ಕ್ಯಾಂಪಸ್‌ ಶೌಚಾಲಯದಲ್ಲಿ ಮಹಿಳಾ ಉದ್ಯೋಗಿಗಳ ವೀಡಿಯೊ ಚಿತ್ರೀಕರಣ ; ಇನ್ಫೋಸಿಸ್‌ ಉದ್ಯೋಗಿಯ ಬಂಧನ

ಬೆಂಗಳೂರು :  ಕ್ಯಾಂಪಸ್‌ನ ಶೌಚಾಲಯದಲ್ಲಿ ಮಹಿಳಾ ಸಹೋದ್ಯೋಗಿಗಳ ಅಶ್ಲೀಲ ವೀಡಿಯೊಗಳನ್ನು ರಹಸ್ಯವಾಗಿ ರೆಕಾರ್ಡ್ ಮಾಡಿದ ಆರೋಪದ ಮೇಲೆ ಟೆಕ್ ಕಂಪನಿ ಇನ್ಫೋಸಿಸ್‌ನ ಉದ್ಯೋಗಿಯನ್ನು ಬಂಧಿಸಲಾಗಿದೆ.
ಆರೋಪಿಯನ್ನು ಸ್ವಪ್ನಿಲ್ ನಾಗೇಶ ಮಾಲಿ (28) ಎಂದು ಗುರುತಿಸಲಾಗಿದೆ, ಈತ ಆಂಧ್ರಪ್ರದೇಶದವರಾಗಿದ್ದು, ಇನ್ಫೋಸಿಸ್‌ನ ಹೆಲಿಕ್ಸ್ ಘಟಕದಲ್ಲಿ ಹಿರಿಯ ಅಸೋಸಿಯೇಟ್ ಸಲಹೆಗಾರನಾಗಿದ್ದಾನೆ ಎನ್ನಲಾಗಿದೆ.
ಪೊಲೀಸ್ ವರದಿಯ ಪ್ರಕಾರ, ಜೂನ್ 30 ರಂದು ಬೆಳಿಗ್ಗೆ 11 ಗಂಟೆ ಸುಮಾರಿಗೆ ಇನ್ಫೋಸಿಸ್ ಕ್ಯಾಂಪಸ್‌ನ ಐಕ್ಯೂಇ ವಿಭಾಗದ ಕಟ್ಟಡ 38 ರಲ್ಲಿ ಈ ಘಟನೆ ನಡೆದಿದೆ. ಹೈಬ್ರಿಡ್ ಮಾದರಿಯಲ್ಲಿ ಕೆಲಸ ಮಾಡುವ ಅವರು ಆ ದಿನ ತಮ್ಮ ವೇಳಾಪಟ್ಟಿಯ ಪ್ರಕಾರ ಕಚೇರಿಯಲ್ಲಿ ಹಾಜರಿದ್ದರು.

ಕ್ಯಾಂಪಸ್‌ನ ಮಹಿಳಾ ಉದ್ಯೋಗಿ ಶೌಚಾಲಯದಲ್ಲಿದ್ದಾಗ ಎದುರಿನ ಬಾಗಿಲಿನಲ್ಲಿ ನೆರಳನ್ನು ಗಮನಿಸಿದಾಗ, ಯಾರೋ ತನ್ನನ್ನು ವೀಡಿಯೊ ಮಾಡುತ್ತಿದ್ದಾರೆಂದು ಅನುಮಾನಗೊಂಡರು. ಅನುಮಾನಾಸ್ಪದ ನೆರಳು ಮತ್ತು ಅದರ ಚಲನೆ ಕಂಡರು. ನಂತರ ಅವರು ಟಾಯ್ಲೆಟ್ ಸೀಟಿನ ಮೇಲೆ ಎದ್ದು ನಿಂತರು. ಆಗ ಮುಂದಿನ ಸ್ಟಾಲ್‌ನಲ್ಲಿ ಶೌಚಾಲಯದ ಮೇಲೆ ನಿಂತು, ಮೊಬೈಲ್ ಫೋನ್ ಹಿಡಿದು ತನ್ನನ್ನು ರೆಕಾರ್ಡ್ ಮಾಡುತ್ತಿರುವ ವ್ಯಕ್ತಿಯನ್ನು ನೋಡಿ ಆಘಾತಕ್ಕೊಳಗಾದರು. ಮಹಿಳೆ ತಕ್ಷಣ ಕಿರುಚಿದಳು, ಗಾಬರಿಗೊಂಡು ಭಯಭೀತರಾದ ಅವರು ಬೇಗನೆ ಶೌಚಾಲಯದಿಂದ ಹೊರಬಂದು ಸಹಾಯಕ್ಕಾಗಿ ಕೂಗುತ್ತಾ ಸಹೋದ್ಯೋಗಿಗಳಿಗೆ ತಿಳಿಸಿದರು. ಸಿಬ್ಬಂದಿಗಳು ಸ್ಥಳಕ್ಕೆ ಧಾವಿಸಿ ಬಂದಾಗ ಆರೋಪಿ ಸ್ವಪ್ನಿಲ್ ಓಡಿಹೋಗಲು ಪ್ರಯತ್ನಿಸಿದ್ದಾನೆ. ಆದರೆ ಎಚ್‌.ಆರ್‌. ಸಿಬ್ಬಂದಿ ತಡೆದರು.

ಪ್ರಮುಖ ಸುದ್ದಿ :-   ಐಪಿಎಸ್ ಅಧಿಕಾರಿ ಅಮಾನತು ರದ್ದು: ಸಿಎಟಿ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರದಿಂದ ಹೈಕೋರ್ಟ್‌ನಲ್ಲಿ ಮೇಲ್ಮನವಿ

ಸ್ವಪ್ನಿಲ್‌ ಈ ಬಗ್ಗೆ ಪದೇಪದೇ ಕ್ಷಮೆಯಾಚಿಸಿದರೂ ಇನ್ಫೋಸಿಸ್ ಮಾನವ ಸಂಪನ್ಮೂಲ ಸಿಬ್ಬಂದಿ ಈ ವಿಷಯವನ್ನು ತನಿಖೆ ಮಾಡಿದರು ಮತ್ತು ಆತನ ಫೋನ್‌ನಲ್ಲಿ ವಿವಿಧ ಮಹಿಳೆಯರ 30 ಕ್ಕೂ ಹೆಚ್ಚು ವೀಡಿಯೊಗಳು ಕಂಡುಬಂದಿವೆ ಎಂದು ಆರೋಪಿಸಲಾಗಿದೆ.
ತೊಂದರೆಗೀಡಾದ ಮಹಿಳಾ ಉದ್ಯೋಗಿ ಮಂಗಳವಾರ ಎಲೆಕ್ಟ್ರಾನಿಕ್ ಸಿಟಿ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ದಾಖಲಿಸಿದ್ದು, ಸ್ವಪ್ನಿಲ್ ನನ್ನು ಬಂಧಿಸಲಾಗಿದೆ. ಅಳಿಸಲಾದ ಫೈಲ್‌ಗಳನ್ನು ರಿಟ್ರೀವ್‌ ಮಾಡಲು ಮತ್ತು ಯಾವುದೇ ದುಷ್ಕೃತ್ಯದ ಬಗ್ಗೆ ಪರಿಶೀಲಿಸಲು ಫೋನ್ ಅನ್ನು ಈಗ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement