂದುವರಿದರೆ ಅವರ ಮೇಲೆ ದಾಳಿ ಮಾಡುತ್ತಾರೆ. ಅವರು 500 ವರ್ಷಗಳ ಹಿಂದೆ ಬುಡಕಟ್ಟು ಜನಾಂಗದವರು ಯುದ್ಧ ಮಾಡಿದ ರೀತಿಯಲ್ಲಿ ಪಾಕಿಸ್ತಾನಿಗಳು ಸಾಮಾನ್ಯ ಜ್ಞಾನವಿಲ್ಲದವರಂತೆ ವರ್ತಿಸುತ್ತಿದ್ದಾರೆ ಎಂದು ಅವರು ಹೇಳಿದ್ದರು ಎಂದು ಹೇಳಲಾಗಿದೆ.
ನಂತರ ವಿಜಯ ದೇವರುಕೊಂಡ ಸಾರ್ವಜನಿಕವಾಗಿ ಕ್ಷಮೆಯಾಚಿಸಿದರು. ತಮ್ಮ ಹೇಳಿಕೆಗಳು ಯಾವುದೇ ಸಮುದಾಯವನ್ನು ಗುರಿಯಾಗಿಸುವ ಉದ್ದೇಶವನ್ನು ಹೊಂದಿರಲಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. “ಯಾವುದೇ ಸಮುದಾಯವನ್ನು, ವಿಶೇಷವಾಗಿ ನಮ್ಮ ಪರಿಶಿಷ್ಟ ಪಂಗಡಗಳನ್ನು ನೋಯಿಸುವ ಅಥವಾ ಗುರಿಯಾಗಿಸುವ ಉದ್ದೇಶವಿರಲಿಲ್ಲ, ಅವರನ್ನು ನಾನು ಬಹಳ ಗೌರವಿಸುತ್ತೇನೆ ಮತ್ತು ನಮ್ಮ ದೇಶದ ಅವಿಭಾಜ್ಯ ಅಂಗವೆಂದು ಪರಿಗಣಿಸುತ್ತೇನೆ” ಎಂದು ಅವರು ಬರೆದಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ